ಕೆಂಪು ಕಲ್ಲು ಅಲಭ್ಯತೆ | ಕೆಲಸ ಕಳಕೊಂಡಿರುವ ಕಟ್ಟಡ ಕಾರ್ಮಿಕರು | ನೆರವಿಗೆ ಧಾವಿಸಬೇಕೆಂದು ಕಾರ್ಮಿಕ ಸಚಿವರಿಗೆ ಮನವಿ

June 29, 2025
11:14 PM

ದ ಕ ಜಿಲ್ಲೆಯಲ್ಲಿ ನಡೆದ ಸರಣಿ ಕೊಲೆಗಳ ನಂತರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಕಾನೂನಾತ್ಮಕ ವ್ಯವಹಾರಗಳಿಗೆ ಮಾತ್ರ ಅವಕಾಶ ಹಾಗೂ ಕೆಂಪು ಕಲ್ಲುಗಣಿಗಾರಿಕೆ ಮಾಡುವ ಜಮೀನಿಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಗೊಂದಲ ಏರ್ಪಟ್ಟ ಕಾರಣದಿಂದಾಗಿ ಕೆಂಪು ಕಲ್ಲು ಗಣಿಗಾರಿಕೆಗೆ ಹಾಗೂ ಸಾಗಾಟಕ್ಕೆ ಸಮಸ್ಯೆ ಎದುರಾಗಿರುತ್ತದೆ. ಈ ಕಾರಣದಿಂದ ಕಟ್ಟಡ ಕೆಲಸಗಾರರು ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿರುತ್ತಾರೆ . ಈಗಾಗಲೇ ಅತಿಯಾದ ಮಳೆಯ ಕಾರಣಕ್ಕೆ ಕೆಲಸ ಮಾಡಲು ಕಷ್ಟಪಡುತ್ತಿರುವ ಕಟ್ಟಡ ಕಾರ್ಮಿಕರಿಗೆ ಇದೀಗ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದ್ದು ಕೂಡಲೇ ಕೆಂಪು ಕಲ್ಲು ಗಣಿಗಾರಿಕೆಯನ್ನು ಆಶ್ರಯಿಸಿ ಬದುಕು ನಡೆಸುತ್ತಿರುವ ಸಂತ್ರಸ್ತ ಕಾರ್ಮಿಕರ ನೆರವಿಗೆ ತುರ್ತಾಗಿ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಸರಕಾರದ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸದಸ್ಯರಾದ ಜಾನಿ ಕೆ.ಪಿ ಅವರು ಬೆಂಗಳೂರಿನ ವಿಕಾಸಸೌದದಲ್ಲಿ ಕಾರ್ಮಿಕ ಸಚಿವರನ್ನು ಬೇಟಿ ಮಾಡಿ ಮನವಿ ಸಲ್ಲಿಸಿದರು. ಈ  ಬಗ್ಗೆ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಪೂರಕವಾಗಿ ಸ್ಪಂದಿಸಿದ್ದು ಕೂಡಲೇ ಸಂಬಂಧಪಟ್ಟ ಸಚಿವರುಗಳಲ್ಲಿ ಮತ್ತು ಅಧಿಕಾರಿಗಳಲ್ಲಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 09-07-2025 | ಇಂದು ಸಾಮಾನ್ಯ ಮಳೆ | ಜುಲೈ 16 ರಿಂದ ಮುಂಗಾರು ದುರ್ಬಲಗೊಳ್ಳಬಹುದಾ ? |
July 9, 2025
1:47 PM
by: ಸಾಯಿಶೇಖರ್ ಕರಿಕಳ
ಜೋಯಿಡಾದ ಗ್ರಾಮದಲ್ಲಿ ಸೇತುವೆ ಕುಸಿತ | ತಾತ್ಕಾಲಿಕ ಕಾಲು ಸಂಕ ನಿರ್ಮಾಣ |
July 9, 2025
10:57 AM
by: The Rural Mirror ಸುದ್ದಿಜಾಲ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶಿಖರ್ ಬಿ.ಕೆ.
July 9, 2025
7:44 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕ್ರಿಶನ್ ಎಸ್ ಭಟ್
July 9, 2025
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group