ಸುದ್ದಿಗಳು

#Electricity | ಒಂದೇ ದಿನಕ್ಕೆ ಬೇರೆ ಬೇರೆ ವಿದ್ಯುತ್ ದರ ಅನ್ವಯ | ಕೇಂದ್ರದಿಂದ ಹೊಸ ಮಾದರಿ ಕರೆಂಟ್ ಬಿಲ್ ವ್ಯವಸ್ಥೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬೇಸಿಗೆ ಕಾಲದಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ,  ಕರೆಂಟ್ ಬಿಲ್ #ElectricityBill ದರ ಏರಿಕೆ ಆಗಾಗ..!, ರಾಜ್ಯದಲ್ಲಿ ಗೃಹಜ್ಯೋತಿ ಉಚಿತ ವಿದ್ಯುತ್ ವ್ಯವಸ್ಥೆ ಜಾರಿಗೆ ಬರುವುದಾಗಿ ಹೇಳಿದರು ಅದರಿಂದ ಯಾರಿಗೆ..? ಎಷ್ಟು..? ಪ್ರಯೋಜನ ಇದೆಯೋ ಇಲ್ಲವೋ..?. ಆದರೆ ವಿದ್ಯುತ್‍ ದರವಂತೂ ಏರಿಕೆ ಕಂಡಿದೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಕೇಂದ್ರ ಸರ್ಕಾರ 2020ರ ವಿದ್ಯುತ್ ಗ್ರಾಹಕರ ಹಕ್ಕು ನಿಯಮಕ್ಕೆ ತಿದ್ದುಪಡಿ ತಂದಿದ್ದು ಅದಕ್ಕೆ ಅನುಮೋದನೆ ಕೂಡ ಸಿಕ್ಕಿದೆ. ವಿದ್ಯುತ್ ಬಳಕೆ ವಿಚಾರದಲ್ಲಿ ದಿನದ ಬೇರೆ ಬೇರೆ ಸಮಯಕ್ಕೆ ಬೇರೆ ಬೇರೆ ದರ ವಿಧಿಸುವಂತೆ ನಿಯಮ ಬದಲಾಯಿಸಲಾಗಿದೆ.

Advertisement
ವಿದ್ಯುತ್ ಲೋಡಿಂಗ್ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ ಹೊಸ ಉಪಾಯ ಹುಡುಕಿದೆ. ಅದರಂತೆ ದಿನದಲ್ಲಿ ಬೇರೆ ಬೇರೆ ಸಮಯದಲ್ಲಿ ವಿದ್ಯುತ್ ಬಳಕೆಗೆ ಬೇರೆ ಬೇರೆ ದರ ಅನ್ವಯ ಮಾಡುವಂತ ವ್ಯವಸ್ಥೆಯನ್ನು ಕೇಂದ್ರ ಜಾರಿ ಮಾಡುತ್ತಿದೆ. ಇದರಲ್ಲಿ ನೀವು ಬೆಳಗಿನ ನಿರ್ದಿಷ್ಟ ಅವಧಿಯಲ್ಲಿ ಬಳಸುವ ವಿದ್ಯುತ್​ಗೆ ಬೇರೆ ದರ ಇರುತ್ತದೆ. ಬೆಳಗ್ಗೆ ಅಥವಾ ಸಂಜೆ ಬಳಸುವ ವಿದ್ಯುತ್​ಗೆ ಬೇರೆ ದರ ಇರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜೂನ್ 23, ಶುಕ್ರವಾರದಂದು ವಿದ್ಯುತ್ ಗ್ರಾಹಕರ ಹಕ್ಕು ನಿಯಮ 2020ಕ್ಕೆ ತಿದ್ದುಪಡಿಗೆ ಅನುಮೋದಿಸಿದೆ. ಇದರಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯೂ ಒಳಗೊಂಡಿದೆ.

ಸೋಲಾರ್ ಅವರ್ ಅಥವಾ ಸೌರ ಗಂಟೆ ಎಂದು ಕರೆಯಲಾಗುವ ಅವಧಿಯಲ್ಲಿ ವಿದ್ಯುತ್ ದರ ಶೇ. 10ರಿಂದ 20ರಷ್ಟು ಕಡಿಮೆ ಇರುತ್ತದೆ. ಪೀಕ್ ಅವರ್ ಅಥವಾ ಉಚ್ಛ್ರಾಯ ಅವಧಿಯಲ್ಲಿ ಶೇ. 10ರಿಂದ ಶೇ. 20ರಷ್ಟು ಹೆಚ್ಚು ದರ ಇರಲಿದೆ. ಈ ಅವಧಿಯನ್ನು ರಾಜ್ಯ ವಿದ್ಯುತ್ ಪ್ರಾಧಿಕಾರಗಳು ನಿರ್ಧರಿಸುತ್ತವೆ.

ಹೊಸ ಮಾದರಿಯ ವಿದ್ಯುತ್ ದರ ವ್ಯವಸ್ಥೆಯು ಎಲ್ಲೆಡೆ ಸ್ಮಾರ್ಟ್​ಮೀಟರ್ ಅಳವಡಿಕೆ ಪೂರ್ಣಗೊಂಡ ಬಳಿಕ ಅನ್ವಯ ಆಗಬಹುದು. ಸರ್ಕಾರ 2024 ಏಪ್ರಿಲ್ 1ರಿಂದ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ಗುರಿ ಹೊಂದಿದೆ. ಮೊದಲಿಗೆ 10 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯುತ್ ಬೇಡಿಕೆ ಇರುವ ವಾಣಿಜ್ಯ ಮತ್ತು ಔದ್ಯಮಿಕ ಗ್ರಾಹಕರಿಗೆ ಇದು ಅನ್ವಯ ಆಗಲಿದೆ. ಒಂದು ವರ್ಷದ ಬಳಿಕ, 2025 ಏಪ್ರಿಲ್ 1ರಿಂದ ಕೃಷಿ ಗ್ರಾಹಕರನ್ನು ಹೊರತುಪಡಿಸಿ ಉಳಿದೆಲ್ಲಾ ಗೃಹಬಳಕೆ ವಿದ್ಯುತ್ ಗ್ರಾಹಕರಿಗೆ ಇದು ಜಾರಿಯಾಗುವ ನಿರೀಕ್ಷೆ ಇದೆ.

ಸೌರ ಗಂಟೆಯಲ್ಲಿ ಯಾಕೆ ವಿದ್ಯುತ್ ದರ ಕಡಿಮೆ? : ಪೀಕ್ ಅವಧಿ, ಸೌರ ಅವಧಿ ಮತ್ತು ಸಹಜ ಅವಧಿ ಹೀಗೆ ವಿದ್ಯುತ್ ದರಗಳನ್ನು ವಿಭಾಗಿಸುವುದರಿಂದ ಗ್ರಾಹಕರು ವಿದ್ಯುತ್ ಬಳಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಭಾಯಿಸಬಹುದು. ಇದರಿಂದ ಗ್ರಾಹಕರಿಗೂ ಲಾಭ, ವಿದ್ಯುತ್ ಸರಬರಾಜು ವ್ಯವಸ್ಥೆಗೂ ಹೊರೆ ತಗ್ಗುತ್ತದೆ ಎಂಬುದು ಸರ್ಕಾರದ ಎಣಿಕೆ.

ಸೌರ ಗಂಟೆಗಳೆಂದರೆ ಅದು ಸೂರ್ಯನ ಬಿಸಿಲು ಇರುವ ಕಾಲಾವಧಿ. ಈ ಸಂದರ್ಭದಲ್ಲಿ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿರುತ್ತದೆ. ಇದರ ಬೆಲೆ ಕಡಿಮೆ ಇರುವುದರಿಂದ ವಿದ್ಯುತ್ ಬಳಕೆದಾರರಿಗೆ ಈ ಅವಧಿಯಲ್ಲಿನ ಬಳಕೆಗೆ ದರ ಕಡಿಮೆಗೊಳಿಸಲು ಉದ್ದೇಶಿಸಲಾಗಿದೆ. ಇನ್ನು ದಿನದ ಬೇರೆ ಕಾಲಾವಧಿಯಲ್ಲಿ ಜಲವಿದ್ಯುತ್ ಇತ್ಯಾದಿ ಮೂಲದಿಂದ ತಯಾರಾಗುವ ವಿದ್ಯುತ್ ಅನ್ನು ಬಳಸಲಾಗುತ್ತದೆ. ಇವು ಹೆಚ್ಚಿನ ಬೆಲೆ ಹೊಂದಿರುವುದರಿಂದ ಇದರ ಬಳಕೆಗೂ ಹೆಚ್ಚಿನ ದರ ಅನ್ವಯ ಮಾಡುವುದು ಸರ್ಕಾರದ ತಂತ್ರ.

Advertisement
/**/
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಪುತ್ತೂರು ಪ್ರಕರಣ | ಶಾಸಕ ಅಶೋಕ್‌ ಕುಮಾರ್‌ ರೈ ಅವರ ಬರಹ ಇದು… | ನಾವೀಗ ಆಕೆಗೆ ನೀಡಬೇಕಾಗಿರುವುದು ಧೈರ್ಯ ಮತ್ತು ಸ್ಥೈರ್ಯ

ಪುತ್ತೂರಿನ ಪ್ರಕರಣವೊಂದು ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ನಡುವೆ ರಾಜಕೀಯವಾಗಿಯೂ ಇದೊಂದು ಚರ್ಚೆ, ಆರೋಪಗಳಿಗೂ…

32 minutes ago

ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ

ಭಾರತದ ರಾಸಾಯನಿಕ ವಲಯವು  ಒಟ್ಟು ದೇಶೀಯ ಉತ್ಪನ್ನ ಕೊಡುಗೆಯಲ್ಲಿ ಗಮನಾರ್ಹ ಪಾತ್ರ ವಹಿಸುತ್ತಿದೆ.…

3 hours ago

ಬುಧ ಮತ್ತು ಶನಿ ಕಾಟದಿಂದ ಈ ರಾಶಿಯವರು ಸ್ವಲ್ಪ ಜೋಪಾನವಾಗಿರಬೇಕು

ರಾಯರ ಪರಮಭಕ್ತರದ ಜ್ಯೋತಿಷಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ 9535156490

3 hours ago

ಅಮರನಾಥ ಯಾತ್ರೆಗೆ ಚಾಲನೆ | ಮೊದಲ ಗುಂಪಿನ 5,880 ಯಾತ್ರಿಗಳು ಪ್ರಯಾಣ

ಹಿಂದೂಗಳ ಪವಿತ್ರ ಅಮರನಾಥ ಯಾತ್ರೆಗೆ, ಜಮ್ಮುವಿನ ಭಗವತಿ ನಗರದಲ್ಲಿ  ಜಮ್ಮು ಮತ್ತು ಕಾಶ್ಮೀರದ…

11 hours ago

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ | ಉತ್ತರಕನ್ನಡ, ಕೊಡಗಿನಲ್ಲಿ ಸಮಸ್ಯೆ

ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಮಡಿಕೇರಿ ಸೇರಿದಂತೆ ಕೊಡಗು…

11 hours ago

ಕೇರಳದಲ್ಲಿ 1 ಲಕ್ಷ ಹೆಕ್ಟೇರ್‌ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಇಲ್ಲ..!

ಕೇರಳದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್‌ ಪ್ರದೇಶದ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಸ್ಥಗಿತವಾಗಿದೆ. 

19 hours ago