ಅಡಿಕೆ ಸಂಶೋಧನೆಗೆ ರಾಷ್ಟ್ರೀಯ ಮನ್ನಣೆ – 2027ರಲ್ಲಿ ಅಂತರರಾಷ್ಟ್ರೀಯ ಅಡಿಕೆ ಸಮ್ಮೇಳನಕ್ಕೆ ಚಿಂತನೆ

October 29, 2026
7:09 AM
ARDF ಸಭೆಯಲ್ಲಿ ಈ ವರ್ಷ ಡಿಆರ್‌ಐ ಮತ್ತು ಸುಂಕ ಇಲಾಖೆಯಿಂದ 34 ಅಡಿಕೆ ಮಾದರಿಗಳು ಪರಿಶೀಲನೆಗೆ ಬಂದಿರುವ ಮಾಹಿತಿ ಹಂಚಿಕೊಳ್ಳಲಾಯಿತು. 2027ರಲ್ಲಿ ಅಂತರರಾಷ್ಟ್ರೀಯ ಅಡಿಕೆ ಸಮ್ಮೇಳನ ಆಯೋಜಿಸುವುದು, ಇತರ ತೋಟಗಾರಿಕಾ ಬೆಳೆಗಳ ಸಂಶೋಧನೆಗೆ ಪ್ರತಿಷ್ಠಾನದ ವ್ಯಾಪ್ತಿ ವಿಸ್ತರಿಸುವುದು ಹಾಗೂ ಸಂಶೋಧನಾ ಸೌಲಭ್ಯಗಳನ್ನು ಬಲಪಡಿಸಲು ಮಂಗಳೂರು ವಿಶ್ವವಿದ್ಯಾಲಯದೊಂದಿಗೆ ಮುಂದಿನ ಕ್ರಮ ಕೈಗೊಳ್ಳುವುದು ಸಭೆಯ ಪ್ರಮುಖ ನಿರ್ಧಾರಗಳಾಗಿವೆ.

ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಕ್ಕೆ (ARDF) ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆಯುತ್ತಿರುವುದು ಹೆಮ್ಮೆಯ ಸಂಗತಿ. ಈ ವರ್ಷ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮತ್ತು ಸುಂಕ ಇಲಾಖೆಯಿಂದ ಒಟ್ಟು 34 ಅಡಿಕೆ ಮಾದರಿಗಳು ಪರಿಶೀಲನೆಗಾಗಿ ಪ್ರತಿಷ್ಠಾನಕ್ಕೆ ಬಂದಿವೆ ಎಂದು ARDF ವ್ಯವಸ್ಥಾಪಕ ಟ್ರಸ್ಟಿ ಹಾಗೂ ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್. ತಿಳಿಸಿದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.  ಕ್ಯಾಂಪ್ಕೊದ ಸಹಯೋಗದೊಂದಿಗೆ 2027ರಲ್ಲಿ ಅಂತರರಾಷ್ಟ್ರೀಯ ಅಡಿಕೆ ಸಮ್ಮೇಳನ ಆಯೋಜಿಸುವ ಉದ್ದೇಶದ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಸಮ್ಮೇಳನದ ಆಯೋಜನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆ ಭರವಸೆ ನೀಡಿದರು.

ಇತರ ತೋಟಗಾರಿಕಾ ಬೆಳೆಗಳ ಸಂಶೋಧನೆಗೂ ಒತ್ತು : ಪ್ರಸ್ತುತ ಅಡಿಕೆ ಸಂಶೋಧನೆಗೆ ಸೀಮಿತವಾಗಿರುವ ARDFನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಸಭೆ ನಿರ್ಧರಿಸಿತು. ಕರಿಮೆಣಸು, ಕಾಫಿ, ಕೋಕೋ ಮತ್ತು ರಬ್ಬರ್ ಸೇರಿದಂತೆ ಇತರ ಕೃಷಿ ಉತ್ಪನ್ನಗಳ ಸಂಶೋಧನೆಯನ್ನೂ ಪ್ರತಿಷ್ಠಾನದ ವ್ಯಾಪ್ತಿಗೆ ಸೇರಿಸುವ ಉದ್ದೇಶದಿಂದ ಟ್ರಸ್ಟ್ ಡೀಡ್‌ನಲ್ಲಿ ಅಗತ್ಯ ತಿದ್ದುಪಡಿ ಮಾಡುವ ಕುರಿತು ತೀರ್ಮಾನಿಸಲಾಯಿತು.

