ಅಡಿಕೆ ಬೆಳೆಯ ಬಗ್ಗೆ 45 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪವಾಗಿದೆ. ಅರುಣಾಚಲ ಪ್ರದೇಶ ಉಪಮುಖ್ಯಮಂತ್ರಿ ಚೌನಾ ಮೇ ಅವರು, ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಅರುಣಾಚಲ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿನ ಅಡಿಕೆ ಬೆಳೆ ರಕ್ಷಣೆಗೆ ಒತ್ತು ನೀಡುವ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು.
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 45 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅರುಣಾಚಲ ಪ್ರದೇಶ ಉಪಮುಖ್ಯಮಂತ್ರಿ ಚೌನಾ ಮೇ, ಇಂದು ದೇಶದಲ್ಲಿ ಅಡಿಕೆ ಬೆಳೆ ರೈತರಿಗೆ ಆದಾಯ ತರುವ ಉತ್ತಮ ಬೆಳೆಯಾಗಿದೆ. ಸಣ್ಣ ರೈತರಿಗೂ ಆದಾಯ ಗಳಿಕೆಯ ಬೆಳೆಯಾಗಿದೆ. ಇಲ್ಲಿ ದೊಡ್ಡ ಬೆಳೆಗಾರರೂ ಇದ್ದಾರೆ. ಹೀಗಾಗಿ ಅಡಿಕೆ ಬೆಳೆ ವಿಸ್ತರಣೆಗೆ ಇಲ್ಲಿ ಅವಕಾಶ ಇದೆ. ಲಭ್ಯ ಇರುವ ಭೂಮಿಯಲ್ಲಿ ಅಡಿಕೆ ಬೆಳೆ ಬೆಳೆಯಬಹುದಾಗಿದೆ. ಹೀಗಾಗಿ ಅಡಿಕೆಯ ಜಿಎಸ್‌ಟಿ ವ್ಯಾಪ್ತಿಯಿಂದ ಬರುವ ಆದಾಯದಲ್ಲಿ ಬೆಳೆ ರಕ್ಷಣೆಗೆ ಮುಂದಾಗಬೇಕು ಎಂದರು. ಇದಕ್ಕಾಗಿ ಸರಕು ಮತ್ತು ಸೇವಾ ತೆರಿಗೆ ಜಾಲ (ಜಿಎಸ್‌ಟಿಎನ್) ಮಂಡಳಿಯಲ್ಲಿ ಮಂಡಳಿಯಲ್ಲಿ ರಾಜ್ಯ ಅಧಿಕಾರಿಗಳನ್ನು ಕಡ್ಡಾಯವಾಗಿ ನಾಮನಿರ್ದೇಶನ ಮಾಡಬೇಕು. ರಾಜ್ಯಮಟ್ಟದ ಅಧಿಕಾರಿಗಳು ಮಂಡಳಿಯಲ್ಲಿ ನೇಮಕ ಮಾಡಬೇಕು ಎಂದು ವಿಷಯ ಮಂಡಿಸಿದ್ದರು.
ಇದಕ್ಕಾಗಿ ರಾಜ್ಯದಲ್ಲಿ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಬಹುದು ಎಂದೂ ವಿಷಯ ಪ್ರಸ್ತಾಪಿಸಿದರು. ಜಿಎಸ್‌ಟಿ ಕೌನ್ಸಿಲ್ ಅರುಣಾಚಲ ಪ್ರದೇಶ ಉಪಮುಖ್ಯಮಂತ್ರಿ ಚೌನಾ ಮೇ ಅವರ ಸಲಹೆಯನ್ನು ಒಪ್ಪಿಕೊಂಡು ಜಿಎಸ್‌ಟಿ ಕೌನ್ಸಿಲ್ ಅರುಣಾಚಲ ಪ್ರದೇಶದಿಂದ ಸರಕು ಮತ್ತು ಸೇವಾ ತೆರಿಗೆ ಜಾಲ (ಜಿಎಸ್‌ಟಿಎನ್) ಮಂಡಳಿಯಲ್ಲಿ ಮಧ್ಯಮ ಮಟ್ಟದ ಅಧಿಕಾರಿಗಳನ್ನು ನೇಮಿಸಲು ಒಪ್ಪಿಕೊಂಡಿದೆ ಹಾಗೂ ರಾಜ್ಯದಲ್ಲಿ ತನ್ನದೇ ಆದ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಅಭಿಪ್ರಾಯಪಟ್ಟಿತು.
ಜಿಎಸ್‌ಟಿ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳು ಮತ್ತು ದೇಶದ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಮಂತ್ರಿಗಳು ಭಾಗವಹಿಸಿದ್ದರು.
ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…
ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ, ಅಡಿಕೆ ಬೆಳೆ ಕಡಿಮೆ, ಧಾರಣೆ ಏರಿಕೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್…