Advertisement
ವೆದರ್ ಮಿರರ್

ಹವಾಮಾನ ವರದಿ | 03-07-2025 | ಇಂದು ಸಾಮಾನ್ಯ ಮಳೆ | ಜು.6 ರ ನಂತರ ಮಲೆನಾಡು-ಕರಾವಳಿ ಹವಾಮಾನ ಹೇಗೆ ? | ಜು.4 ರಿಂದ ಒಳನಾಡು ವಾತಾವರಣ ಹೇಗೆ ?

Share

04.07.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಿಟ್ಟು ಬಿಟ್ಟು ಉತ್ತಮ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಮುಂದಿನ 10 ದಿನಗಳವರೆಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಆದರೆ ಜುಲೈ 6 ರಿಂದ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಬಹುದು. ತೋಟಗಳಿಗೆ ಔಷಧಿ ಸಿಂಪಡಿಸಲು ಇಡೀ ದಿನ ಮಳೆ ಬಿಟ್ಟು ಸಿಗುವ ಸಾಧ್ಯತೆ ಕಾಣಿಸುತ್ತಿಲ್ಲ.

ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಜುಲೈ 5ರ ತನಕ ಸಾಮಾನ್ಯ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ನಂತರವೂ ದಿನದಲ್ಲಿ ಒಂದೆರಡು ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ.

ಒಳನಾಡು : ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಒಂದೆರಡು ಕಡೆ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ, ಯಾದಗಿರಿ ಒಂದೆರಡು ಕಡೆ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು.

ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ( ಪಾವಗಢ ಸಹಿತ ), ಚಿತ್ರದುರ್ಗ  ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಜುಲೈ 4 ರಿಂದ ಮಳೆಯ ಸಾಧ್ಯತೆ ಕಾಣಿಸುತ್ತಿಲ್ಲ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ಹವಾಮಾನ ವರದಿ | 29-10-2026 | ಕರ್ನಾಟಕದಲ್ಲಿ ಅ.31ರಿಂದ ಮತ್ತೆ ಮಳೆ ಸಾಧ್ಯತೆ..! ಅರ್ನಬ್ ಚಂಡಮಾರುತದ ನಡುವೆ ಹೊಸ ಹವಾಮಾನ ವ್ಯವಸ್ಥೆ

ಅರ್ನಬ್ ಚಂಡಮಾರುತದ ಪ್ರಭಾವದಿಂದ ಕರ್ನಾಟಕದ ಕೆಲವು ಭಾಗಗಳಲ್ಲಿ ಮೋಡದ ವಾತಾವರಣ ಇರಲಿದ್ದು, ಕರಾವಳಿ…

6 hours ago

ಅಡಿಕೆ ಸಂಗ್ರಹಿಸುವಾಗ ತೇವಾಂಶದ ಬಗ್ಗೆ ಎಚ್ಚರಿಕೆ ಇರಲಿ : ಸಂಶೋಧನೆಯಲ್ಲಿ ಏನಿದೆ?

ವಿಟ್ಲದ ಐಸಿಎಆರ್‌–ಸಿಪಿಸಿಆರ್‌ಐ ಕಾರ್ಯಾಗಾರದಲ್ಲಿ ಡಾ. ಹಿಮಾ ಜಾನ್ ಅವರು ಅಡಿಕೆಯ ತೇವಾಂಶ, ವಾಟರ್…

10 hours ago

ಶಿಕ್ಷಕರ ನೇಮಕಾತಿ : ಅರ್ಜಿ ಸಲ್ಲಿಕೆಗೆ ನ.16ರವರೆಗೆ ಅವಧಿ ವಿಸ್ತರಣೆ

2026-27ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ನೇಮಕಾತಿಗೆ ಆನ್‌ಲೈನ್ ಅರ್ಜಿ…

12 hours ago

ಮಂಗಳೂರಿನಲ್ಲಿ ಅ.31ರಂದು ಉದ್ಯೋಗ ಮೇಳ : ಫೋರ್ಸ್ ಕಂಪನಿಯ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಮಂಗಳೂರು ಫೋರ್ಸ್‌ನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಕ್ಟೋಬರ್ 31ರಂದು ಪಡೀಲ್‌ನ ಜಿಲ್ಲಾ ಉದ್ಯೋಗ…

12 hours ago

ಅಡಿಕೆ ಸಂಶೋಧನೆಗೆ ರಾಷ್ಟ್ರೀಯ ಮನ್ನಣೆ – 2027ರಲ್ಲಿ ಅಂತರರಾಷ್ಟ್ರೀಯ ಅಡಿಕೆ ಸಮ್ಮೇಳನಕ್ಕೆ ಚಿಂತನೆ

ARDF ಸಭೆಯಲ್ಲಿ ಈ ವರ್ಷ ಡಿಆರ್‌ಐ ಮತ್ತು ಸುಂಕ ಇಲಾಖೆಯಿಂದ 34 ಅಡಿಕೆ…

13 hours ago

ಹವಾಮಾನ ವರದಿ | 28-10-2026 | ಕರ್ನಾಟಕದಲ್ಲಿ ಸದ್ಯ ಒಣಹವೆ – ನವೆಂಬರ್ 2ರಿಂದ ಮತ್ತೆ ಮಳೆ ಸಾಧ್ಯತೆ

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಯಿದ್ದು, ಕಲಬುರ್ಗಿ, ಬೀದರ್ ಮತ್ತು ಯಾದಗಿರಿಯಲ್ಲಿ…

1 day ago