ಅಡಿಕೆ ಬೆಳೆಗೆ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಜಾರಿಯಾಗಲಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಅಡಿಕೆ ಬೆಳೆಗೆ ಹವಾಮಾನ ಆಧಾರಿತ ಬೆಳೆವಿಮೆ ಜಾರಿಯಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿಇನ್ನಷ್ಟೇ ಜಾರಿಯಾಗಬೇಕಿದೆ. ಆಗಸ್ಟ್.1 ರಿಂದ ಈ ವಿಮೆ ಜಾರಿಗೆ ಬರುವಂತೆ ಸಿದ್ಧತೆಯಾಗುತ್ತಿದೆ. ಮುಂದಿನ ವಾರ ನೋಟಿಫಿಕೇಶನ್ ಬಂದು ನಂತರ ಬೆಳೆ ವಿಮೆ ಪ್ರೀಮಿಯಂ ಪಾವತಿಗೆ ದಿನ ನಿಗದಿಯಾಗಬಹುದು. ಕಡಿಮೆ ಅವಧಿಯಲ್ಲಿ ಪ್ರೀಮಿಯಂ ಪಾವತಿಯ ಸಂದರ್ಭ ಸಹಕಾರಿ ಸಂಘಗಳಲ್ಲಿ ಹೆಚ್ಚಿನ ಒತ್ತಡ ಕಂಡುಬರದಂತೆ ಈಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ ಸಂದರ್ಭ ಬರಬಹುದು.
ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ಅಡಿಕೆಯ ಬಗ್ಗೆ ಜೂನ್ ಅಂತ್ಯವಾದರೂ ಯಾವುದೇ ಪ್ರಸ್ತಾಪ ಇರಲಿಲ್ಲ. ಬಳಿಕ ರಾಜಕೀಯ ಪಕ್ಷಗಳು, ಅಧಿಕಾರಿಗಳು, ಬೆಳೆಗಾರ ಸಂಘಟನೆಗಳು ಚರ್ಚೆ ಆರಂಭವಾದವು. ವಾಸ್ತವದಲ್ಲಿ ಬೆಳೆ ವಿಮೆಗೆ ಟೆಂಡರ್ ಕರೆದರೂ ವಿಮಾ ಕಂಪನಿಗಳು ಭಾಗವಹಿಸದ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು. ಇದೀಗ ಎರಡನೇ ಬಾರಿಗೆ ಕರೆದಿರುವ ಟೆಂಡರ್ ನಲ್ಲಿ ವಿಮಾ ಕಂಪನಿ ಭಾಗವಹಿಸಿದೆ. ಹಲವು ಜಿಲ್ಲೆಗಳಲ್ಲಿ ನೀತಿ ನಿಯಮಗಳು ಅಂತಿಮವಾಗಿ ಬೆಳೆ ವಿಮೆ ಜಾರಿಯಾಗಿದೆ.

ಆದರೆ ಅಡಿಕೆ , ಮಾವು ಸಹಿತ ದೀರ್ಘಾವಧಿ ಇತರ ಕೆಲವು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆವಿಮೆಗೆ ಮಾತ್ರಾ ವಿಮಾ ಕಂಪನಿಗಳು ಭಾಗವಹಿಸಿರಲಿಲ್ಲ. ಹೀಗಾಗಿ ಸಮಸ್ಯೆ ಆಗಿತ್ತು. ಇದೀಗ ಮತ್ತೆ ವಿಮಾ ಕಂಪನಿಗಳು ಟೆಂಡರ್ ನಲ್ಲಿ ಭಾಗವಹಿಸಿದೆ. ದಕ್ಷಿಣ ಕನ್ನಡ ಸಹಿತ ಕೆಲವು ಜಿಲ್ಲೆಗಳ ಬೆಳೆಗಳೂ ಇದರಲ್ಲಿ ಸೇರಿವೆ. ಇನ್ನಷ್ಟೇ ಅಂತಿಮ ರೂಪ ಪಡೆಯಬೇಕಿದೆ. ಮುಂದಿನ ವಾರದಲ್ಲಿ ಅಂತಿಮವಾಗಿ ನೋಟಿಫೀಕೇಶನ್ ಬಂದ ಬಂದ ವಿಮಾ ಪ್ರೀಮಿಯಂ ಪಾವತಿ ದಿನ ನಿಗದಿಯಾಗುತ್ತದೆ. ಜು.31 ರ ಒಳಗಾಗಿ ಪ್ರೀಮಿಯಂ ಪಾವತಿ ಮಾಡಿ ಆ.1 ರಿಂದ ವಿಮೆ ಜಾರಿಯಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಅಡಿಕೆ , ಮಾವು ಸಹಿತ ಇತರ ಬೆಳೆಗಳಿಗೆ ವಿಮೆ ಜಾರಿಯಾಗಿದೆ. ಇನ್ನೂ ಹಲವು ಜಿಲ್ಲೆಗಳಿಗೆ ಬಾಕಿ ಇದೆ.
ಕೃಷಿಕ, ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ಅವರ ಅಭಿಪ್ರಾಯ :
ಪ್ರೀಮಿಯಂ ಪಾವತಿಗೆ ಕಡಿಮೆ ದಿನವಾದಷ್ಟು ಸಹಕಾರಿ ಸಂಘಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊರೆಯಾಗುವ ಸಾಧ್ಯತೆ ಇರುತ್ತದೆ. ಸರ್ವರ್ ಸಮಸ್ಯೆ, ಪ್ರೀಮಿಯಂ ಪಾವತಿ ವ್ಯವಸ್ಥೆ ಇತ್ಯಾದಿಗಳು ಸಮಸ್ಯೆಯಾಗಬಹುದು.