Advertisement
ಸುದ್ದಿಗಳು

ಕೇರಳದಲ್ಲಿ 1 ಲಕ್ಷ ಹೆಕ್ಟೇರ್‌ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಇಲ್ಲ..!

Share

ಕೇರಳವು ಭಾರತದ ಅತಿದೊಡ್ಡ ರಬ್ಬರ್ ಉತ್ಪಾದಿಸುವ ರಾಜ್ಯವಾಗಿದ್ದಾರೆ. ರಬ್ಬರ್‌ ಬೆಳೆಗಾರರು ಈ ಬಾರಿಯೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಾರಿ ಟ್ಯಾಪಿಂಗ್‌ ಕೊರತೆ ಹಾಗೂ ಬೇಗನೆ ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ ಹೊದಿಕೆ ಹಾಕಿಸಲಾಗದೆ ಸಂಕಷ್ಟ ಅನುಭವಿಸಿದ್ದಾರೆ. ಕೇರಳದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್‌ ಪ್ರದೇಶದ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಸ್ಥಗಿತವಾಗಿದೆ.

ರಬ್ಬರ್‌ ಉದ್ಯಮವು ಇಂದು ಸಾಕಷ್ಟು ವಿಸ್ತರಣೆಯಾಗುತ್ತಿದೆ, ಬೆಳೆಯುತ್ತಿದೆ. ದೇಶೀಯ ರಬ್ಬರ್‌ ಬೆಳೆಗಾರರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಇನ್ನೊಂದು ಕಡೆ ಈಶಾನ್ಯ ರಾಜ್ಯಗಳಲ್ಲೂ ರಬ್ಬರ್‌ ಬೆಳೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ದೇಶದ ಒಟ್ಟು ರಬ್ಬರ್ ಉತ್ಪಾದನೆಯಲ್ಲಿ 90% ಕ್ಕಿಂತ ಹೆಚ್ಚು ಕೊಡುಗೆ ಕೇರಳದಿಂದ ನೀಡಲಾಗುತ್ತಿದೆ. ಕೇರಳದಲ್ಲಿ  ದೊಡ್ಡ ಪ್ಲಾಂಟೇಶನ್‌ನಿಂದ ತೊಡಗಿ ಸಣ್ಣ ರಬ್ಬರ್‌ ಹಿಡುವಳಿದಾರರವರೆಗೂ ಕೃಷಿಕರು ಇದ್ದಾರೆ.  ಕಳೆದ ಎರಡು ವರ್ಷಗಳಿಂದ ರಬ್ಬರ್‌ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೇಸಗೆಯಲ್ಲಿ ಹವಾಮಾನ ವೈಪರೀತ್ಯದ ಕಾರಣದಿಂದ ರಬ್ಬರ್‌ ಹಾಲಿನ ಇಳುವರಿಯಲ್ಲಿ ಕೊರತೆ ಕಂಡುಬಂದಿತ್ತು. ಅದಾದ ಬಳಿಕ ಮಳೆಗಾಲದಲ್ಲೂ ಹಾಲಿನ ಇಳುವರಿ ಕಡಿಮೆಯಾಗಿತ್ತು. ಈ ಬಾರಿ ಮುಂಗಾರು ಬೇಗನೆ ಆರಂಭವಾದ್ದರಿಂದ ಹಲವು ಕಡೆ ಪ್ಲಾಸ್ಟಿಕ್‌ ಹೊದಿಕೆ ಹಾಕಲು ಸಾಧ್ಯವಾಗಲಿಲ್ಲ.  ಅದರ ಜೊತೆಗೆ ವಯಸ್ಸಾದ ಮರಗಳು ಮತ್ತು ಟ್ಯಾಪರ್‌ಗಳ ಕೊರತೆಯ ಕಾರಣದಿಂದ ಕೇರಳದಲ್ಲಿ ಹೆಚ್ಚಿನ ಪ್ರಮಾಣದ ರಬ್ಬರ್ ತೋಟಗಳು  ಟ್ಯಾಪಿಂಗ್‌ ಮಾಡದೆ ಉಳಿದಿವೆ. ಆಟೋಮೋಟಿವ್ ಟೈರ್ ತಯಾರಕರ ಸಂಘ (ಎಟಿಎಂಎ) ಪ್ರಕಾರ, ಕೇರಳದಲ್ಲಿ ಸುಮಾರು 100,000 ಹೆಕ್ಟೇರ್ ರಬ್ಬರ್ ತೋಟಗಳು ರಬ್ಬರ್‌ ಟ್ಯಾಪಿಂಗ್‌ ಮಾಡದೇ ಉಳಿದಿವೆ.  ಇದಕ್ಕೆ ಪ್ರಮುಖ ಕಾರಣ ಹಳೆಯದಾಗಿರುವ ರಬ್ಬರ್ ಮರಗಳು,‌ ರಬ್ಬರ್‌ ತೋಟದ ಮಾಲೀಕರು ವಿದೇಶಗಳಿಗೆ ವಲಸೆ ಹೋಗಿರುವುದು ಮತ್ತು ರಬ್ಬರ್ ಟ್ಯಾಪರ್‌ಗಳ ಕೊರತೆ ಪ್ರಮುಖ ಕಾರಣವಾಗಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಈಗ ಕರ್ನಾಟಕ ಸೇರಿದಂತೆ ದೇಶದ ವಿವಿದೆಡೆ   ಸುಮಾರು 2,00,000 ಹೆಕ್ಟೇರ್‌  ರಬ್ಬರ್ ಕೃಷಿ ಪ್ರದೇಶವು ಟ್ಯಾಪಿಂಗ್‌ ಮಾಡದೇ ಉಳಿದುಕೊಂಡಿದೆ.

ದೇಶವು  ವಾರ್ಷಿಕವಾಗಿ ರಬ್ಬರ್  ಬೇಡಿಕೆಯ 40-45% ಆಮದು ಮಾಡಿಕೊಳ್ಳುತ್ತಿದೆ, ಅಂದರೆ ಸುಮಾರು 1.4 ಮಿಲಿಯನ್ ಟನ್‌ಗಳೆಂದು ಅಂದಾಜಿಸಲಾಗಿದೆ ಎಂದು ಆರು ಪ್ರಮುಖ ಭಾರತೀಯ ಟೈರ್ ಕಂಪನಿಗಳ ಪ್ರತಿನಿಧಿ ಸಂಸ್ಥೆಯ ಅಧಿಕಾರಿಗಳು ಹೇಳುತ್ತಾರೆ. ಈ ಕೊರತೆಯನ್ನು ನೀಗಿಸಲು ನಾಲ್ಕು ಪ್ರಮುಖ ಎಟಿಎಂಎ ಸದಸ್ಯ ಕಂಪನಿಗಳಿಂದ 1,100 ಕೋಟಿ ರೂ.ಗಳ ಬೆಂಬಲದೊಂದಿಗೆ ರಬ್ಬರ್‌ ತೋಟಗಳ ವಿಸ್ತರಣೆಗೆ ಮುಂದಾಗಿದ್ದವು. ಸುಮಾರು 2,  00,000 ಹೆಕ್ಟೇರ್‌ಗಳಷ್ಟು ವಿಸ್ತರಿಸುವ ಮತ್ತು ಮೂಲಸೌಕರ್ಯ ಒದಗಿಸುವ ಗುರಿಯನ್ನು ಹೊಂದಿದೆ. ಈ ಪ್ರಯತ್ನಗಳ ಹೊರತಾಗಿಯೂ, ಭವಿಷ್ಯದಲ್ಲಿ ರಬ್ಬರ್ ಬೇಡಿಕೆಯನ್ನು ಪೂರೈಸಲು ಹೆಚ್ಚಿಸಲು ಪ್ರಯತ್ನ ನಡೆಯಬೇಕಾಗಿದೆ. ರಬ್ಬರ್‌ ಬೇಡಿಕೆಯು  2030 ರ ವೇಳೆಗೆ 2 ಮಿಲಿಯನ್ ಟನ್‌ಗಳನ್ನು ತಲುಪುವ ನಿರೀಕ್ಷೆಯಿದೆ. ಇದಕ್ಕಾಗಿ ಈಗಲೇ ಪ್ರಯತ್ನಗಳು ನಡೆಯುತ್ತಿದೆ.  ಈ ನಡುವೆ ಹವಾಮಾನ ಹಾಗೂ ಟ್ಯಾಪರ್‌ ಕೊರತೆಯು ರಬ್ಬರ್‌ ಉದ್ಯಮದ ಮೇಲೂ ಪರಿಣಾಮ ಬೀರುತ್ತಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ

ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…

5 hours ago

ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!

ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…

6 hours ago

ಜಾನುವಾರುಗಳ ಮೇವಿಗಾಗಿ ₹25 ಕೋಟಿ ಬಿಡುಗಡೆ

ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…

12 hours ago

ಬೆಂಗಳೂರಿನ ಐಐಎಂನಲ್ಲಿ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’ ಅಧ್ಯಯನ ವರದಿ ಬಿಡುಗಡೆ

ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…

12 hours ago

ಅಂದಿಗೂ, ಇಂದಿಗೂ ಮತ್ತು ಮುಂದೆಯೂ ಅಡಿಕೆಯ ಜೊತೆ ಕೋಕೋ ಒಂದು ಸೂಕ್ತ ಉಪಬೆಳೆ

ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…

20 hours ago

ಅಡಿಕೆ ಕ್ಷೇತ್ರಕ್ಕೆ ಬೇಕಿದೆ ಹೊಸ ರಾಷ್ಟ್ರೀಯ ಸಮನ್ವಯ ಮಾದರಿ

ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…

20 hours ago