#Arecanut | ಮಳೆಗಾಲದಲ್ಲಿ ಕಾಡುವ ಅಡಿಕೆ ಸುಳಿಕೊಳೆ ರೋಗ | ಲಕ್ಷಣಗಳು ಮತ್ತು ನಿರ್ವಹಣಾ ಕ್ರಮಗಳು ಏನು..?

July 11, 2023
1:39 PM
ಸುಳಿಕೊಳೆ ಅಡಿಕೆ ಬೆಳೆಯ ಒಂದು ಮಾರಕ ರೋಗ. ಈ ರೋಗವೂ ಕೂಡ ಪೈಟಾಪ್ತೋರ ಮೀಡಿ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಇದರ ನಿರ್ವಹಣಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ..

ಕರಾವಳಿ, ಮಲೆನಾಡು ಜನತೆಯ ಮೂಲ ಕೃಷಿ #Agriculture ಅಡಿಕೆ. ಹಾಗೆ ಮಳೆನೂ ಜಾಸ್ತಿಯೇ. ಮಳೆ ಜಾಸ್ತಿಯಾಗುತ್ತಿದ್ದಂತೆ ಅಡಿಕೆಗೆ ಕೆಲ ರೋಗಗಳು ಹತ್ತಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಮಳೆಗಾಲ ಜೋರಾಗುತ್ತಿದ್ದಂತೆ ಅಡಿಕೆಯಲ್ಲಿ ಸುಳಿಕೊಳೆ ರೋಗ ಕಾಣಿಸಿಕೊಳ್ಳಲು ಆರಂಭಗೊಳ್ಳುತ್ತದೆ. ಇದರ ಲಕ್ಷಣಗಳು ಹಾಗೂ ಇದರ ನಿರ್ವಹಣೆ ಬಗ್ಗೆ ವಿಜ್ಞಾನಿಗಳು ಹಾಗೂ ತೋಟಗಾರಿಕಾ ಸಲಹೆಗಾರರಾದ ಸಂತೋಷ್ ನಿಲುಗುಳಿ ಅವರು ವಿವರವಾದ ಮಾಹಿತಿ ನೀಡಿದ್ದಾರೆ.

ಸುಳಿಕೊಳೆ ಅಡಿಕೆ ಬೆಳೆಯ ಒಂದು ಮಾರಕ ರೋಗ. ಈ ರೋಗವೂ ಕೂಡ ಪೈಟಾಪ್ತೋರ ಮೀಡಿ#Phytophthora medii ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿರುವ ತೋಟಗಳಲ್ಲಿ ಈ ರೋಗವು ಮುಂಗಾರು (ಜೂನ್ – ಸೆಪ್ಟೆಂಬರ್) ಮತ್ತು ಚಳಿಗಾಲದ (ಅಕ್ಟೋಬರ್ – ಫೆಬ್ರವರಿ) ತಿಂಗಳುಗಳಲ್ಲಿ ಕಂಡುಬರುತ್ತದೆ.

ಲಕ್ಷಣಗಳು

1. ಭಾಗದ ಎಳೆಗರಿ ಹಳದಿ ಬಣ್ಣಕ್ಕೆ ತಿರುಗುವುದು ರೋಗದ ಪ್ರಾರಂಭಿಕ ಲಕ್ಷಣ. ನಂತರ ಗರಿಯು ಕಂದು ಬಣ್ಣಕ್ಕೆ ತಿರುಗಿ ಸಂಪೂರ್ಣ ಸಾಯುವುದು.

2. ಈ ಹಂತದಲ್ಲಿ ರೋಗ ಪೀಡಿತ ಗರಿಯನ್ನು ಕೈಯಿಂದ ಎಳೆದಾಗ ಸುಲಭವಾಗಿ ಹೊರಕ್ಕೆ ಬರುತ್ತದೆ.

3. ಕಾಲಕ್ರಮೇಣ ಸೋಂಕಿನಿಂದಾಗಿ ಮರದ ಸುಳಿ ಸಂಪೂರ್ಣವಾಗಿ ಕೊಳೆತು ಸಾಯುತ್ತದೆ. ಸುಳಿಕೊಳೆ ಪೀಡಿತ ಮರಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಕೊಳೆತ ಭಾಗದಿಂದ ಹೊರಹೊಮ್ಮುವ ದುರ್ವಾಸನೆಯಿಂದಲೂ ಈ ರೋಗವನ್ನು ಗುರುತಿಸಬಹುದು.

4.ರೋಗವನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಗಿಡಕ್ಕೆ ಸೂಕ್ತ ಚಿಕಿತ್ಸೆ ಮಾಡುವುದರಿಂದ ಹೊಸ ಸುಳಿ ಬರುವುದಲ್ಲದೆ ಪೀಡಿತ ಮರವನ್ನು ಉಳಿಸಿಕೊಳ್ಳಬಹುದು.

5.ಈ ರೋಗ ಗಾಳಿ ಹಾಗೂ ಕೀಟಗಳ ಮೂಲಕ ಸಹ ಹರಡುತ್ತದೆ. ರೋಗಪೀಡಿತ ಮರದ ತುದಿಯನ್ನು ಉದ್ದಕ್ಕೆ ಸೀಳಿ ಅದರಲ್ಲಿರುವ ದುರ್ವಾಸನೆಯಿಂದ ಕೂಡಿದ ರಸವನ್ನು ಹೊರ ತೆಗೆಯಬೇಕು.

ನಿರ್ವಹಣಾ ಕ್ರಮಗಳು:

1.ರೋಗಪೀಡಿತ ಮರದ ಸುಳಿಯ ಕೊಳೆತ ಅಂಗಾಂಶವನ್ನು ಒಂದು ಹರಿತವಾದ ಚಾಕುವಿನಿಂದ ತೆಗೆದು ಬೋರ್ಡೋ ಮಿಶ್ರಣದ ಪೇಸ್ಟ್ ಅಥವಾ ತಾಮ್ರದ ಆಕ್ಸಿಕ್ಲೋರೈಡ್ (ಬ್ಲೈಟಾಕ್ಸ್) ಪೇಸ್ಟ್ ಲೇಪಿಸುವುದು.

2.ಶಿಲೀಂಧ್ರನಾಶಕ ಲೇಪನ ಮಾಡಿದ ಭಾಗವನ್ನು ಪ್ಲಾಸ್ಟಿಕ್ ಹಾಳೆ ಅಥವಾ ಅಡಿಕೆ ಸೋಗೆಯಿಂದ ಮುಚ್ಚುವುದರಿಂದ ಕೀಟಗಳಿಂದ ರೋಗ ಹರಡುವುದನ್ನು ತಡೆಯಬಹುದಲ್ಲದೆ ಮಳೆಯಿಂದ ಶಿಲೀಂಧ್ರನಾಶಕ ಸೋರಿ ಹೋಗುವುದನ್ನು ತಡೆಯಬಹುದು.

3.ಕ್ರಮವರಿತು ಪ್ರತಿ ವರ್ಷ ಶೇಕಡ ೧ ರ ಬೋರ್ಡೋ ದ್ರಾವಣ ಅಥವಾ ಶೇಕಡ ೦.೩ ರ ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣದಿಂದ ಸುಳಿ ಸಂಪೂರ್ಣವಾಗಿ ನೆನೆಯುವ ಹಾಗೆ ಸಿಂಪರಣೆ ಮಾಡುವುದರಿಂದ ರೋಗದ ಹರಡುವಿಕೆಯನ್ನು ತಡೆಗಟ್ಟಬಹುದು.

4.ಪರ್ಯಾಯವಾಗಿ ಅಂತರ್‌ವ್ಯಾಪಿ ಶಿಲೀಂಧ್ರನಾಶಕ ಮೆಟಲಾಕ್ಸಿಲ್ + ಮ್ಯಾಂಕೋಜೆಬ್ ಶೇಕಡ ೦.೩ ರಂತೆ ಬಳಸಿ ರೋಗ ಹತೋಟಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-

ಸಂತೋಷ್ ನಿಲುಗುಳಿ, ವಿಜ್ಞಾನಿಗಳು ಹಾಗೂ ತೋಟಗಾರಿಕಾ ಸಲಹೆಗಾರರು,  ಸಿದ್ಧಾರ್ಥ ಅಗ್ರಿ ಸಲ್ಯೂಷನ್ಸ, 9916359007

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror