MIRROR FOCUS

ಅಡಿಕೆ ಉತ್ಪಾದನೆ ಮತ್ತು ರಫ್ತಿಗೆ ಉತ್ತೇಜನ ನೀಡಲು ನೇಪಾಳ ಚಿಂತನೆ |

Share

ವಿವಿಧ ದೇಶಗಳಲ್ಲಿ ಅಡಿಕೆ ಹಾನಿಕಾರಕ ಸೇರಿದಂತೆ ವಿವಿಧ ಆಪಾದನೆಗಳ ಮೂಲಕ ಅಡಿಕೆ ಬೆಳೆ ನಿಯಂತ್ರಣ ಕಡೆಗೆ ಚಿಂತನೆ ಮಾಡುತ್ತಿದ್ದಾರೆ. ಆದರೆ ನೇಪಾಳವು ಅಲ್ಲಿನ ಕೃಷಿಕರ ಹಿತದೃಷ್ಟಿಯಿಂದ ಅಡಿಕೆ ಕೃಷಿಯನ್ನು ಉತ್ತೇಜನ ಮಾಡಲು ಹಾಗೂ ಅಡಿಕೆ ರಫ್ತು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.…..ಮುಂದೆ ಓದಿ….

Advertisement

ನೇಪಾಳದ  ಆರ್ಥಿಕ ವ್ಯವಹಾರಗಳು ಮತ್ತು ಆಡಳಿತ ಸಮಿತಿಯು  ಅಡಿಕೆ ರಫ್ತು ಹಾಗೂ ನಿರ್ವಹಣೆಯ ಬಗ್ಗೆ ವಿಶೇಷವಾದ ಸಭೆ ನಡೆಸಿ ಅಡಿಕೆ ಆಮದು ಹಾಗೂ ರಫ್ತು ಬಗ್ಗೆ ಚರ್ಚೆ ನಡೆಸಿ, ಅಡಿಕೆ ಉತ್ಪಾದನೆ ಮತ್ತು ಸರಬರಾಜು ಎರಡನ್ನೂ ಉತ್ತೇಜಿಸುವ ಅಗತ್ಯದ ಬಗ್ಗೆ ಮಾತುಕತೆ ನಡೆಸಿದೆ.

ಅಡಿಕೆ ಉತ್ಪಾದನೆ ಮತ್ತು ಆಮದು ಹೆಚ್ಚಳವು ದೇಶದ ಆದಾಯ ಸಂಗ್ರಹಕ್ಕೆ  ಕೊಡುಗೆ ನೀಡುತ್ತದೆ.ಪ್ರಸಕ್ತ ಹಣಕಾಸು ವರ್ಷದಲ್ಲಿ ಝಾಪಾದಲ್ಲಿ ಅಡಿಕೆ ಸಂಸ್ಕರಣೆಗೆ ಸಾಕಷ್ಟು ಹಣ ನಿಗದಿಪಡಿಸಲಾಗಿದೆ.ಈಗ ನೇಪಾಳವು ಬೇರೆ ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತದೆ ಎಂದು ನೇಪಾಳದ ಕೈಗಾರಿಕೆ, ವಾಣಿಜ್ಯ ಮತ್ತು ಸರಬರಾಜು ಸಚಿವ ದಾಮೋದರ್ ಭಂಡಾರಿ ಸಭೆಯಲ್ಲಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ. ಇದರ ಜೊತೆಗೇ, ದೇಶದಲ್ಲಿಯೇ ಆಹಾರ ಧಾನ್ಯಗಳ ಉತ್ಪಾದನೆಯನ್ನು ಕೂಡಾ ಹೆಚ್ಚಿಸುವ ಅಗತ್ಯವನ್ನು ಅವರು ಹೇಳಿದರು.