ಸಂಶೋಧನಾ ಸೌಲಭ್ಯಗಳ ಅಭಿವೃದ್ಧಿಗೆ ಚರ್ಚೆ :  ARDFಗೆ ಸರ್ಕಾರಿ ಮಟ್ಟದಲ್ಲಿ ಹೆಚ್ಚಿನ ಮನ್ನಣೆ ದೊರೆಯುವಂತೆ ಮಾಡಲು ಸಂಶೋಧನೆ ನಡೆಸುತ್ತಿರುವ ವಿಶ್ವವಿದ್ಯಾಲಯಗಳು ಅಥವಾ ಸರ್ಕಾರಿ ಇಲಾಖೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಸಂಶೋಧನೆಗೆ ಅಗತ್ಯವಾದ ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ ಹಾಗೂ ಸೂಕ್ತ ಸಿಬ್ಬಂದಿಯನ್ನು ಹೊಂದುವ ಮೂಲಕ ಪ್ರತಿಷ್ಠಾನದ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯದ ಬಗ್ಗೆಯೂ ಚರ್ಚಿಸಲಾಯಿತು. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಗತ್ಯ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲು ಸಭೆ ನಿರ್ಧರಿಸಿತು.

ಅಡಿಕೆ ಸಂಶೋಧನೆಯ ಜೊತೆಗೆ ಇತರ ತೋಟಗಾರಿಕಾ ಬೆಳೆಗಳ ಅಧ್ಯಯನಕ್ಕೂ ಆದ್ಯತೆ ನೀಡುವ ಹಾಗೂ ಸಂಶೋಧನಾ ಮೂಲಸೌಕರ್ಯವನ್ನು ಬಲಪಡಿಸುವ ಮೂಲಕ ಪ್ರತಿಷ್ಠಾನದ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವುದು ಸಭೆಯ ಪ್ರಮುಖ ನಿರ್ಧಾರಗಳಾಗಿವೆ.

ಸಭೆಯಲ್ಲಿ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ (ARDF) ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಕ್ಯಾಂಪ್ಕೊ ಅಧ್ಯಕ್ಷ  ಎಸ್.ಆರ್. ಸತೀಶ್ಚಂದ್ರ, ಪ್ರತಿಷ್ಠಾನದ ಟ್ರಸ್ಟಿಗಳಾದ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ, ಶಿವಮೊಗ್ಗದ ಮಾಮ್ಕೋಸ್ (MAMCOS) ಉಪಾಧ್ಯಕ್ಷ ಮಹೇಶ್ ಎಚ್.ಎಸ್., ಟಿಎಸ್ಎಸ್ (TSS) ನಿರ್ದೇಶಕ ನರಸಿಂಹ ಹೆಗ್ಡೆ ಹಾಗೂ ಚನ್ನಗಿರಿಯ ಟುಮ್ಕೋಸ್ (TUMCOS) ಅಧ್ಯಕ್ಷರ ಪರವಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ  ಮಧು ಉಪಸ್ಥಿತರಿದ್ದರು. ವಿಶೇಷ ಆಹ್ವಾನಿತರಾಗಿ ಡಾ. ವಿಘ್ನೇಶ್ವರ ವರ್ಮುಡಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

The Arecanut Research and Development Foundation (ARDF) discussed expanding its research activities and strengthening institutional infrastructure at a meeting held on October 26, 2026, under the chairmanship of Dharmadhikari Dr. D. Veerendra Heggade. ARDF Managing Trustee and CAMPCO President Satishchandra S.R. said the foundation had received 34 arecanut samples this year from the Directorate of Revenue Intelligence (DRI) and Customs for examination, reflecting its growing national recognition. The meeting also discussed organising an international arecanut conference in 2027 with CAMPCO’s cooperation, extending research to crops such as black pepper, coffee, cocoa and rubber, and exploring collaborations with universities or government departments to strengthen laboratory, library and staffing facilities.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶಿಕ್ಷಕರ ನೇಮಕಾತಿ : ಅರ್ಜಿ ಸಲ್ಲಿಕೆಗೆ ನ.16ರವರೆಗೆ ಅವಧಿ ವಿಸ್ತರಣೆ
October 29, 2026
7:26 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ಅ.31ರಂದು ಉದ್ಯೋಗ ಮೇಳ : ಫೋರ್ಸ್ ಕಂಪನಿಯ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
October 29, 2026
7:17 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 28-10-2026 | ಕರ್ನಾಟಕದಲ್ಲಿ ಸದ್ಯ ಒಣಹವೆ – ನವೆಂಬರ್ 2ರಿಂದ ಮತ್ತೆ ಮಳೆ ಸಾಧ್ಯತೆ
October 28, 2026
2:20 PM
by: ಸಾಯಿಶೇಖರ್ ಕರಿಕಳ
ಅಡಿಕೆ ಆರೋಗ್ಯ ಸಂಶೋಧನೆಗೆ ಅಪಾರ ಅವಕಾಶ – ಕೋಕೋ ಕೃಷಿಯಲ್ಲೂ ಭಾರತಕ್ಕೆ ಭವಿಷ್ಯ – ಡಾ. ಬಾಲಚಂದ್ರ ಹೆಬ್ಬಾರ್
October 28, 2026
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror