Advertisement
The Rural Mirror ಕಾಳಜಿ

ಮಕ್ಕಳಿಗೊಂದು ಪುಟ | ನಮ್ಮದೊಂದು ಬೆಳಕು….

Share
ನಾವೊಂದು ಯೋಚನೆ ಮಾಡಿದ್ದೇವೆ.  ಎಲ್ಲಾ ಕಡೆ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಗರ ಪ್ರದೇಶದಲ್ಲಿ ವಾರದ ಎಲ್ಲಾ ದಿನವೂ ವಿವಿಧ ಕ್ಲಾಸ್‌ಗಳು. ಚಿತ್ರಕಲೆ, ಸಂಗೀತ, ಕರಾಟೆ, ಚೆಸ್‌, ಮ್ಯೂಸಿಕ್‌, ಯಕ್ಷಗಾನ… ಹೀಗೇ. ಕೆಲವು ಮಕ್ಕಳಂತೂ ಎಲ್ಲದರಲ್ಲೂ ಇರುತ್ತಾರೆ. ಯಾವುದರಲ್ಲೂ ವೇದಿಕೆ ಸಿಗುವುದಿಲ್ಲ..!.  ಕಾರಣ ಬೇರೆ ಬೇರೆ. ಗ್ರಾಮೀಣ ಭಾಗದ ಮಕ್ಕಳು ಕೂಡಾ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ ವಾರದ ಎಲ್ಲಾ ಕ್ಷೇತ್ರದಲ್ಲಿ ಇರಲು ಸಾಧ್ಯವಾಗುವುದಿಲ್ಲ. ಅಂತಹ ಅವಕಾಶಗಳು ಇಲ್ಲ. ಇಲ್ಲಿ ಪ್ರತಿಭೆಗಳಿದ್ದರೂ ವೇದಿಕೆಯೇ ಸಿಗುವುದಿಲ್ಲ. ಅವಕಾಶಗಳು ಇಲ್ಲ.
ಇಂದು ಎಲ್ಲಾ ಮಕ್ಕಳಿಗೂ ವೇದಿಕೆ ನೀಡುವುದಕ್ಕೆ ಕಷ್ಟ. ನಗರ ಪ್ರದೇಶದಲ್ಲಿ ಸಾಕಷ್ಟು ಅವಕಾಶಗಳು ಇರುತ್ತವೆ.ಒಂದಲ್ಲ ಒಂದು ಅವಕಾಶ. ಅದೇ ಗ್ರಾಮೀಣ ಭಾಗದಲ್ಲಿ ಅದು ಸಾಧ್ಯವಿಲ್ಲ, ಅದು ಪ್ರಾಕ್ಟಿಕಲ್‌ ಕೂಡಾ ಅಲ್ಲ. ಇಂದು ವಿವಿಧ ಮಾಧ್ಯಮಗಳು ಇವೆ, ಸೋಶಿಯಲ್‌ ಮೀಡಿಯಾ ಇದೆ. ಇದ್ದರೂ ಎಲ್ಲರಿಗೂ ಈ ವೇದಿಕೆಯಲ್ಲೂ ತೊಡಗಿಸಿಕೊಂಡು ಮಕ್ಕಳಿಗೆ ವೇದಿಕೆ ನೀಡುವುದು, ಜಗತ್ತಿನ ಮುಂದೆ ತೆರೆದಿಡುವ, Exposure ನೀಡುವುದಕ್ಕೆ ಸಾಧ್ಯವಾಗುವುದಿಲ್ಲ.
ಯಾವತ್ತೂ ಚಿತ್ರಕಲೆ, ಬರಹ ಸೇರಿದಂತೆ ಸೃಜನಾತ್ಮಕ ಚಟುವಟಿಕೆ ಮಕ್ಕಳನ್ನು ಇಂದಿನ ಆಧುನಿಕವಾದ ಸೆಳೆತಗಳಿಂದ ದೂರವಿಡುವುದಕ್ಕೆ ಸಹಕಾರಿ ಎಂಬುದು ಈಗಾಗಲೇ ತಿಳಿದಿದೆ. ಅದರ ಜೊತೆಗೆ ಸೃಜನಾತ್ಮಕ ಚಟುವಟಿಕೆಗಳು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದಕ್ಕೂ ಕಾರಣವಾಗುತ್ತದೆ. ಇಂತಹದೊಂದು ವಾತಾವರಣ ಭವಿಷ್ಯದಲ್ಲಿ ನಿರ್ಮಾಣ ಆಗಲೇಬೇಕಾದ ಅನಿವಾರ್ಯತೆ ಇದೆ. ಏಕೆ ಈ ನಿರೀಕ್ಷೆ ಎಂದು ಇಂದಿನ ಪೋಷಕರಿಗೆ ಕೇಳಿದರೆ ಅವರಲ್ಲಿರುವ ಆತಂಕ ಅರಿವಾಗುತ್ತದೆ.
ಇದಕ್ಕಾಗಿ ಮಕ್ಕಳಿಗೆ ಒಂದು ಪುಟ್ಟ ವೇದಿಕೆ ನೀಡುವುದು, ಈ ಮೂಲಕ ಅವರ ಆಸಕ್ತಿಗೆ ಬೆಳಕು ನೀಡುವ ಪ್ರಯತ್ನ ನಮ್ಮ ದ ರೂರಲ್‌ ಮಿರರ್.ಕಾಂ ಮೂಲಕ ಮಾಡಲು ಉತ್ಸಾಹಿತರಾಗಿದ್ದೇವೆ. ಅಂದರೆ ಸದ್ಯ ಚಿತ್ರಕಲೆ ಹಾಗೂ ಬರಹವನ್ನು ಮಾತ್ರವೇ ಆಯ್ಕೆ ಮಾಡಿಕೊಂಡಿದ್ದೇವೆ. ಯಾವುದೇ ಚಿತ್ರ ಆಗಿರಲಿ, ಚಿತ್ರ ಹೇಗೇ ಇರಲಿ, ಬರಹ ಯಾವುದೇ ಇರಲಿ, ಹೇಗೇ ಇರಲಿ. ಮಗುವಿನ ಕಲ್ಪನೆಯ ಚಿತ್ರ, ಬರಹವೇ ಇರಲಿ. ಅದರ ಯೋಚನೆ ಬೇಡ. ಆಸಕ್ತಿ ಮೂಡಿಸುವುದು ಮೊದಲ ಕೆಲಸ, ಒಂದಷ್ಟು ಜನರಿಗೆ ಇದೇನು ಅಂತ ಅನಿಸಬಹುದು, ಬೇಗನೆ Exposure ನೀಡಿದರೆ ಕಷ್ಟ ಎನ್ನುವ ಭಾವನೆಯೂ ಇರುತ್ತದೆ. ಆದರೆ ಮಗುವಿಗೆ ಆಸಕ್ತಿ ಬೆಳೆಯುವುದಕ್ಕೆ ಬೆನ್ನು ತಟ್ಟಬೇಕು, ಚೆನ್ನಾಗಿದೆ… ಸೂಪರ್‌ ಎಂದು ಹೇಳಬೇಕು, ಒಂಚೂರು ಹೀಗಾಗಬೇಕು ಎನ್ನಬೇಕು,ಆಸಕ್ತಿ ಬೆಳೆಯುತ್ತದೆ. ಚಿತ್ರ ಪೇಪರಲ್ಲಿ ಬರುತ್ತದೆ ಎನ್ನುವ ಆಸಕ್ತಿ ಮುಂದೆ ಕುತೂಹಲವಾಗಿ ಬೆಳೆದು ಒಂದು ಕಲೆ ಕರಗತವಾಗಬಹುದು. ಸಮಾಜಕ್ಕೆ ಒಬ್ಬ ಕಲಾವಿದನ ಕೊಡುಗೆ, ಆತಂಕದ ವಾತಾವರಣದ ನಡುವೆ ಉತ್ತಮ ಚಿಂತನೆಯ ವ್ಯಕ್ತಿಯೊಬ್ಬ ಬೆಳೆಯುವಂತಾಗುತ್ತದೆ. ಹೀಗಾಗಿ ಸೀಮಿತ ಶಕ್ತಿಯ, ಸೀಮಿತ ವ್ಯಾಪ್ತಿಯ ಪುಟ್ಟ ಪ್ರಯತ್ನ ಇದು. ಗೆಲ್ಲಲೇ ಬೇಕು ಅಂತೇನೂ ಇಲ್ಲ. ಅಥವಾ ಇದುವೇ ಬೇರೆಯವರಿಗೂ ಸ್ಫೂರ್ತಿಯಾಗಲೂ ಬಹುದು. ಆದರೆ ದ್ವೇಷದ, ಕಾಲೆಳೆಯುವ ಸಮಾಜದ ನಡುವೆ ಮೇಲೆತ್ತುವ, ಪ್ರೀತಿಸುವ, ಬೆಳಕು ನೀಡುವ, ಹೆಜ್ಜೆಯೊಂದನ್ನು ಇರಿಸಿದ್ದೇವೆ… ಬೆಂಬಲಿಸಿ.. ಬೇರೆಯವರಿಗೂ ಹೇಳಿ… ಇನ್ನೊಬ್ಬರೂ ಬೆಳೆಯಲಿ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 23-09-2026 | ಸೆ.30 ರಿಂದ ಮತ್ತೆ ಬದಲಾಗಲಿದೆ ಹವಾಮಾನ..!