ಸದ್ಯ ನೇಪಾಳದ 15 ಪ್ರದೇಶಗಳು ಅಡಿಕೆ ಉತ್ಪಾದನೆಗೆ ಉತ್ತಮವಾದ ವಾತಾವರಣವನ್ನು ಹೊಂದಿದೆ. ಸದ್ಯ ಝಾಫಾ ಸೇರಿದಂತೆ 4 ಜಿಲ್ಲೆಗಳಲ್ಲಿ ಮಾತ್ರವೇ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಅಡಿಕೆ ರಫ್ತು ಹಾಗೂ ಆದಾಯ ಸಂಗ್ರಹದಲ್ಲಿ ಅಡಿಕೆಯ ಕೊಡುಗೆಯ ಜೊತೆಗೆ ಸರ್ಕಾರವು ರಫ್ತು ಮಾಡಬಹುದಾದ ದೇಶಗಳ ಬಗ್ಗೆಯೂ ಅನ್ವೇಷಣೆ ಮಾಡಬೇಕು ಎಂದೂ ಸಭೆಯಲ್ಲಿ ರೈತ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಫ್ತು ಮಾಡುವ ವೇಳೆ ನೇಪಾಳದ ಅಡಿಕೆಯನ್ನಷ್ಟೇ ರಫ್ತು ಮಾಡಲು ಸೂಕ್ತವಾದ ವ್ಯವಸ್ಥೆಯೂ ಅಗತ್ಯ ಇದೆ ಎಂದು ರೈತ ಮುಖಂಡರು ಹೇಳಿದ್ದಾರೆ.ಇಲ್ಲದಿದ್ದರೆ ಇದೇ ವಿಚಾರವೂ ಮುಂದೆ ಚರ್ಚೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಾನವ-ಆನೆ ಸಂಘರ್ಷ ತಡೆಗೆ ಕ್ರಮ | 200 ಕೋ. ರೂ. ವೆಚ್ಚದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ

ರಾಜ್ಯದಲ್ಲಿ 6395 ಆನೆಗಳಿದ್ದು, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೂರಾರು…

8 minutes ago

ಬೃಹಸ್ಪತಿ ಅಂದರೆ ಜ್ಞಾನವಂತ

ಬದುಕಿನ ದೀವಿಗೆ ಜ್ಞಾನ. ಅದು ಜ್ಞಾನ ದೀವಿಗೆ. ಜ್ಞಾನಕ್ಕೆ ಮುಪ್ಪಿಲ್ಲ, ಸಾವಿಲ್ಲ. ಅದು…

1 hour ago

ಪಶು ಸಖಿಯರ ಮಾಸಿಕ ಗೌರವಧನ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಬೇಸಿಗೆಯಲ್ಲಿ 89 ಲಕ್ಷ ಲೀಟರ್‌ಗೆ…

2 hours ago

“ಲಾಭ ದೃಷ್ಟಿ ಯೋಗ” ಎಂದರೇನು…?

ಹೆಚ್ಚಿನ ಮಾಹಿತಿಗೆ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

3 hours ago

ರಾಜ್ಯದಲ್ಲಿ ಆರು ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸುವ ಗುರಿ

ಕರ್ನಾಟಕದಲ್ಲಿ 80 ಸಕ್ಕರೆ ಕಾರ್ಖಾನೆಗಳಿದ್ದು, ಈ ಪೈಕಿ ಕೆಲವು ಮುಚ್ಚಿಹೋಗಿವೆ. ಈಗಿರುವ ಕಾರ್ಖಾನೆಗಳಿಗೆ…

5 hours ago

ಕೊಪ್ಪಳ | ಕುಡಿಯುವ ನೀರು  ಮತ್ತು ಮೇವಿನ ಸಮಸ್ಯೆ ಕುರಿತು  ಮುನ್ನೆಚ್ಚರಿಕಾ ಕ್ರಮ

ಕುಡಿಯುವ ನೀರು  ಮತ್ತು ಮೇವಿನ ಸಮಸ್ಯೆ ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು…

11 hours ago