ರಬ್ಬರ್(rubber), ಕೊಕ್ಕೋ(cocoa) ಇವರುಗಳ ಮಧ್ಯೆ ಜಂಭದಲ್ಲಿ ಚರ್ಚೆ ನಡೆಯುತ್ತಿದೆ. ಏಕೆಂದರೆ ಹಳ್ಳಿ(village), ಪಟ್ಟಣಗಳ(city) ಮಾರುಕಟ್ಟೆಯಲ್ಲಿ(market) ಈಗ ಇವರದ್ದೇ ದರ್ಬಾರ್. ಕೊಕ್ಕೋ ರಬ್ಬರ್ ನ್ನು ಅಪಹಾಸ್ಯ ಮಾಡುತಿತ್ತು ಹೀಗೆ, ನಾನು ನಿನ್ನ ಬೆಲೆಯಲ್ಲಿ(price hike) ಹಿಂದಿಕ್ಕದೆ ‘ನಾ ನಿನ್ನ ಬೆನ್ನಟ್ಟದೆ ಬಿಡಲಾರೆ’ ಎಂದಿತ್ತು, ಕೊಕ್ಕೋದ ಮಾತು ಕೇಳಿ ರೋಸಿ ಹೋದ ರಬ್ಬರ್ ಎಂದಿತ್ತು ಹೀಗೆ, ‘ನೀ ನನ್ನ ಅಟ್ಟಿಸಿಕೊಂಡು ಬಂದರೂ ನೀ ನನ್ನ ಗೆಲ್ಲಲಾರೆ ‘ಎಂದಿತ್ತು.ಈಗ ಕೊಕ್ಕೋ ಬೆಲೆ 160, ರಬ್ಬರ್ ಬೆಲೆ 175, ಕಾಳುಮೆಣಸು 500, ಅಡಿಕೆ 350…!
ಇವರುಗಳ ಒಣ ಜಂಬ ಕೇಳಿಸಿಕೊಂಡ ಕರಿಮೆಣಸು(pepper) ಮತ್ತು ಅಡಿಕೆ(arecanut) ಇವರುಗಳ ಗತ್ತು ಅಹಂಕಾರವನ್ನು ಸಾಕಷ್ಟು ಬಾರಿ ಅನುಭವಿಸಿದವರು ಒಬ್ಬರೊಂದಿಗೆ ಒಬ್ಬರು ಪರಸ್ಪರ ಹೀಗೆ ಮಾತನಾಡಿಕೊಳ್ಳುತ್ತಿದ್ದರು. ಅವರುಗಳ ಈಗಿನ ಗತ್ತು ದೌಲತ್ತು ನೋಡು ಎಂದು ಕರಿಮೆಣಸು ಅಡಿಕೆಯಲ್ಲಿ ಹೇಳಿತ್ತು ಹೀಗೆ ಬೆಲೆ ಸ್ಪರ್ಧೆಯಲ್ಲಿ ನಾನು 800 ಮೈಲ್ ಓಡಿದವನು ನಾನು, ಈಗ ನೋಡು ನನಗೆ 500 ಮೈಲ್ ಓಡಲು ಸಹ ಬಿಡುವುದಿಲ್ಲ ಈಗಿನ ಬೆಲೆ ಇಲಾಖೆ ಎಂದು ದುಃಖದಿಂದ ತನ್ನ ಅಳಲು ತೋಡಿಕೊಂಡಿತ್ತು.
ಕರಿಮೆಣಸಿನ ಮಾತು ಆಲಿಸಿದ ಅಡಕೆ ಅಯ್ಯೋ ನನ್ನ ಪರಿಸ್ಥಿತಿ ಕೇಳು. ನಾನು ನಿನ್ನಷ್ಟು ಎತ್ತರಕ್ಕೆ ಏರದಿದ್ದರೂ 550 ರಷ್ಟು ಮೈಲ್ ಓಡಿದ್ದೇನೆ. ಒಂದೆರಡು ವರ್ಷ ಭಾರತ, ವಿದೇಶದಲ್ಲಿ ನನ್ನದೇ ಹವಾ, ಈಗ ನೋಡು ಇಲ್ಲಿನ ಕ್ರೀಡಾ ಇಲಾಖೆ ಗಟ್ಟಿ ಮುಟ್ಟಾಗಿದ್ದ ನನ್ನನ್ನು ದೂರ ತಳ್ಳಿ ವಿದೇಶದಿಂದ ಎರವಲು ತಂದು ನನ್ನನ್ನು ಮೂಲೆಗೆ ಹಾಕುವ ಪ್ರಯತ್ನ ನಡೆಯುತ್ತಿದೆ. ಆದರೂ ನನ್ನ ಪ್ರತಿಭೆಗೆ ಕುಂದು ಬಂದಿಲ್ಲ. ಒಂದಲ್ಲ ಒಂದು ದಿನ ಈಗಿನ 350,430 ಮೈಲ್ ದಾಟಿ 500 ರ ಗಡಿ ತಲುಪುವ ವಿಶ್ವಾಸ ಇಟ್ಟು ಕೊಂಡಿರುವೆ.
ಕೊನೆಗೆ ಅಡಿಕೆ ಕರಿಮೆಣಸು ಇಬ್ಬರು ಒಂದು ಅಂದಾಜುಗೆ ಬಂದವರು ನೋಡುವ, ಕೊಕ್ಕೋ, ರಬ್ಬರ್ ಇವರ ದರ್ಬಾರ್ ಎಲ್ಲಿತನಕ ತಲುಪುತ್ತದೆ ಎಂದು ಕಾದು ನೋಡುವ. ನಾವಿಬ್ಬರು ಅವರ ಇಬ್ಬರ ಓಟದ ಬಗ್ಗೆ ನಂಜಿ ಕಕ್ಕುವುದು ಬೇಡ. ನಮ್ಮನ್ನು ಮೀರಿ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಓಡಿದರೂ ಹೊಟ್ಟೆಕಿಚ್ಚು ಪಡುವುದು ಬೇಡವೆಂದು ಪರಸ್ಪರ ಕೈ ಕುಲುಕಿ ಅಲ್ಲಿಂದ ತೆರಳಿದರು.
ಈ ನಾಲ್ಕು ಜನರ ಮಾತನ್ನು ಕೇಳಿಸಿಕೊಂಡ ಗೇರು ಬೀಜ ನಾಳೆ ನಾನು ನಿಮ್ಮ ಮುಂದೆ ಕಾಣಿಸಿಕೊಳ್ಳುವೆ ಎಂದು ಮರೆಯಲ್ಲಿ ಇತ್ತು. ನಾಳೆ ನೋಡುವ ಇವನ ವಿಚಾರ.ನಾಳೆ ನಮ್ಮ ಗುಡ್ಡೆಯಲ್ಲಿ ಕೆಂಪು, ಹಳದಿ ಲೈಟ್ ರೀತಿ ಕಾಣುವ ಇವನನ್ನು ಭೇಟಿ ಮಾಡುವ ಆಲೋಚನೆಯಲ್ಲಿ ಇದ್ದೇನೆ. ಇಂದು ಆ ಕಡೆ ಒಮ್ಮೆ ದೂರದಿಂದ ನೋಡಿದೆ ನಮ್ಮ ಪೂರ್ವಜರಾದ ಕೋತಿಗಳು ಮರವನ್ನು ಸುತ್ತುವರಿದು ಅಲುಗಾಡಿಸುತ್ತಿದ್ದರು.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…