ಅರೆಭಾಷೆಯಲ್ಲಿ ಮೊದಲ ಛಂದೋಬದ್ಧ ಯಕ್ಷಗಾನ ಪ್ರಸಂಗ ಸಿದ್ದ | ಭಾಗವತರಾದ ಭವ್ಯಶ್ರೀ ಕುಲ್ಕುಂದ ರಚನೆ

September 22, 2020
11:37 AM
ಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಪ್ರಾದೇಶಿಕ ಉಪಭಾಷೆಯಾದ ಅರೆಭಾಷೆಯಲ್ಲಿ ಇದೇ ಮೊದಲ ಬಾರಿಗೆ ಛಂದೋಬದ್ಧ ಯಕ್ಷಗಾನ ಪ್ರಸಂಗ ರಚನೆಗೊಂಡಿದ್ದು, ತಾಳಮದ್ದಳೆಯ ಮೊದಲ ಪ್ರಯೋಗ ಯಶಸ್ವಿಯಾಗಿದೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವಿನಂತಿಯಂತೆ ಯಕ್ಷಗಾನ ಯುವ ಭಾಗವತರಾದ ಭವ್ಯಶ್ರೀ ಕುಲ್ಕುಂದ ಅವರು ಅರೆಭಾಷೆಯಲ್ಲಿ ಯಕ್ಷಗಾನ ಪ್ರಸಂಗ ರಚಿಸಿದ್ದಾರೆ. ಅರೆಭಾಷೆಯಲ್ಲಿ ಯಕ್ಷಗಾನ, ತಾಳಮದ್ದಳೆ ಪ್ರಯೋಗ ಈಗಾಗಲೇ ನಡೆದಿದೆ. ಆದರೆ, ಪ್ರಸಂಗ ಸಾಹಿತ್ಯ ಕನ್ನಡದಲ್ಲಿದೆ. ಅರೆಭಾಷೆಯಲ್ಲೇ ಪ್ರಸಂಗ ಸಾಹಿತ್ಯವೂ ದೊರೆಯಬೇಕು ಎಂಬ ಅಕಾಡೆಮಿಯ ಯೋಜನೆಯಂತೆ ಭವ್ಯಶ್ರೀ ಅವರು ಕನ್ನಡದಿಂದ ಐದು ಪ್ರಸಂಗಗಳನ್ನು ಅರೆಭಾಷೆಗೆ ಅನುವಾದಿಸುತ್ತಿದ್ದಾರೆ. ಈಗಾಗಲೇ ಶರಸೇತು ಬಂಧನ ಮತ್ತು ಪಂಚವಟಿ ಪ್ರಸಂಗದ ಅನುವಾದ ಪೂರ್ಣಗೊಂಡಿದೆ. ಈ ಪೈಕಿ ಶರಸೇತು ಬಂಧನ ಪ್ರಸಂಗ ‘ಬಾಣದ ಪಾಲ’ ಹೆಸರಿನಲ್ಲಿ ತಾಳಮದ್ದಳೆ ವಿಡಿಯೊ, ಆಡಿಯೊ ರೆಕಾರ್ಡಿಂಗ್ ನಡೆದಿದೆ.
