ಅಡಿಕೆ ಬೆಳೆಯ ಬಗ್ಗೆ ಬಗ್ಗೆ ಕೇಂದ್ರ ಸರ್ಕಾರವು ಅಡಿಕೆ ಮಂಡಳಿ ಸ್ಥಾಪನೆಯ ಬಗ್ಗೆ ರಾಯಚೂರು ಸಂಸದ ಜಿ.ಕುಮಾರ ನಾಯಕ್ ಅವರು ಕೇಳಿರುವ ಪ್ರಶ್ನೆಗೆ ಸ್ಫಷ್ಟ ಉತ್ತರವನ್ನು ಕೇಂದ್ರ ಸರ್ಕಾರ ನೀಡಿಲ್ಲ.……… ಮುಂದೆ ಓದಿ…….

ರಾಯಚೂರು ಸಂಸದ ಜಿ.ಕುಮಾರ ನಾಯಕ ಅವರು, ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನವನ್ನು ಸೆಳೆದಿದ್ದರು. ಈ ಸಂಬಂಧ ಸಂಸತ್ತಿನಲ್ಲಿ ಮಾತನಾಡಿರುವ ಸಂಸದ ಕುಮಾರ ನಾಯಕ ಅವರು, ಕರ್ನಾಟಕದ 10 ಜಿಲ್ಲೆಗಳಲ್ಲಿ 7 ಲಕ್ಷ ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಅಡಿಕೆ ಕೃಷಿಯನ್ನು ಮಾಡಲಾಗುತ್ತಿದೆ. ಅಲ್ಲದೆ ಪ್ರತಿ ವರ್ಷ 11 ಲಕ್ಷ ಟನ್‌ಗೂ ಹೆಚ್ಚು ಅಡಿಕೆ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಎಲೆ ಚುಕ್ಕಿ ರೋಗ ಹಾಗೂ ಹಳದಿ ರೋಗ ಎನ್ನುವುದು ಸೇರಿದಂತೆ ವಿವಿಧ ಸಮಸ್ಯೆಗಳಿಂದ ಅಡಿಕೆ ಬೆಳೆಗಾರ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ, ಅಡಿಕೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವುದು, ರೋಗ ನಿಯಂತ್ರಣ, ನಷ್ಟ ಪರಿಹಾರ ಕೊಡುವ ಅವಶ್ಯಕತೆ ಇದೆ ಎಂದು ಅವರು ಆಗ್ರಹಿಸಿದ್ದರು. ಅದರ ಜೊತೆಗೆ ಅಡಿಕೆ ಕೃಷಿಯ ಅಭಿವೃದ್ಧಿಗಾಗಿ ಅಡಿಕೆ ಮಂಡಳಿಯನ್ನು ಸ್ಥಾಪಿಸಲು ಸರ್ಕಾರವು ಪರಿಗಣಿಸಿದೆಯೇ ಎಂದು ಪ್ರಶ್ನೆ ಮಾಡಿದ್ದರು.
ಈ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ವಾಣಿಜ್ಯ ಹಾಗೂ ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ್ ಉತ್ತರಿಸಿದ್ದು, ದೇಶದಲ್ಲಿ ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಅನುಷ್ಠಾನಗೊಳಿಸುತ್ತಿದೆ. ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ ನರ್ಸರಿಗಳ ಅಭಿವೃದ್ಧಿ, ಸಸ್ಯ ಸಂರಕ್ಷಣೆ, ನೀರಾವರಿ, ಅಡಿಕೆಗಾಗಿ ಪ್ರಾತ್ಯಕ್ಷಿಕೆಯನ್ನು ಹಾಗೂ ಮೂಲಭೂತ ಸೌಕರ್ಯ ಒದಗಿಸುತ್ತದೆ.
ಅಡಿಕೆಯ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪ್ರಸ್ತುತ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಪ್ರಾದೇಶಿಕ ಕೇಂದ್ರಗಳು ಸಿಪಿಸಿಆರ್‌ಐ ವಿಟ್ಲ ಹಾಗೂ ಅಸ್ಸಾಂನ ಕಹಿಕುಚಿ ಮತ್ತು ಪಶ್ಚಿಮಬಂಗಾಳದ ಮೋಹಿತ್ ನಗರದಲ್ಲಿ ಕೈಗೊಳ್ಳಲಾಗುತ್ತಿದೆ. ಸಂಸ್ಥೆಯು ತಳಿ ಅಭಿವೃದ್ಧಿ, ಕುಬ್ಜ ಮಿಶ್ರತಳಿಗಳು, ಡ್ರೋನ್‌ಗಳ ಮೂಲಕ ಸಿಂಪಡಿಸಲು ಕಾರ್ಯಾಚರಣಾ ವಿಧಾನ, ಕುಬ್ಜ ಮಿಶ್ರತಳಿಗಳು ಮತ್ತು ರೋಗ ನಿರೋಧಕ ತಳಿ ಅಭಿವೃದ್ಧಿ, ಅಂಗಾಂಶ ಕೃಷಿ ಹವಾಮಾನ ಮತ್ತು ಅಡಿಕೆಯ ಎಲೆಚುಕ್ಕಿ ಅಧ್ಯಯನ, ರೋಗಗಳು, ಕೀಟಗಳು ಮತ್ತು ಪೋಷಕಾಂಶಗಳ ಕೊರತೆಗಳ, ರೋಗನಿರ್ಣಯಗಳ ಬಗ್ಗೆ ಗಮನಹರಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ಅರೆಕಾನಟ್ ಮತ್ತು ಸಾಂಬಾರ ಮಂಡಳಿಯು ತಂತ್ರಜ್ಞಾನಗಳನ್ನು ಉತ್ತೇಜಿಸುತ್ತಿದೆ. ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಿಶ್ರ ಬೇಸಾಯದ ಬಗ್ಗೆಯೂ ಮಾಹಿತಿ ನೀಡುತ್ತದೆ. ಕೃಷಿ ಸಚಿವಾಲಯ, ತೀವ್ರತರವಾದ ಅಗತ್ಯ ಇದ್ದಾಗಮಾತ್ರಾ ಮಧ್ಯಪ್ರವೇಶಿಸುತ್ತದೆ. ರೋಗಗಳು ಮತ್ತು ಪರಿಹಾರ ಕ್ರಮಗಳನ್ನು ಸೂಚಿಸುತ್ತದೆ ಮತ್ತು ಕೋರಿಕೆಯ ಮೇರೆಗೆ ಹಣಕಾಸಿನ ನೆರವು ನೀಡುತ್ತದೆ ಎಂದು ಉತ್ತರದಲ್ಲಿ ಸಚಿವಾಲಯ ಹೇಳಿದೆ. 2024-25 ರಲ್ಲಿ ಕರ್ನಾಟಕದಲ್ಲಿ ಎಲೆಚುಕ್ಕಿ ರೋಗ ನಿರ್ವಹಣೆಗಾಗಿ MIDH(The Mission for Integrated Development of Horticulture) ಯೋಜನೆಯಡಿ 3700 ಲಕ್ಷ ರೂಪಾಯಿಯನ್ನು ನೀಡಲಾಗಿದೆ. ಅಡಿಕೆ ಬೆಳೆಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬೆಳೆ ವಿಮಾ ಯೋಜನೆಯಾಗಿದ್ದು ಅದು ಕೂಡಾ ನೆರವಾಗುತ್ತದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.