ಕರ್ನಾಟಕದಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.26 ರವರೆಗೆ ಅಲ್ಲಲ್ಲಿ ತುಂತುರು…

3 hours ago

ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ..! ಎಲ್ಲೆಲ್ಲಾ ರೆಡ್‌ ಎಲರ್ಟ್..?‌ ಯಾವಾಗ..?

ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆ ಚುರುಕಾಗಲಿದ್ದು,…

8 hours ago

₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’

₹1.65 ಲಕ್ಷದಿಂದ ಬೆಲೆ ಆರಂಭವಾಗುವ ಐಫೋನ್‌ 18 ಪ್ರೊ ಖರೀದಿಗಾಗಿ ದೇಶದ ಹಲವು…

1 day ago

ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ

ಅರಬ್ಬಿ ಸಮುದ್ರದ ಕಡೆಯಿಂದ ಬೀಸುವ ಗಾಳಿಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮುನ್ಸೂಚನೆಯಲ್ಲಿದ್ದಷ್ಟು…

2 days ago

ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಉ ತ್ತಮ ಮಳೆಯ…

3 days ago

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ

ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಮತ್ತೆ ಹೆಚ್ಚಾಗುವ ಸೂಚನೆ ದೊರೆತಿದ್ದು, ಮುಂದಿನ ಏಳು ದಿನಗಳ…

3 days ago