‘ಅರೆಭಾಷೆಯಲ್ಲಿ ಯಕ್ಷಗಾನ ಪ್ರಸಂಗ ರಚಿಸಬೇಕು ಎಂಬ ಪ್ರಯತ್ನಕ್ಕೆ ಮುಂದಾದಾಗ ಬರೆಯುವವರು ಯಾರು ಎಂಬ ಪ್ರಶ್ನೆ ಎದುರಾಯಿತು. ಅರೆಭಾಷೆ ತಿಳಿದಿರುವವರಿಗೆ ಯಕ್ಷಗಾನ ಛಂದಸ್ಸು ತಿಳಿದಿರಲಿಲ್ಲ. ಛಂದಸ್ಸು ಅರಿತವರಿಗೆ ಭಾಷೆ ಸಮಸ್ಯೆ. ಈ ವೇಳೆ ಈಗಾಗಲೇ ಛಂದೋಬದ್ದವಾಗಿ ಕನ್ನಡ ಪದ್ಯ ರಚನೆಯ ಪ್ರಯತ್ನ ನಡೆಸುತ್ತಿರುವ  ಭಾಗವತರಾದ ಭವ್ಯಶ್ರೀ ಅವರ ಬಗ್ಗೆ ತಿಳಿದು, ಅವರನ್ನು ಸಂಪರ್ಕಿಸಿ ಅರೆಭಾಷೆಗೆ ಯಕ್ಷಗಾನ ಪ್ರಸಂಗವನ್ನು ಅನುವಾದಿಸಲು ವಿನಂತಿಸಲಾಯಿತು. ಆರಂಭದಲ್ಲಿ ಹಿಂಜರಿದರೂ, ಬಳಿಕ ಹೊಸ ಪ್ರಯೋಗಕ್ಕೆ ಕೈಜೋಡಿಸಿದ್ದಾರೆ. ಯಕ್ಷಗಾನ ಪ್ರದರ್ಶನಕ್ಕೆ ಹೊಂದಿಕೆಯಾಗುವ ಮೂರು ಪ್ರಸಂಗ ಹಾಗೂ ತಾಳಮದ್ದಳೆಗೆ ಎರಡು ಪ್ರಸಂಗ ರಚನೆಗೆ ಮನವಿ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಐದು ಪ್ರಸಂಗಗಳು ಅರೆಭಾಷೆಯಲ್ಲಿ ಲಭ್ಯವಾಗಲಿವೆ. ಇದು ಭಾಷೆಯ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ತಿಳಿಸಿದ್ದಾರೆ.
ಅರೆಭಾಷೆಯಲ್ಲಿ ಪದ್ಯ ರಚನೆ ಸಂದರ್ಭ ನನ್ನ ಮೊದಲ ಗುರುಗಳಾದ ವಿಶ್ವವಿನೋದ ಬನಾರಿ ಅವರು ಪ್ರೋತ್ಸಾಹ ನೀಡಿದ್ದಾರೆ. ಗುರುಗಳಾದ ಗಣೇಶ ಕೊಲೆಕಾಡಿ ಅವರು ಛಂದಸ್ಸಿನ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಭಾಗವತರಾದ ಸುಬ್ರಾಯ ಸಂಪಾಜೆ ಭಾಷೆ ಬಗ್ಗೆ ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸರ್ವ ಸದಸ್ಯರು, ಜಬ್ಬಾರ್ ಸಮೊ ಅವರು ಪ್ರೋತ್ಸಾಹ ನೀಡಿದ್ದಾರೆ ಎನ್ನುತ್ತಾರೆ ಭವ್ಯಶ್ರಿ ಕುಲ್ಕುಂದ.
ಭವ್ಯಶ್ರೀ ಅವರ ಕನ್ನಡದ ಪದ್ಯ ರಚನೆ ಓದಿದ್ದೆ. ಅವರಿಗೆ ಬರೆಯುವ ಸಾಮರ್ಥ್ಯವಿದ್ದು, ಅರೆಭಾಷೆಯಲ್ಲಿ ಪ್ರಸಂಗ ರಚಿಸಬಹುದು ಎಂದು ಅರೆಭಾಷೆ ಅಕಾಡೆಮಿಗೆ ಸಲಹೆ ನೀಡಿದ್ದೆ. ಭವ್ಯಶ್ರೀ ಅವರ ಪ್ರಸಂಗ ರಚನೆ ಪ್ರಯತ್ನ ಅರೆಭಾಷೆಗೆ ಕೊಡುಗೆ ಆಗುತ್ತದೆ – ಸುಬ್ರಾಯ ಸಂಪಾಜೆ ಯಕ್ಷಗಾನ ಭಾಗವತರು
ಅರೆಭಾಷೆಯಲ್ಲಿ ಯಕ್ಷಗಾನ ಪ್ರಸಂಗ ರಚಿಸುವ ಬಗ್ಗೆ ಅಕಾಡೆಮಿ ತಜ್ಞರ ಸಲಹೆ ಪಡೆದು ಪ್ರಯತ್ನ ಆರಂಭಿಸಿತು. ಇದೀಗ ಎರಡು ಪ್ರಸಂಗ ರಚನೆಗೊಂಡಿದೆ. ರೆಕಾರ್ಡಿಂಗ್ ಆದ ತಾಳಮದ್ದಳೆಯನ್ನು ಸದ್ಯದಲ್ಲೇ ಅಕಾಡೆಮಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಮುಂದಕ್ಕೆ ಐದು ಪ್ರಸಂಗಗಳು ಅರೆಭಾಷೆಯಲ್ಲಿ ಲಭ್ಯವಾಗಲಿವೆ.  – ಲಕ್ಷ್ಮೀನಾರಾಯಣ ಕಜೆಗದ್ದೆ, ಅಧ್ಯಕ್ಷರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ
ಅರೆಭಾಷೆಯಲ್ಲಿ ಛಂದೋಬದ್ಧ ಪ್ರಸಂಗ ರಚನೆ ಸುಲಭವಲ್ಲ. ಅರೆಭಾಷೆಯಲ್ಲಿ ಅರ್ಧಪದಗಳ ಬಳಕೆ ಹೆಚ್ಚು. ಇದನ್ನು ಛಂದಸ್ಸಿಗೆ ಹೊಂದಿಸುವುದು ಸವಾಲಿನ ಕೆಲಸ. ಲಾಕ್‌ಡೌನ್ ಅವಧಿಯಲ್ಲಿ ಪ್ರಸಂಗ ಅನುವಾದ ಆರಂಭಿಸಿದೆ. ಅಕಾಡೆಮಿ ನೇತೃತ್ವದಲ್ಲಿ ಹೊಸ ಪ್ರಯೋಗಕ್ಕೆ ಕೈಜೋಡಿಸಿದ ಖುಷಿ ಇದೆ. –ಭವ್ಯಶ್ರೀ ಕುಲ್ಕುಂದ , ಯಕ್ಷಗಾನ ಭಾಗವತರು
ಭವ್ಯಶ್ರೀ ಅವರು ಹಾಡಿರುವ ಯಕ್ಷಗಾನದ ಹಾಡಿನ ತುಣುಕು

Advertisement
Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಾಳೆತಟ್ಟೆಯ ಬಳಿಕ ಈಗ ಮಾವಿನಹಣ್ಣು | ಭಾರತದ 15 ಮಾವಿನ ಹಣ್ಣು ಶಿಪ್‌ಮೆಂಟ್‌ಗಳನ್ನು ತಿರಸ್ಕರಿಸಿದ ಅಮೇರಿಕಾ |
May 21, 2025
7:45 AM
by: The Rural Mirror ಸುದ್ದಿಜಾಲ
ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಅಡಿಕೆ ಬೆಳೆಗೆ ಉತ್ತಮ ಧಾರಣೆಯ ಸಂತಸದಲ್ಲಿ ಚಾಮರಾಜನಗರ ರೈತರು | ಚಾಲಿ ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆಯಲ್ಲಿ ಮಲೆನಾಡು ಭಾಗದ ಬೆಳೆಗಾರರು | ಧಾರಣೆ ಏರಿಕೆಯ ಬಗ್ಗೆ ತಜ್ಞರ ಅಭಿಪ್ರಾಯ |
May 3, 2025
7:01 AM
by: ದ ರೂರಲ್ ಮಿರರ್.ಕಾಂ
ಕಣ್ಣಿಗೆ ಬಟ್ಟೆ ಕಟ್ಟಿ 6 ನಿಮಿಷದಲ್ಲಿ 112 ವಸ್ತುಗಳನ್ನು ಗುರುತಿಸಿದ ಬಾಲಕಿ | ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ |
April 27, 2025
11:17 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group