#Arecanut | ಅಡಿಕೆಯ ಬಣ್ಣದ ಸೀರೆ | ನೈಸರ್ಗಿಕ ಬಣ್ಣದೊಂದಿಗೆ ಮೆರುಗು ನೀಡಿದ ಉಡುಪಿ ಸೀರೆ |

August 5, 2023
7:42 PM
ಅಡಿಕೆ ಬಣ್ಣದ ಉಡುಪಿ ಸೀರೆಯು ಇದೀಗ ಗಮನ ಸೆಳೆಯುತ್ತಿದೆ. ಅನೇಕ ವರ್ಷಗಳ ಬಳಿಕ ನೈಸರ್ಗಿಕ ಬಣ್ಣದ ಸೀರೆ ದಕ್ಷಿಣ ಕನ್ನಡ ಜಿಲ್ಲೆಯ ತೀರಾ ಹಳೆಯ ನೇಕಾರಿಕಾ ಸಂಘದ ಮೂಲಕ ನಡೆಯುತ್ತಿದೆ. ಕದಿಕೆ ಟ್ರಸ್ಟ್‌ ಸಹಜ ಬಣ್ಣ ತಯಾರಿಕೆಯ ಕಾರ್ಯಕ್ಕೆ ಮುಂದಡಿ ಇರಿಸಿದೆ.

ನೈಸರ್ಗಿಕ ಬಣ್ಣದ ಕೈ ಮಗ್ಗ ಸೀರೆಗಳು ಈಗ ಟ್ರೆಂಡಿಂಗ್‌ ಸಾಲಿಗೆ ಸೇರುತ್ತಿದೆ. ಸಹಜ ಬಣ್ಣದ ಸೀರೆಯು ನಾರಿಯರ ಗಮನ ಸೆಳೆಯುತ್ತಿದ್ದು, ಅಡಿಕೆ ಚೊಗರಿನಿಂದ ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸೀರೆ ತಯಾರಾಗುತ್ತಿದೆ. ಉಡುಪಿ ಸೀರೆಯು ಹೊಸ ರೀತಿಯಲ್ಲಿ ಕಂಗೊಳಿಸುತ್ತಿದೆ. ಕೈ ಮಗ್ಗದ ಉಡುಪಿ ಸೀರೆ ಗುಡಿ ಕೈಗಾರಿಕೆಗೆ ಪುನಶ್ಚೇತನ ನೀಡಿರುವ ಕದಿಕೆ ಟ್ರಸ್ಟ್‌ ,ತಾಳಿಪಾಡಿ ನೇಕಾರರ ಸಹಕಾರ ಸಂಘದ ಸಹಯೋಗದೊಂದಿಗೆ ಈ ಸಹಜ ಬಣ್ಣದ ಉಡುಪಿ ಸೀರೆಗಳು ಈಚೆಗೆ ಬಿಡುಗಡೆಗೊಂಡಿತು.

Advertisement
Advertisement
ಸೀರೆ ತಯಾರಿಕೆಯಲ್ಲಿ

2018 ರಲ್ಲಿ ಚರಕ ಸಂಸ್ಥೆಯ ಮಾರ್ಗದರ್ಶನದೊಂದಿಗೆ ತಾಳಿಪಾಡಿ ನೇಕಾರರ ಸಂಘದ ಸಹಯೋಗದೊಂದಿಗೆ ಆರಂಭಗೊಂಡ ಉಡುಪಿ ಸೀರೆ ಗುಡಿ ಕೈಗಾರಿಕೆಗೆ ಪುನಶ್ಚೇತನ ಕಾರ್ಯ ಇದೀಗ ಸಹಜ ಬಣ್ಣದ ಹಂತಕ್ಕೆ ಬಂದಿದೆ.  ಸೆಲ್ಕೋ ನೆರವಿನಿಂದ ದೊರಕಿದ ಉಪಕರಣಗಳಿಂದ ಹಾಗೂ ಮಾಮಿ ಸ್ಕೂಲ್‌ ಆಫ್‌ ನ್ಯಾಚುರಲ್‌ ಡೈಯಿಂಗ್‌ ಸ್ಲಾಲರ್‌ಶಿಪ್‌ ಗೈಡ್‌ಲೈನ್ಸ್‌ನಲ್ಲಿ ಕದಿಕೆ ಟ್ರಸ್ಟ್‌ ಅಧ್ಯಕ್ಷೆ ಮಮತಾ ರೈ ಅವರು  ಅಡಿಕೆ ಚೊಗರಿನಿಂದ ಪರಿಸರ ಸ್ನೇಹಿ ಬಣ್ಣ ತಯಾರಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ತಾಳಿಪಾಡಿ ನೇಕಾರರ ಸಹಕಾರ ಸಂಘದ ನೇಕಾರರ ಮೂಲಕ ಸೀರೆಯನ್ನೂ ತಯಾರಿಸಿ ಗಮನಸೆಳೆದಿದ್ದಾರೆ.

Advertisement

ಮುಂದಿನ ದಿನಗಳಲ್ಲಿ ಕಾಡು ಬಾದಾಮಿ ಎಲೆ, ದಾಳಿಂಬೆ ಸಿಪ್ಪೆ, ಮಂಜಿಷ್ಟ, ನೀಲಿ ಗೊಂಡೆ ಹೂ ಮುಂತಾದ ಸಸ್ಯ ಮೂಲದ ಬಣ್ಣಗಳಿಂದ ನೈಜ ಬಣ್ಣದ ಉಡುಪಿ ಸೀರೆಗಳನ್ನು ಸಿದ್ಧಪಡಿಸುವ ಗುರಿಯಿದೆ. ಅಡಿಕೆ ಬಣ್ಣದ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಲಿದೆ  ಎಂದು ಹೇಳುತ್ತಾರೆ ಕದಿಕೆ ಟ್ರಸ್ಟ್‌ನ ಮಮತಾ ರೈ.

Advertisement

ರಾಸಾಯನಿಕ ಬಣ್ಣಗಳಿಂದ ಸಿದ್ಧಪಡಿಸಿದ ಸೀರೆಗಳಿಗಿಂತ ಪರಿಸರ ಸ್ನೇಹಿಯಾಗಿರುವ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಾದ ಸೀರೆಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಬುಕಿಂಗ್‌ ಬಂದಿದೆ ಎಂದು ಹೇಳುತ್ತಾರೆ ನೇಕಾರಿಕೆಯನ್ನು ಮಾಡುತ್ತಿರುವ ಸಾಧನಾ ಅವರು.

ಸಹಜ ಬಣ್ಣಗಳು
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror