Advertisement
MIRROR FOCUS

ಮಂಗಳೂರಿನಲ್ಲಿ ಅಡಿಕೆ ಕುರಿತ ಸಮಗ್ರ ಸಂಶೋಧನಾ ಕೃತಿ ‘ARECA NUT’ ಬಿಡುಗಡೆ

Share

ಅಡಿಕೆಯ ಇತಿಹಾಸ, ರಾಸಾಯನಿಕ ಸಂಯೋಜನೆ ಮತ್ತು ಆರೋಗ್ಯ ಸಂಬಂಧಿತ ಅಂಶಗಳನ್ನು ಒಳಗೊಂಡ ಮಹತ್ವದ ಸಂಶೋಧನಾ ಕೃತಿ ARECA NUT: History, Constituents, Cancer & Beyond ನ ಬಿಡುಗಡೆ ಸಮಾರಂಭವನ್ನು ಅಡಿಕೆ ಬೆಳೆಗಾರರ ಪ್ರಮುಖ ಸಂಸ್ಥೆಯಾದ ಕ್ಯಾಂಪ್ಕೋ (CAMPCO) ಆಯೋಜಿಸಿದೆ.

ಎನ್‌.ಐ.ಟಿ. ಕರ್ನಾಟಕ (NITK) ಸುರತ್ಕಲ್‌ನ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ. ಪ್ರಸನ್ನ ಬೇಳೂರು ಅವರು ಈ ಕೃತಿಯನ್ನು ರಚಿಸಿದ್ದು, ಸಮಾರಂಭವು ಫೆಬ್ರವರಿ 18, 2026 ಬುಧವಾರ ಸಂಜೆ 4 ಗಂಟೆಗೆ ಮಂಗಳೂರಿನ ಮಿಷನ್ ಸ್ಟ್ರೀಟ್‌ನಲ್ಲಿರುವ ವಾರಣಾಸಿ ಟವರ್ಸ್‌ನ ಕ್ಯಾಂಪ್ಕೋ ಪ್ರಧಾನ ಕಚೇರಿಯ 4ನೇ ಮಹಡಿಯಲ್ಲಿ ನಡೆಯಲಿದೆ.

ಈ ಕೃತಿ ಅಡಿಕೆಯ ಇತಿಹಾಸದಿಂದ ಹಿಡಿದು ಅದರ ವೈಜ್ಞಾನಿಕ ಮತ್ತು ಆರೋಗ್ಯ ಸಂಬಂಧಿತ ಅಂಶಗಳವರೆಗೆ ಸಮಗ್ರವಾಗಿ ವಿಶ್ಲೇಷಿಸುತ್ತದೆ. ಏಷ್ಯಾದ ಸಂಸ್ಕೃತಿಯಲ್ಲಿ ಅಡಿಕೆ ಮಹತ್ವದ ಪಾತ್ರ ವಹಿಸಿದೆ.  ಈ ಇತಿಹಾಸದ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಜೊತೆಗೆ ಅಡಿಕೆಯ ರಾಸಾಯನಿಕ ಸಂಯೋಜನೆ ಮತ್ತು ಪ್ರಾಚೀನ ಔಷಧ ಪದ್ಧತಿಗಳಲ್ಲಿ ಅದರ ಬಳಕೆಯನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ವಿವರಿಸಲಾಗಿದೆ.  ಅಡಿಕೆಗೆ ‘ಕ್ಯಾನ್ಸರ್ ಕಾರಕ’ ಎಂಬ ಹಣೆಪಟ್ಟಿ ಇರುವ ಹಿನ್ನೆಲೆಯಲ್ಲಿ ಅದರ ಆರೋಗ್ಯ ಪರಿಣಾಮಗಳ ಬಗ್ಗೆ ಚರ್ಚಿಸುವುದರ ಜೊತೆಗೆ, ಆಹಾರ ಉದ್ಯಮದಲ್ಲಿ ಅಡಿಕೆ ಬಳಕೆಯ ಸಾಧ್ಯತೆಗಳನ್ನೂ ಈ ಕೃತಿ ವಿಶ್ಲೇಷಿಸುತ್ತದೆ.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಎನ್‌.ಐ.ಟಿ.ಕೆ ಸುರತ್ಕಲ್ ನಿರ್ದೇಶಕರಾದ ಪ್ರೊ. ಬಿ. ರವಿ, ಕ್ಯಾಂಪ್ಕೋ ಲಿಮಿಟೆಡ್ ಅಧ್ಯಕ್ಷರಾದ ಎಸ್‌.ಆರ್‌. ಸತೀಶ್ಚಂದ್ರ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಮಹೇಶ್ ಪುಚ್ಚಪ್ಪಾಡಿ ಮತ್ತು ನಿವೃತ್ತ ಸಹ ಪ್ರಾಧ್ಯಾಪಕರಾದ ಡಾ. ವಿಘ್ನೇಶ್ವರ ವರ್ಮುಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.

CAMPCO will host the release of the research book “ARECA NUT: History, Constituents, Cancer & Beyond” by NITK Surathkal Professor Dr. Prasanna Belur on February 18, 2026, in Mangaluru. The book explores arecanut’s history, chemical composition, health impacts, and potential industrial applications. Several dignitaries including NITK Director Prof. B. Ravi and CAMPCO President S.R. Satishchandra will attend the event.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

10 hours ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

17 hours ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

20 hours ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

1 day ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

1 day ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

1 day ago