Advertisement
MIRROR FOCUS

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

Share

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ ಕಾರಣವಾಗಬಹುದು ಎಂಬ ಹೊಸ ಸಮೀಕ್ಷಾ ಅಧ್ಯಯನವು ಈಗ ಅಡಿಕೆಯ ಬಗ್ಗೆ ಹೊರಹಾಕಿದೆ. ಇತ್ತೀಚೆಗೆ ಪ್ರಕಟವಾದ ಸಮಗ್ರ ವಿಮರ್ಶೆ ಪ್ರಕಾರ, ಅಡಿಕೆಯು ಕ್ಯಾನ್ಸರ್‌, ಹೃದಯ ಸಂಬಂಧಿ ರೋಗಗಳು ಹಾಗೂ ಮೆಟಾಬಾಲಿಕ್ ಸಮಸ್ಯೆಗಳಿಗೂ ನೇರ ಸಂಬಂಧ ಹೊಂದಿದೆಯಂತೆ..!

ಜಾಗತಿಕ ಮಟ್ಟದಲ್ಲಿ ತಂಬಾಕು, ಮದ್ಯ ಮತ್ತು ಕೆಫೀನ್ ನಂತರ ಅಡಿಕೆ ಅತ್ಯಂತ ಹೆಚ್ಚು ಬಳಸುವ ಮನೋಪ್ರೇರಕ ಪದಾರ್ಥವೆಂದು ಗುರುತಿಸಲಾಗಿದೆ. ವಿಶ್ವದಾದ್ಯಂತ ಸುಮಾರು 60 ಕೋಟಿ ಜನರು ನಿಯಮಿತವಾಗಿ ಅಡಿಕೆ ಸೇವಿಸುತ್ತಿದ್ದಾರೆ. ದಕ್ಷಿಣ ಏಷ್ಯಾ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶಗಳಲ್ಲಿ ಇದರ ಬಳಕೆ ಹೆಚ್ಚು.

ಅಡಿಕೆಯಲ್ಲಿ ಇರುವ ‘ಅರೇಕೋಲಿನ್’ (Arecoline) ಎಂಬ ಆಲ್ಕಲಾಯ್ಡ್ ಮೆದುಳಿನ ವ್ಯವಸ್ಥೆಯನ್ನು ಉದ್ದೀಪನಗೊಳಿಸುತ್ತದೆ. ಇದು ನಿಕೋಟಿನ್‌ ನಂತಹ ಪರಿಣಾಮ ಉಂಟುಮಾಡಿ ಅವಲಂಬನೆ ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಅಡಿಕೆ ಜಗಿಯುವವರಿಗೆ ಚಟವಾಗುತ್ತದೆ.

ಹೀಗೆ ದೀರ್ಘಕಾಲದ ಅಡಿಕೆ ಜಗಿಯುವುದು ‘ಓರಲ್ ಸಬ್‌ಮ್ಯೂಕಸ್ ಫೈಬ್ರೋಸಿಸ್’ ಸೇರಿದಂತೆ ಬಾಯಿ ಮತ್ತು ಕುತ್ತಿಗೆ ಕ್ಯಾನ್ಸರ್‌ಗೆ ಕಾರಣವಾಗುವ ಸಾಧ್ಯತೆ ಇದೆ. ತಂಬಾಕು ಸೇರಿಸದಿದ್ದರೂ ಅಪಾಯ ಕಡಿಮೆಯಾಗುವುದಿಲ್ಲ ಎಂಬುದು ಅಧ್ಯಯನದ ಅಭಿಪ್ರಾಯ. ಅಷ್ಟೇ ಅಲ್ಲ, ಅಡಿಕೆ ಸೇವನೆ ರಕ್ತದೊತ್ತಡ ಏರಿಕೆ, ಉರಿಯೂತ, ಅಥೆರೋಸ್ಕ್ಲೆರೋಸಿಸ್ ಹಾಗೂ ಇಸ್ಕೆಮಿಕ್ ಹೃದಯ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸೂಚಿಸಲಾಗಿದೆ. ಇನ್ನು ಇನ್ಸುಲಿನ್ ಪ್ರತಿರೋಧ, ಡಿಸ್ಲಿಪಿಡಿಮಿಯಾ, ಒಬೆಸಿಟಿ ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ಗಳಿಗೆ ಅಡಿಕೆ ಸೇವನೆಯ ಸಂಬಂಧ ಕಂಡುಬಂದಿದೆ  ಎಂದು ಈ ವರದಿ ಹೇಳಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈ ಅಧ್ಯಯನವು ಅಡಿಕೆ ವ್ಯಸನವನ್ನು ಒಂದು ದೊಡ್ಡ ಸಾರ್ವಜನಿಕ ಆರೋಗ್ಯ ಸವಾಲು ಎಂದು ಗುರುತಿಸಿದೆ. ವಿಶೇಷವಾಗಿ ಯುವಜನರಲ್ಲಿ ಅರಿವು ಮೂಡಿಸುವುದು ಮತ್ತು ವ್ಯಸನ ನಿವಾರಣೆಗೆ ವೈಜ್ಞಾನಿಕ ಕ್ರಮಗಳನ್ನು ರೂಪಿಸುವ ಅಗತ್ಯವನ್ನು ಒತ್ತಿಹೇಳಲಾಗಿದೆ.  ಈ ಅಧ್ಯಯನ ವರದಿಯು journal Translational Psychiatry ನಲ್ಲಿ ಪ್ರಕಟವಾಗಿದ್ದು, ಮೆಡಿಕಲ್‌ ನೆಟ್‌ ನಲ್ಲಿ ವಿಶ್ಲೇಷಿಸಲಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…

24 hours ago

ಕೃಷಿಕರ ಜೀವನಾಡಿ ‘ಕ್ಯಾಂಪ್ಕೊ’ ವಿಟ್ಲ ಶಾಖೆಗೆ ನೂತನ ಕಟ್ಟಡ | ಮಾರ್ಚ್ 27ರಂದು ಶಂಕುಸ್ಥಾಪನೆ

ವಿಟ್ಲದಲ್ಲಿ ₹12 ಕೋಟಿ ವೆಚ್ಚದ ಕ್ಯಾಂಪ್ಕೊ ನೂತನ ಕಟ್ಟಡಕ್ಕೆ ಮಾರ್ಚ್ 27ರಂದು ಶಂಕುಸ್ಥಾಪನೆ…

1 day ago

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

2 days ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

3 days ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

4 days ago