ಅಡಿಕೆ ಹಳದಿ ಎಲೆರೋಗ | ಪರ್ಯಾಯ ಬೆಳೆಗೆ ಪೈಲೆಟ್ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ |

Advertisement
News Summary
ಅಡಿಕೆ ಬೆಳೆಗಾರರನ್ನು ಕಾಡುವ ಬಹುದೊಡ್ಡ ಸಮಸ್ಯೆ ಅಡಿಕೆ ಹಳದಿ ಎಲೆರೋಗ. ಹಲವು ವರ್ಷಗಳಿಂದ ಈ ಸಮಸ್ಯೆ ಇದೆ. ಇದೀಗ ಲಭ್ಯವಾದ ಅನುದಾನದಲ್ಲಿ 2.25 ಕೋಟಿ ಪರ್ಯಾಯ ಬೆಳೆಗೆ ಹಾಗೂ  1 ಕೋಟಿ ಮೊತ್ತವನ್ನು ಸಂಶೋಧನೆಗೆ ಮೀಸಲಿಡಲಾಗುತ್ತಿದೆ.

ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ  ಅಡಿಕೆ ಹಳದಿ ಎಲೆರೋಗದಿಂದ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ರೈತರು ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೈಲೆಟ್ ಯೋಜನೆಯನ್ನು ಅನುಷ್ಠಾನಗೊಳಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ಅದರ ಜೊತೆಗೆ ರೋಗ ನಿಯಂತ್ರಣಕ್ಕೆ ಸಂಶೋಧನೆ ನಡೆಸಲು  ಬಜೆಟ್‌ನಲ್ಲಿ  ಘೋಷಿಸಿದಂತೆ ಸಂಶೋಧನೆಗೆ ಮೀಸಲಿಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

Advertisement

ಅಡಿಕೆ ಹಳದಿ ರೋಗ ಬಾಧಿತ  ತೋಟಗಳಲ್ಲಿ ಪರ್ಯಾಯ ಬೆಳೆ ಬೆಳೆಸಲು ಹಾಗೂ ರೋಗ ನಿಯಂತ್ರಣದ  ಸಂಶೋನೆಗೆ ರಾಜ್ಯ ಸರ್ಕಾರದಿಂದ ಲಭ್ಯವಾಗುವ 3.25 ಕೋಟಿ ರೂಪಾಯಿ ಮೊತ್ತದ ಸದ್ಯದ ಪ್ಯಾಕೇಜಿನಲ್ಲಿ ಮುಂಜೂರುಗೊಳಿಸಲು ಚಿಂತನೆ ನಡೆಸಲಾಗಿದೆ. ಪ್ರಸ್ತುತ ಮಂಜೂರು ಆಗಿರುವ ಅನುದಾನದಲ್ಲಿ 2.25 ಕೋಟಿ ಪರ್ಯಾಯ ಬೆಳೆಗೆ ಹಾಗೂ  1 ಕೋಟಿ ಮೊತ್ತವನ್ನು ಸಂಶೋಧನೆಗೆ ಮೀಸಲಿಡಲಾಗಿದೆ. ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ, ರೋಗ ನಿಯಂತ್ರಣದ ಬಗ್ಗೆ ಸಂಶೋಧನೆಯನ್ನು ನಡೆಸುವಂತೆ ಸಿಪಿಸಿಆರ್‌ಐಗೆ ತಿಳಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಆರ್.ನಾಯ್ಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Advertisement
Advertisement
Advertisement

ಇಲಾಖೆ ನಡಸಿದ ಸಮೀಕ್ಷೆಯಲ್ಲಿ ಸಾಕಷ್ಟು ಮಂದಿ ಪರ್ಯಾಯ ಬೆಳೆ ಬೆಳೆಯಲು ಆಸಕ್ತಿ ತೋರಿದ್ದರು. ಆದರೆ ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಆರ್ಥಿಕ ಬಲ ಇಲ್ಲದ ಕಾರಣ ಪ್ರೋತ್ಸಾಹಧನ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ  ರೈತರು ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೈಲೆಟ್ ಯೋಜನೆಯನ್ನು ಅನುಷ್ಠಾನಗೊಳಿಸಲು ಇಲಾಖೆ ಮುಂದಾಗಿದೆ. ಹಾಲಿ ಇರುವ ರೋಗ ಬಾಧಿತ ತೋಟಗಳ ನಡುವೆ ಪರ್ಯಾಯ ಬೆಳೆ ಪ್ರಾರಂಭಿಸಿ, ರೈತರ ಆದಾಯ ಹೆಚ್ಚಿಸುವ ಮೊದಲ ಹೆಜ್ಜೆಯಾಗಿದೆ. ರೈತರು ಆಸಕ್ತಿ ಹೊಂದಿರುವ  ಯಾವುದೇ ಬೆಳೆಗಳನ್ನು ಬೆಳೆಸಲು ಅವಕಾಶ ಇದೆ. ಇದರಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬಳಕೆಗೂ ಅವಕಾಶ ಇರುತ್ತದೆ. ಹೀಗಾಗಿ ರೈತರಿಗೆ ಕಡಿಮೆ ವೆಚ್ಚದಲ್ಲಿ  ಕೃಷಿ ಮಾಡುವ ಅವಕಾಶ ಇರುತ್ತದೆ.

ಹಳದಿ ಎಲೆ ರೋಗ ಸಂಶೋಧನೆ ಹಾಗೂ ರೋಗನಿರೋಧಕ ತಳಿ ಅಭಿವೃದ್ಧಿ ಅಥವಾ ಇತರ ಸಂಶೋಧನೆಗಳು,  ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ, ರೋಗ ನಿಯಂತ್ರಣದ ಬಗ್ಗೆ ಸಂಶೋಧನೆಯನ್ನು ಈಗಾಗಲೇ ವಿಟ್ಲದ ಸಿಪಿಸಿಆರ್‌ಐ ನಡೆಸುತ್ತಿದೆ. ಇನ್ನಷ್ಟು ನಿಖರವಾಗಿ ಸಂಶೋಧನೆಗೆ ಆದ್ಯತೆ ನೀಡುವಂತೆ ಸಿಪಿಸಿಆರ್‌ಐಗೆ ಮನವಿ ಮಾಡಲಾಗಿದೆ.

Advertisement
Advertisement

ಒಟ್ಟಿನಲ್ಲಿ ಅಡಿಕೆ ಬೆಳೆಗಾರರು ಹಳದಿ ಎಲೆರೋಗದಿಂದ ಕಂಗಾಲಾಗುತ್ತಿರುವ ವೇಳೆ ರೋಗ ನಿರೋಧಕ ತಳಿ ಹಾಗೂ ಪರ್ಯಾಯ ಬೆಳೆಯತ್ತ ಕೃಷಿಕರನ್ನು ಉತ್ತೇಜಿಸಲು ಕೆಲಸ ಈಗ ಆರಂಭವಾಗಿದೆ. ಇದು ಪಾಸಿಟಿವ್‌ ಆಗಿರುವ ಫಲಿತಾಂಶ ದೊರೆಯಲಿ ಎಂಬುದು ರೈತರ ಆಶಯ.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಅಡಿಕೆ ಹಳದಿ ಎಲೆರೋಗ | ಪರ್ಯಾಯ ಬೆಳೆಗೆ ಪೈಲೆಟ್ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ |"

Leave a comment

Your email address will not be published.


*