ಅಡಿಕೆ ರೇಟು ಹೀಗ್ಯಾಕೆ ? |ಸಂಸ್ಥೆಯ ಪ್ರಮುಖರಿಗೆ ಧಾರಣೆ ಹೆಚ್ಚು ಏಕೆ ? ಆರಂಭವಾಗಿದೆ ಬೆಳೆಗಾರರ ನಡುವೆ ಚರ್ಚೆ….!

November 30, 2020
11:22 PM

ಅಡಿಕೆ ಬೆಳೆಗಾರ ಸಂಸ್ಥೆಯ ಪ್ರಮುಖರಿಗೆ ಆ ದಿನದ ಅಡಿಕೆ ಮಾರುಕಟ್ಟೆಗಿಂತಲೂ ಹೆಚ್ಚಿನ ಧಾರಣೆ…!. ಸಾಮಾನ್ಯ ಸದಸ್ಯರಿಗೆ ಆ ದಿನದ ಧಾರಣೆ…!. ಹೀಗೊಂದು ಚರ್ಚೆ ಈಗ ಅಡಿಕೆ ಬೆಳೆಗಾರರ ನಡುವೆ ಆರಂಭವಾಗಿದೆ. ಏನಿದು ಚರ್ಚೆ ?

Advertisement
Advertisement

ಅಡಿಕೆ ಬೆಳೆಗಾರರಿಗೆ ಕಳೆದ ಕೆಲವು ಸಮಯಗಳಿಂದ ಉತ್ತಮ ಧಾರಣೆ ಲಭ್ಯವಾಗುತ್ತಿದೆ. ಅದರ ಜೊತೆಗೆ ಧಾರಣೆಯಲ್ಲಿ  ಏರಿಳಿತವೂ ಕಂಡುಬರುತ್ತಿದೆ. ಸಾಮಾನ್ಯ ಬೆಳೆಗಾರರು ಅಡಿಕೆ ಯಾವಾಗ ನೀಡಬೇಕು ಎಂಬ ಗೊಂದಲದಲ್ಲೇ ಇರುತ್ತಾರೆ.ವಿವಿಧ ಸಂಘ ಸಂಸ್ಥೆಗಳು , ಮಾರುಕಟ್ಟೆ ತಜ್ಞರು ಮಾಹಿತಿ ನೀಡುತ್ತಲೇ ಇರುತ್ತಾರೆ. ಹೀಗಾಗಿ ಅಡಿಕೆ ಬೆಳೆಗಾರರ ಸಂಸ್ಥೆಯ ಕಡೆಗೇ ಹೆಚ್ಚಿನ ಬೆಳೆಗಾರರು ಈಚೆಗೆ ಗಮನಹರಿಸಿದ್ದಾರೆ. ಸಂಸ್ಥೆಯ ಮೂಲಕವೇ ಅಡಿಕೆ ಮಾರುಕಟ್ಟೆಗೆ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಕ್ಯಾಂಪ್ಕೋ ಸಂಸ್ಥೆಯನ್ನೇ ಹೆಚ್ಚಾಗಿ ಬೆಳೆಗಾರರು ಆಶ್ರಯಿಸಿದ್ದಾರೆ. ಸುಮಾರು 1000  ಕೋಟಿ ರೂಪಾಯಿಗಿಂತಲೂ ಹೆಚ್ಚಿನ ವಹಿವಾಟನ್ನು ಅಡಿಕೆಯ ಮೂಲಕವೇ ಕ್ಯಾಂಪ್ಕೋ ನಡೆಸಿದೆ. ಈಗ ಬಂದಿರುವ ಚರ್ಚೆ ಸಂಸ್ಥೆಯ ಪ್ರಮುಖರಿಗೆ ಹೆಚ್ಚಿನ ಧಾರಣೆಯಲ್ಲಿ  ಅಡಿಕೆ ಖರೀದಿ ಹೇಗೆ ಸಾಧ್ಯವಾಗುತ್ತದೆ. ಸಂಸ್ಥೆಯನ್ನು ಮುನ್ನಡೆಸಬೇಕಾದ ಹಾಗೂ ಸಂಸ್ಥೆಯನ್ನು ರಕ್ಷಣೆ ಮಾಡಬೇಕಾದವರೇ ಹೀಗೆ ಮಾಡಿದರೆ ಹೇಗೆ? ಎನ್ನುವುದು  ಈಗ ಎದ್ದಿರುವ ಪ್ರಶ್ನೆ.

Advertisement

ಅಡಿಕೆ ಮಾರುಕಟ್ಟೆಯ ಆ ದಿನದ ಧಾರಣೆಗಿಂತಲೂ ಹೆಚ್ಚಿನ ಧಾರಣೆಯಲ್ಲಿ ಸಂಸ್ಥೆಯ ಪ್ರಮುಖರ ಅಡಿಕೆಯನ್ನು ಖರೀದಿ ಮಾಡಿರುವುದು ಈಗ ಬೆಳಕಿಗೆ ಬಂದಿರುವ ಸಂಗತಿ.

ನವೆಂಬರ್‌  14  ರಂದು ಹಳೆ ಅಡಿಕೆಗೆ ಕ್ಯಾಂಪ್ಕೋ ನಿಗದಿ ಮಾಡಿರುವ ಮಾರುಕಟ್ಟೆ ದರ 385 ರಿಂದ  400 ರೂಪಾಯಿ. ಆದರೆ ಅಂದು ಕೇವಲ ದೂರವಾಣಿ ಮೂಲಕ ಮಾತುಕತೆ ನಡೆಸಿ ಸಂಸ್ಥೆಯ ಪ್ರಮುಖರೊಬ್ಬರಿಗೆ  405  ರೂಪಾಯಿ ಧಾರಣೆ ನೀಡಲಾಗಿರುವುದು  ಈಗ ಬೆಳಕಿಗೆ ಬಂದಿದೆ. ಅಂದರೆ ಕೆಜಿಯಲ್ಲಿ  5 ರೂಪಾಯಿಯಷ್ಟು ಹೆಚ್ಚು ಧಾರಣೆಯನ್ನು ನೀಡಲಾಗಿದೆ. ಬೇರೆ ಬೇರೆ ಹೆಸರಿನಲ್ಲಿ ಒಟ್ಟು ಸೇರಿಸಿ 500 ಕ್ವಿಂಟಾಲ್‌ ಗೂ ಅಧಿಕ ಅಡಿಕೆಯನ್ನು ಕ್ಯಾಂಪ್ಕೋದ ಬೈಕಂಪಾಡಿ ಬ್ರಾಂಚ್‌ ಮೂಲಕ  ಮಾರಾಟ ಮಾಡಿರುವುದು  ಬೆಳಕಿಗೆ ಬಂದಿದೆ. ಇದೇ ರೀತಿ ಹಲವು ಬಾರಿ ಮಾಡಿರುವ ಬಗ್ಗೆಯೂ ಈಗ ಗುಮಾನಿ ವ್ಯಕ್ತವಾಗಿದೆ.

Advertisement

ಅದೇ ರೀತಿ ಅಕ್ಟೋಬರ್‌  22  ರಂದು ಹಳೆ ಅಡಿಕೆಗೆ 385 ರಿಂದ  385  ರೂಪಾಯಿ ಇದ್ದ ಸಂದರ್ಭದಲ್ಲಿ 400  ರೂಪಾಯಿಗೆ   ಬೆಳ್ಳಾರೆಯ ಬ್ರಾಂಚ್‌ ಮೂಲಕ 10 ಕ್ವಿಂಟಾಲ್‌ ಅಡಿಕೆ ಮಾರಾಟ ಮಾಡಿರುವುದು  ಬೆಳಕಿಗೆ ಬಂದಿದೆ.  ಇದೇ ಮಾದರಿಯಲ್ಲಿ  ಕಾರ್ಕಳ ಬ್ರಾಂಚ್‌ ಮೂಲಕವೂ ಅಡಿಕೆಗೆ 350-398  ರೂಪಾಯಿ ಇದ್ದ ಸಂದರ್ಭದಲ್ಲಿ 405 ರೂಪಾಯಿಗೆ ಖರೀದಿ ಮಾಡಲು ಅನುಮತಿ ನೀಡಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಸಂಸ್ಥೆಗೆ ಆಗಿರುವ ನಷ್ಟ ಎಷ್ಟು ? ಸಾಮಾನ್ಯ ಬೆಳೆಗಾರರಿಗೆ ಈ ಮಾದರಿಯಲ್ಲಿ ಧಾರಣೆ ಹೆಚ್ಚುವರಿ ಮಾಡಲು ಸಾಧ್ಯವಿದೆಯೇ ? ಎಂಬುದೂ ಈಗ ಪ್ರಶ್ನೆಯಾಗಿದೆ.

