ಭೂತಾನ್‌ನಿಂದ 17000 ಟನ್ ಹಸಿ ಅಡಿಕೆಯನ್ನು ಯಾವುದೇ ನಿರ್ಬಂಧ ಇಲ್ಲದೆಯೇ ಆಮದಿಗೆ ಕೇಂದ್ರ ಸರ್ಕಾರವು ಡಿಜಿಎಫ್‌ಟಿ ಅನುಮತಿ ನೀಡಿರುವುದು ಬೆಳಕಿಗೆ ಬಂದಿದೆ. ದೇಶದ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ತಕ್ಷಣವೇ ಈ ಅನುಮತಿಯನ್ನು ರದ್ದು ಮಾಡಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭೂತಾನ್ ಮೂಲಕ ಸದ್ಯ ಅಡಿಕೆ ಆಮದು ಕಾರಣದಿಂದ ಇಲ್ಲಿನ ಅಡಿಕೆ ಮಾರುಕಟ್ಟೆಗೆ , ಅಡಿಕೆ ಬೆಳೆಗೆ ಯಾವುದೇ ಪರಿಣಾಮ ಬೀರದು. ಆದರೆ ಭವಿಷ್ಯದಲ್ಲಿ ಅಡಿಕೆ ಧಾರಣೆಯ ಮೇಲೆ, ಅಡಿಕೆ ಬೆಳೆಗಾರರ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ಇಲ್ಲಿ ಹಸಿ ಅಡಿಕೆ ಅಥವಾ ಚಾಲಿ ಅಡಿಕೆ ಅಥವಾ ದ್ವಿತೀಯ ದರ್ಜೆಯ ಅಡಿಕೆ ಎಂಬುದರ ಬದಲಾಗಿ ಅಡಿಕೆ ಆಮದು ಯಾವುದೇ ವಿಧದಿಂದ ಆದರೂ ಬೇರೆ ಬೇರೆ ಕಾರಣಗಳಿಂದ ದೇಶದ ಅಡಿಕೆ ಬೆಳೆಗಾರರಿಗೆ ಹಾನಿ ಇದೆ. ಹೀಗಾಗಿ ಅಡಿಕೆ ಆಮದು ಯಾವುದೇ ಕಾರಣದಿಂದ ನಡೆಯಬಾರದು. ಇದರ ಜೊತೆಗೆ ಅಡಿಕೆ ಆಮದು ಕನಿಷ್ಟ ಧಾರಣೆ 350 ರೂಪಾಯಿ ನಿಗದಿ ಮಾಡಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸುತ್ತದೆ ಎಂದು ಅಶೋಕ್ ಕಿನಿಲ ಹೇಳಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel