ಅಡಿಕೆ ಹಳದಿ ರೋಗ ಸಾವಯವ ಕೃಷಿಯಿಂದ ನಿಯಂತ್ರಣವೇ ? | ಮರ್ಕಂಜದ ಕೃಷಿಕ ಬಾಲಕೃಷ್ಣ ಏನು ಹೇಳುತ್ತಾರೆ ?

October 8, 2021
10:48 AM

ಅಡಿಕೆ ಹಳದಿ ಎಲೆ ರೋಗ  ಈಗ ವೇಗವಾಗಿ ವಿಸ್ತರಣೆಯಾಗುತ್ತಿದೆ. ಸಂಪಾಜೆ ಪ್ರದೇಶದಲ್ಲಿ ಮಾತ್ರಾ ಕಂಡುಬರುತ್ತಿದ್ದ ರೋಗ ಈಗ ಮರ್ಕಂಜ ಸೇರಿದಂತೆ ಹಲವು ಕಡೆಗಳಲ್ಲಿ  ಕಂಡುಬಂದಿದೆ. ಈ ರೋಗ  ನಿಯಂತ್ರಣಕ್ಕೆ ಹಲವು ಕೃಷಿಕರು ವಿವಿಧ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ  ಮರ್ಕಂಜದ ಬಾಲಕೃಷ್ಣ ಅವರು ಸಾವಯವ ಕೃಷಿಯ ಪ್ರಯತ್ನ ಮಾಡಿದ್ದಾರೆ. ಇದರಿಂದ ಹರಡುವಿಕೆ ನಿಧಾನವಾಗಿದೆ ಎನ್ನುತ್ತಾರೆ.

ಅಡಿಕೆ ಹಳದಿ ಎಲೆ ರೋಗ ನಿವಾರಣೆಗೆ ವಿವಿಧ ಪ್ರಯತ್ನ ಕೃಷಿಕರೇ ಮಾಡಿದ್ದಾರೆ. ಕೃಷಿ ವಿಜ್ಞಾನಿಗಳ ರೀತಿಯಲ್ಲಿಯೇ ಹಲವು ಪ್ರಯತ್ನ ಮಾಡಿದವರು ಇದ್ದಾರೆ. ಅದರಲ್ಲಿ  ಸಾವಯವ ಕೃಷಿಯೂ ಒಂದು ವಿಧಾನ.ಸಾವಯವ ಕೃಷಿಯಿಂದ  ರೋಗ ವಿಸ್ತರಣೆಯ ಪ್ರಭಾವ ಕಡಿಮೆಯಾಗಿದೆ ಎಂದು ಹೇಳುತ್ತಾರೆ. ಅಡಿಕೆ ಹಳದಿ ಎಲೆ ರೋಗವು ಇಂತಹ ತೋಟಗಳಿಗೆ ನಿಧಾನವಾಗಿ ಬರುತ್ತದೆ ಮತ್ತು ಹರಡುತ್ತವೆ ಎಂದು ಹೇಳುತ್ತಾರೆ. ಇಂತಹ ಕೃಷಿ ಕೂಡಾ ಇಂದು ಹಳದಿ ಎಲೆ ರೋಗ ಪೀಡಿತ ಪ್ರದೇಶದಲ್ಲಿ ಅಗತ್ಯವಾಗಿದೆ. ರೋಗ ವಿಸ್ತರಣೆಯನ್ನು ಸ್ವಲ್ಪ ನಿಧಾನವಾಗಿಸಬಹುದು ಎಂಬುದು ಸಾವಯವ ಕೃಷಿಕರ ಸಲಹೆಯಾಗಿದೆ.

ಮರ್ಕಂಜದ ಕೃಷಿಕ ಬಾಲಕೃಷ್ಣ ಅವರ ತೋಟದಲ್ಲಿ ಕಳೆದ ಐದು ವರ್ಷದ ಹಿಂದೆ ರೋಗ ಕಂಡುಬಂದಿತ್ತು. ಆಗಲೇ ವಿಸ್ತರಣೆಯಾಗಿತ್ತು, ತಕ್ಷಣವೇ ಸಾವಯವ ಕೃಷಿ ಆರಂಭಿಸಿದರು. ಆ ತೋಟದಲ್ಲಿ ರೋಗ ವಿಸ್ತರಣೆ ಕಡಿಮೆಯಾಗಿದೆ ಎನ್ನುವುದು ಅವರ ಅಭಿಪ್ರಾಯ. ಆದರೆ ರೋಗವೇ ಬರುವುದಿಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ದೇಶಾದ್ಯಂತ 9.25 ಕೋಟಿ ರೈತ ಐಡಿ ನಿರ್ಮಾಣ | ರಸಗೊಬ್ಬರ ಬ್ಲಾಕ್‌ ಮಾರ್ಕೆಟ್‌ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಸೂಚನೆ
April 4, 2026
7:34 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ
April 3, 2026
3:55 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror