ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ, ಮಾರುಕಟ್ಟೆ, ಬೆಲೆ ಅಸ್ಥಿರತೆ ಮತ್ತು ಕೃಷಿ ನೀತಿ ಗೊಂದಲಗಳ ನಡುವೆಯೇ ಪ್ರತಿದಿನ ಹೋರಾಡಬೇಕಾಗಿದೆ. ಇದೀಗ ಕೊಳೆ ರೋಗ ನಿಯಂತ್ರಣಕ್ಕೆ ಬಳಸುವ ಕಾಪರ್ ಸಲ್ಫೇಟ್ ಮೇಲಿನ ಸುಂಕವನ್ನು ಬೇಡಿಕೆಯಂತೆ ಕಡಿಮೆ ಮಾಡದೆ 18 % ನಲ್ಲಿ ಸ್ಥಿರ ಗೊಳಿಸಿರುವುದು ಸಂಕಷ್ಟ ತಂದಿದೆ.
ಅಡಿಕೆ ಕೊಳೆ ರೋಗ (Arecanut Fruit Rot / Mahali / Anabe Roga) ನಿಯಂತ್ರಣಕ್ಕೆ ಅನಿವಾರ್ಯವಾಗಿ ಬಳಸುವ Copper Sulphate (ಮೈಲುತುತ್ತು ) ಮೇಲೆಯೇ ಸುಂಕ ವಿಧಿಸಿರುವುದು ಬೆಳೆಗಾರನ ಮೇಲಿನ ಅರ್ಥಶಾಸ್ತ್ರೀಯ ಹಾಗೂ ನೈತಿಕ ಅನ್ಯಾಯವಲ್ಲದೇ ಮತ್ತೇನೆಂದು ಹೇಳಲು ಸಾಧ್ಯ .
ಇಂದು ಹವಾಮಾನ ಬದಲಾವಣೆಯ ಪರಿಣಾಮಗಳಿಂದ Copper Sulphate ಐಚ್ಛಿಕವಲ್ಲ, ಅನಿವಾರ್ಯ. ಅಡಿಕೆ ಕೊಳೆ ರೋಗವು Phytophthora ವರ್ಗದ ಶಿಲೀಂಧ್ರದಿಂದ ಉಂಟಾಗುತ್ತದೆ. ಇದರ ನಿಯಂತ್ರಣಕ್ಕೆ ಕಾಪರ್ ಅಂಶವನ್ನೊಳಗೊಂಡ ಔಷಧಿಯು ದಶಕಗಳಿಂದ ಮಾನ್ಯಗೊಂಡಿವೆ ICAR, CPCRI, ಕೃಷಿ ವಿಶ್ವವಿದ್ಯಾಲಯಗಳು ಶಿಫಾರಸು ಮಾಡಿವೆ. ಅಂದರೆ, Copper Sulphate ಐಷಾರಾಮಿ ಕೃಷಿ ಒಳಪದಾರ್ಥವಲ್ಲ. ಇದು ಒಂದು ರೀತಿಯ ಜೀವರಕ್ಷಕ ಔಷಧದಂತೆಯೇ. ಇದಕ್ಕೆ ಸುಂಕ ವಿಧಿಸುವುದು ರೋಗಕ್ಕೆ ಔಷಧವನ್ನೇ ದುಬಾರಿಗೊಳಿಸಿದಂತೆಯೇ ಆಗಿದೆ.
ಅರ್ಥಶಾಸ್ತ್ರದ ನೆಲೆಯಲ್ಲಿ ಈ ಸುಂಕದ ಪರಿಣಾಮ, ಅರ್ಥಶಾಸ್ತ್ರದ ಮೂಲ ನಿಯಮ ಸರಳ Input cost ಹೆಚ್ಚಾದರೆ Production cost ಹೆಚ್ಚುತ್ತದೆ Production cost ಹೆಚ್ಚಿದರೆ ರೈತನ ಲಾಭ ಕುಗ್ಗುತ್ತದೆ. ಆದರೆ, ಅಡಿಕೆಯಲ್ಲಿ ಸಮಸ್ಯೆ ಇನ್ನಷ್ಟು ಗಂಭೀರ. ಬೆಲೆ ನಿರ್ಧಾರ ರೈತನ ಕೈಯಲ್ಲಿಲ್ಲ ಮಾರುಕಟ್ಟೆ ಬೆಲೆ ಇಳಿದಾಗ input cost ಕಡಿಮೆಯಾಗುವುದಿಲ್ಲ.
ಹಾಗೆ ನೋಡಿದರೆ, Copper Sulphate ಮೇಲೆ ಸುಂಕ ,ರೋಗ ನಿಯಂತ್ರಣ ಮಾಡದೇ ಬೆಳೆಗಾರನನ್ನು ಹತಾಶೆಗೆ ದೂಡುವ ಪ್ರಯತ್ನದಂತಿದೆ. ಇದರಿಂದ ಬೆಳೆ ನಾಶದ ಅಪಾಯ , ದೀರ್ಘಕಾಲೀನ ಉತ್ಪಾದನೆ ಕುಸಿತ. ಇದು ಕೇವಲ ರೈತನ ಸಮಸ್ಯೆಯಲ್ಲ; ರಾಷ್ಟ್ರದ ಅಡಿಕೆ ಉತ್ಪಾದನಾ ವ್ಯವಸ್ಥೆಯ ಮೇಲಿನ ಹೊಡೆತ. ವಿಚಿತ್ರ ಎಂದರೆ ತಂಬಾಕು ಪ್ರೇರಿತವಾದ ಬೀಡಿಗೆ ಸುಂಕ ಕಡಿಮೆ ಮಾಡಿದ್ದಾರೆ . ಬೀಡಿ, ತಂಬಾಕು ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ಸೌಲಭ್ಯ ದೊರಕಿದಂತಾಯಿತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಅಡಿಕೆ ಬೆಳೆಗಾರರು ಒಂದು ಪ್ರಶ್ನೆ ಕೇಳಲೇಬೇಕು. ಬೀಡಿ, ತಂಬಾಕು ಉತ್ಪನ್ನಗಳಿಗೆ ಸೌಲಭ್ಯ ನೀಡಿ ಅಡಿಕೆಯ ಕೃಷಿ ರೋಗ ನಿಯಂತ್ರಣದ ಔಷಧಕ್ಕೆ ಸುಂಕ ವಿಧಿಸುವುದು ಅಥವಾ ಹೆಚ್ಚಿಸುವುದು ಯಾವ ನ್ಯಾಯ? ಇದನ್ನು Agricultural input ಎಂಬಂತೆ classify ಮಾಡದಿರುವುದು ಈ ರೀತಿಯ ