ನೈಸರ್ಗಿಕ ಬಣ್ಣದ ಕೈ ಮಗ್ಗ ಸೀರೆಗಳು ಈಗ ಟ್ರೆಂಡಿಂಗ್ ಸಾಲಿಗೆ ಸೇರುತ್ತಿದೆ. ಸಹಜ ಬಣ್ಣದ ಸೀರೆಯು ನಾರಿಯರ ಗಮನ ಸೆಳೆಯುತ್ತಿದ್ದು, ಅಡಿಕೆ ಚೊಗರಿನಿಂದ ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸೀರೆ ತಯಾರಾಗುತ್ತಿದೆ. ಉಡುಪಿ ಸೀರೆಯು ಹೊಸ ರೀತಿಯಲ್ಲಿ ಕಂಗೊಳಿಸುತ್ತಿದೆ. ಕೈ ಮಗ್ಗದ ಉಡುಪಿ ಸೀರೆ ಗುಡಿ ಕೈಗಾರಿಕೆಗೆ ಪುನಶ್ಚೇತನ ನೀಡಿರುವ ಕದಿಕೆ ಟ್ರಸ್ಟ್ ,ತಾಳಿಪಾಡಿ ನೇಕಾರರ ಸಹಕಾರ ಸಂಘದ ಸಹಯೋಗದೊಂದಿಗೆ ಈ ಸಹಜ ಬಣ್ಣದ ಉಡುಪಿ ಸೀರೆಗಳು ಈಚೆಗೆ ಬಿಡುಗಡೆಗೊಂಡಿತು.
2018 ರಲ್ಲಿ ಚರಕ ಸಂಸ್ಥೆಯ ಮಾರ್ಗದರ್ಶನದೊಂದಿಗೆ ತಾಳಿಪಾಡಿ ನೇಕಾರರ ಸಂಘದ ಸಹಯೋಗದೊಂದಿಗೆ ಆರಂಭಗೊಂಡ ಉಡುಪಿ ಸೀರೆ ಗುಡಿ ಕೈಗಾರಿಕೆಗೆ ಪುನಶ್ಚೇತನ ಕಾರ್ಯ ಇದೀಗ ಸಹಜ ಬಣ್ಣದ ಹಂತಕ್ಕೆ ಬಂದಿದೆ. ಸೆಲ್ಕೋ ನೆರವಿನಿಂದ ದೊರಕಿದ ಉಪಕರಣಗಳಿಂದ ಹಾಗೂ ಮಾಮಿ ಸ್ಕೂಲ್ ಆಫ್ ನ್ಯಾಚುರಲ್ ಡೈಯಿಂಗ್ ಸ್ಲಾಲರ್‌ಶಿಪ್ ಗೈಡ್‌ಲೈನ್ಸ್‌ನಲ್ಲಿ ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಅವರು ಅಡಿಕೆ ಚೊಗರಿನಿಂದ ಪರಿಸರ ಸ್ನೇಹಿ ಬಣ್ಣ ತಯಾರಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ತಾಳಿಪಾಡಿ ನೇಕಾರರ ಸಹಕಾರ ಸಂಘದ ನೇಕಾರರ ಮೂಲಕ ಸೀರೆಯನ್ನೂ ತಯಾರಿಸಿ ಗಮನಸೆಳೆದಿದ್ದಾರೆ.
ಮುಂದಿನ ದಿನಗಳಲ್ಲಿ ಕಾಡು ಬಾದಾಮಿ ಎಲೆ, ದಾಳಿಂಬೆ ಸಿಪ್ಪೆ, ಮಂಜಿಷ್ಟ, ನೀಲಿ ಗೊಂಡೆ ಹೂ ಮುಂತಾದ ಸಸ್ಯ ಮೂಲದ ಬಣ್ಣಗಳಿಂದ ನೈಜ ಬಣ್ಣದ ಉಡುಪಿ ಸೀರೆಗಳನ್ನು ಸಿದ್ಧಪಡಿಸುವ ಗುರಿಯಿದೆ. ಅಡಿಕೆ ಬಣ್ಣದ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಲಿದೆ ಎಂದು ಹೇಳುತ್ತಾರೆ ಕದಿಕೆ ಟ್ರಸ್ಟ್‌ನ ಮಮತಾ ರೈ.
ರಾಸಾಯನಿಕ ಬಣ್ಣಗಳಿಂದ ಸಿದ್ಧಪಡಿಸಿದ ಸೀರೆಗಳಿಗಿಂತ ಪರಿಸರ ಸ್ನೇಹಿಯಾಗಿರುವ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಾದ ಸೀರೆಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಬುಕಿಂಗ್ ಬಂದಿದೆ ಎಂದು ಹೇಳುತ್ತಾರೆ ನೇಕಾರಿಕೆಯನ್ನು ಮಾಡುತ್ತಿರುವ ಸಾಧನಾ ಅವರು.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…