Advertisement
ಕೃಷಿ

ಹಳದಿ ಎಲೆರೋಗ ಪರಿಹಾರ ಕೊಡಿಸುವ ಜವಾಬ್ದಾರಿ ಅಧ್ಯಯನ ಸಮಿತಿ ವಹಿಸುವಂತೆ ಕ್ಯಾಂಪ್ಕೊ ಒತ್ತಾಯ |

Share

ಕ್ಯಾಂಪ್ಕೋ ಹಾಗೂ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ನೇತೃತ್ವದಲ್ಲಿ ಮಂಗಳೂರಿನ  ಓಶನ್‌ ಪರ್ಲ್‌ ನಲ್ಲಿ ಶುಕ್ರವಾರ ನಡೆದ ಅಡಿಕೆಯ  ಹಳದಿ ಎಲೆರೋಗ ಮತ್ತು ಎಲೆಚುಕ್ಕಿ ರೋಗದ ಬಗ್ಗೆ ಒಂದು ದಿನದ ವಿಚಾರ ಸಂಕಿರಣ ನಡೆಯಿತು.

Advertisement
Advertisement

ವಿಚಾರ ಸಂಕಿರಣದ  ಸಮಾರೋಪದಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್‌  ಕೊಡ್ಗಿ ಮಾತನಾಡಿ, ರೋಗಕ್ಕೆ ಶೀಘ್ರ ಔಷಧಿ ಕಂಡು ಹಿಡಿದು ರೋಗದಿಂದ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಕೊಡಿಸುವ ಜವಾಬ್ದಾರಿಯನ್ನು ಕೇಂದ್ರದಿಂದ ನೇಮಿಸಲ್ಪಟ್ಟ ಅಧ್ಯಯನ ಸಮಿತಿ ವಹಿಸಬೇಕು ಎಂದು ಒತ್ತಾಯಿಸಿದರು.

ಕ್ಯಾಂಪ್ಕೊ ಈಗಾಗಲೇ ಅಡಿಕೆ ಆಮದಿಗೆ ಕನಿಷ್ಠ ಆಮದು ಬೆಲೆಯನ್ನು ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಆ ಮನವಿಗೆ ಸಕರಾತ್ಮಕವಾಗಿ ಶಿಫಾರಸ್ಸು ಮಾಡುವಂತೆ ಡಾ.ಹೋಮಿಚೆರಿಯನ್ ಅವರಲ್ಲಿ ಮನವಿ ಮಾಡಿದರು. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಅಡಿಕೆ ರೋಗದ ಬಗ್ಗೆಅಧ್ಯಯನ ನಡೆಸಲು ಸಮತಿ ರಚನೆ ಮಾಡಿದೆ. ಕೇಂದ್ರದಿಂದ ರಚಿಸಲ್ಪಟ್ಟ ಅಧ್ಯಯನ ಸಮಿತಿಯ ಸದಸ್ಯರು ಮತ್ತು ಅಡಿಕೆ ಮತ್ತು ಸಾಂಬಾರ ಮಂಡಳಿ  ನಿರ್ದೇಶಕರಾದ ಡಾ.ಹೋಮಿಚೆರಿಯನ್ ಅವರು ವಿಜ್ಞಾನಿಗಳ ಮುಂದಾಳುತ್ವ ವಹಿಸಿದ್ದರು. ಕೃಷಿವಿಶ್ವವಿದ್ಯಾಲಯ, ನವಿಲೆಯ ವಿಜ್ಞಾನಿಗಳು ,ಕೃಷಿತಜ್ಞರು ಮತ್ತು ರೋಗಪೀಡಿತ ಪ್ರದೇಶದ ರೈತರ ವಿಚಾರ ಸಂಕಿರಣ ನಡೆಯಿತು.

ಕಾರ್ಯಕ್ರಮದಲ್ಲಿ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣ ಕುಮಾರ್‌ ಪ್ರಾಸ್ತಾವಿಕವಾಗಿ ಮಾಡಿನಾಡಿ ರೈತರ ಕಷ್ಟ ಮತ್ತು ಸಂಶೋಧನೆಯ ಅಗತ್ಯತೆಯ ಬಗ್ಗೆ ವಿವರಿಸಿದರು. ಬಳಿಕ  ವಿಜ್ಞಾನಿಗಳಾದ ಡಾ.ವಿನಾಯಕಹೆಗಡೆ, ಡಾ.ಇಂದ್ರಾಣಿಕರುಣಸಾಗರ್, ಡಾ.ಕೇಶವ ಭಟ್‌ ಮತ್ತು ಪ್ರೊಫೆಸರ್‌ ಗಂಗಾಧರ ನಾಯಕ್‌  ಹಳದಿರೋಗದ ಇತಿಹಾಸ, ಗುಣಲಕ್ಷಣಗಳು, ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳು ಮತ್ತು ಔಷಧ ಸಂಶೋಧನೆಯ ಪ್ರಗತಿಯ ಬಗ್ಗೆ ವಿಚಾರ ಮಂಡನೆ ಮಾಡಿದರು.

ಖಾಸಗಿ ಸಂಶೋಧನ ಸಂಸ್ಥೆ ಐಸಿರಿಯ ಡಾ.ನಂದಿನ ಘಂಟೆ  ವಿಚಾರ ಮಂಡನೆ ಮಾಡಿದರು. ರೈತರು ತಮ್ಮತಮ್ಮ ಅನುಭವ ಮತ್ತು ಸರಕಾರ ಹಾಗೂ ಸಹಕಾರಿ ಸಂಸ್ಥೆಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ವಿಜ್ಞಾನಿಗಳು ಸಂಶೋಧನೆ ನಡೆಸುವಾಗ ಸಂಕಷ್ಟಕ್ಕೆ ಒಳಗಾದ ರೈತರು ಮತ್ತು ಕೃಷಿ ತಜ್ಞರ ಅನುಭವ ಮತ್ತು ಮಾರ್ಗದರ್ಶನದ ಆಧಾರದಲ್ಲಿ ರೋಗ ಪರಿಹಾರದ ಸಂಶೋಧನೆ ನಡೆಸುವಂತೆ ಸಲಹೆ ನೀಡಿದರು. ಡಾ.ಹೋಮಿಚೆರಿಯನ್‌  ಮಾತನಾಡಿ ಸಂಶೋಧನೆಗೆ ಹೆಚ್ಚಿನ ಪ್ರಮಾಣದ ಹಣಕಾಸಿನ ಅವಶ್ಯಕತೆ ಇದೆ. ವಿಜ್ಞಾನಿಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಪರಿಹಾರ ಕಂಡುಕೊಳ್ಳಲು ಸಾಧ್ಯ ಇದೆ ಎಂದು  ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಯಾಂಪ್ಕೊದ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣ ಕುಮಾರ್‌ ,  ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷರುಗಳಾದ ಕೊಂಕೊಡಿ ಪದ್ಮನಾಭ,  ,ನಾಗರಾಜ ಶೆಟ್ಟಿ, , ಮಾಜಿ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕರಾದ ಎಸ್‌ ಆರ್‌ ಸತೀಶ್ಚಂದ್ರ, ರಾಜ್ಯ ಅಡಿಕೆ ಮಹಾಮಂಡಲದ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ಮ್ಯಾಮ್ಕೊಸ್ ಉಪಾಧ್ಯಕ್ಷ ಮಹೇಶ್, ತುಮಕೋಸ್ ಅಧ್ಯಕ್ಷ ಆರ್‌ ಎಂ ರವಿ, ಸಿರಸಿಯ ಟಿಎಸ್ಎಸ್ ಪ್ರತಿನಿಧಿ,  ಕ್ಯಾಂಪ್ಕೊದ ಮಾಜಿ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ ಮತ್ತು ಮಾಜಿ ನಿರ್ದೇಶಕರು ಭಾಗವಹಿಸಿದ್ದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

9 hours ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

9 hours ago

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌…

9 hours ago

ಮಾಯಾಮೃಗ ಮಾಯಾಮೃಗ….

ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…

9 hours ago

ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ  ಅಗತ್ಯ ಕ್ರಮ…

10 hours ago

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ

ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?.  ಈ ಪ್ರಶ್ನೆಗೆ ಹಲವರದು ಹಲವು…

20 hours ago