ಈ ರೀತಿಯಾಗಿ ಕ್ಯಾಂಪ್ಕೋದಲ್ಲಿ ಪ್ರಮುಖರೇ ತಮಗೆ ಬೇಕಾದಂತೆ ಅಡಿಕೆ ಧಾರಣೆ ಹಾಕಿಸಿಕೊಳ್ಳುವುದರ ಬಗ್ಗೆ ಈಗ ಬೆಳೆಗಾರರ ನಡುವೆ ಚರ್ಚೆ ಆರಂಭವಾಗಿದೆ. ಈ ರೀತಿಯಾಗಿ ಮಾರುಕಟ್ಟೆ ಧಾರಣೆಗಿಂತ ಹೆಚ್ಚುವರಿಯಾಗಿ ತಮಗೆ ಮಾತ್ರವೇ ಅಡಿಕೆ ಧಾರಣೆ ಹಾಕಿಸಿಕೊಳ್ಳುವುದು  ಹೇಗೆ ಸಾಧ್ಯ ?  ಕ್ಯಾಂಪ್ಕೋ ಚುನಾವಣೆಯ ಹೊತ್ತಿಗೆ ಪ್ರಮುಖರಿಗೆ ಮಾತ್ರಾ ಈ ಧಾರಣೆ ಹೆಚ್ಚುವರಿಯ “ಟ್ರಿಕ್ಸ್ ” ಬೆಳಕಿಗೆ ಬಂದಿದೆ.

Advertisement

ಅಡಿಕೆ ಬೆಳೆಗಾರರ ಹಿತಕ್ಕಾಗಿ ಕ್ಯಾಂಪ್ಕೋ ಸಂಸ್ಥೆಯನ್ನು ವಾರಣಾಸಿ ಸುಬ್ರಾಯ ಭಟ್ಟರು  ಯಾವುದೇ ಸ್ವಾರ್ಥ ಇಲ್ಲದೆ ಕಟ್ಟಿ ಬೆಳೆಸಿ ಇದೀಗ ಸ್ವಾರ್ಥಕ್ಕಾಗಿ ಕೆಲವರು ಸಂಸ್ಥೆಯನ್ನು ಬಳಸುತ್ತಿರುವುದರ ಬಗ್ಗೆ ವಿಷಾದ ವ್ಯಕ್ತವಾಗಿದೆ. ಸಂಘಟನೆಗಳು ಈ ಬಗ್ಗೆ ಗಮನಿಸಬೇಕು, ಅಡಿಕೆ ಬೆಳೆಗಾರರ ಸಂಘಟನೆಗಳು ಕೂಡಾ ಧಾರಣೆಯ ಈ ವ್ಯತ್ಯಾಸದ ಬಗ್ಗೆ ಖಂಡಿಸಬೇಕಾದ ಅಗತ್ಯವಿದೆ ಎಂದು ಬೆಳೆಗಾರರು ಹೇಳುತ್ತಾರೆ.

ನ.14  ರಂದು CJJ ಅಡಿಕೆ ಮಾರಾಟ ಮಾಡಿರುವ ಬಿಲ್‌ ಗೆ ‌ ಆ ದಿನದ ಮಾರುಕಟ್ಟೆಗಿಂತ 405 ರೂಪಾಯಿಗೆ ಕೋಟ್‌ ಮಾಡಿರುವುದಕ್ಕೆ ಅನುಮತಿ ಕೇಳಿರುವುದು. 

Advertisement

ಇದು ಸುಳ್ಯದ ಬೆಳ್ಳಾರೆಯಲ್ಲಿ  ಮಾರಾಟ ಮಾಡಿರುವ ಬಿಲ್.‌ ಆ ದಿನದ ಅಡಿಕೆ ಮಾರುಕಟ್ಟೆ CJJ ಕ್ವಾಲಿಟಿಗೆ ಎಷ್ಟು ಇತ್ತು ?

Advertisement
ಸುಳ್ಯದ ಬೆಳ್ಳಾರೆಯಲ್ಲಿ ಮಾರಾಟ ಮಾಡಿರುವ ಇನ್ನೊಂದು ಪ್ರಕರಣ

 

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :
May 19, 2024
5:57 PM
by: The Rural Mirror ಸುದ್ದಿಜಾಲ
ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?
May 19, 2024
5:28 PM
by: The Rural Mirror ಸುದ್ದಿಜಾಲ
ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?
May 19, 2024
5:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror