ಚೀನಾದ ಪ್ರಸಿದ್ಧ ಯುವ ಗಾಯಕ ಫೂ ಸಾಂಗ್ ತನ್ನ 36 ನೇ ವಯಸ್ಸಿನಲ್ಲಿ ಬಾಯಿಯ ಕ್ಯಾನ್ಸರ್‌ನಿಂದ ನಿಧನರಾದರು. ಅದಕ್ಕೂ ಮುನ್ನ ಆತ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬಾಯಿ ಕ್ಯಾನ್ಸರ್ ಗೆ ಅಡಿಕೆ ಕಾರಣ ಎಂದು ಹೇಳಿದ್ದರು. ಹೀಗಾಗಿ ಈಗ ಚೀನಾದ ಹಲವು ಕಡೆ ಅಡಿಕೆ ಮತ್ತೆ ಸದ್ದು ಮಾಡುತ್ತಿದೆ. ಚೀನಾ ಕೆಲವು ವರ್ಷದ ಹಿಂದೆಯೇ ಅಡಿಕೆ ಜಾಹೀರಾತು ನಿಷೇಧ ಮಾಡಿತ್ತು. ಇದೀಗ ಗಾಯಕನ ಹೇಳಿಕೆ ಬಳಿಕ ಮತ್ತೆ ಅಡಿಕೆ ಸದ್ದು ಮಾಡಲು ಆರಂಭಿಸಿದೆ.
36 ವರ್ಷದ ಗಾಯಕ 6 ವರ್ಷಗಳ ಕಾಲ ಅಡಿಕೆ ಹಾಗೂ ವೀಳ್ಯದೆಲೆಯನ್ನು ಜಗಿಯುತ್ತಿದ್ದರು. ಈ ನಡುವೆ ಬಾಯಿ ಕ್ಯಾನ್ಸರ್ ಬಂದಿತ್ತು. ಈ ಒಂದು ಪ್ರಕರಣದ ಮೂಲಕ ಚೀನಾದಲ್ಲಿ ಮತ್ತೆ ಅಡಿಕೆಯ ಮೇಲೆ ಋಣಾತ್ಮಕ ಅಭಿಪ್ರಾಯಗಳು ಹೆಚ್ಚಾಗುತ್ತಿದೆ. ಸೆಪ್ಟೆಂಬರ್ 10, 2022 ರಂದು, ಗಾಯಕ ಫೂ ಸಾಂಗ್ ನಿಧನರಾದರು. ಫೂ ಸಾಂಗ್ ಒಮ್ಮೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬಾಯಿಯ ಕ್ಯಾನ್ಸರ್ ಅಡಿಕೆಯಿಂದ ಉಂಟಾಗಿದೆ ಎಂದು ಹೇಳಿದ್ದರು. ಅಂದಿನಿಂದ, ಅಡಿಕೆ ಮಾರಾಟವನ್ನು ನಿಷೇಧಿಸುವ ವದಂತಿಯೂ ಹರಿಡಿದೆ. ಸಾರ್ವಜನಿಕ ಅಭಿಪ್ರಾಯವೂ ಈಗ ಅಲ್ಲಿ ಸದ್ದು ಮಾಡುತ್ತಿದೆ. ಹಲವೆಡೆ ಅಡಿಕೆ ಮಾರಾಟವನ್ನು ನಿಷೇಧಿಸಲಾಗಿದೆ. ಸದ್ಯ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಆಹಾರ ಸುರಕ್ಷತಾ ಅಧಿಕಾರಿಗಳು ಆಹಾರ ಪ್ಯಾಕೇಜಿಂಗ್ ಮತ್ತು ಲೇಬಲ್‌ಗಳೊಂದಿಗೆ ಅಡಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮತಿಸುವುದಿಲ್ಲ ಎಂದು ವರದಿಯಾಗಿದೆ.
ಚೀನಾದ ಅಂಕಿಅಂಶಗಳ ಪ್ರಕಾರ ಪ್ರಪಂಚದಾದ್ಯಂತ ಸುಮಾರು 600 ಮಿಲಿಯನ್ ಜನರು ಅಡಿಕೆಯನ್ನು ಜಗಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಚೀನಾದ ಕೆಲವು ಪ್ರದೇಶದಲ್ಲಿ ಮಾತ್ರವೇ ಅಡಿಕೆ ಬೆಳೆಯುತ್ತಾರೆ. ಚೀನಾದ ಹುನಾನ್ ಪ್ರಾಂತ್ಯದಲ್ಲಿ ಅಡಿಕೆಯನ್ನು ವಾರ್ಷಿಕವಾಗಿ ಸುಮಾರು 2 ಲಕ್ಷ ಟನ್ ವರೆಗೆ ಬೆಳೆಯುತ್ತಾರೆ. ಬೇಡಿಕೆಯು 7-8 ಲಕ್ಷ ಟನ್‌ಗಳಷ್ಟಿದೆ. ಚೀನಾದಾದ್ಯಂತ ಅಡಿಕೆ ಮೌತ್ ಫ್ರೆಶ್ನರ್ ತಯಾರಕ ಸಂಸ್ಥೆಗಳು 20 ರಷ್ಟು ಇದ್ದಾರೆ. ಇಡೀ ಚೀನಾದಲ್ಲಿ ಅಡಿಕೆ ಬೆಳೆಯುವ ಪ್ರದೇಶ ಕಿರಿದಾಗಿದೆ. ಆದರೆ ಉದ್ಯಮಗಳು ಹೆಚ್ಚಿವೆ. ಈ ಎಲ್ಲದರ ನಡುವೆಯೂ ಅಡಿಕೆಯ ಬಗ್ಗೆ ಋಣಾತ್ಮಕವಾದ ಸಂದೇಶವನ್ನು ಚೀನಾದಲ್ಲಿ ಬಿತ್ತಲಾಗುತ್ತಿದೆ. ಅಷ್ಟೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಅಡಿಕೆಯ ಮೇಲೆ ಪರಿಣಾಮವಾಗುವಂತೆ ಅಲ್ಲಿ ಪ್ರಯತ್ನವಾಗುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೂ ತರಲಾಗುತ್ತಿದೆ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…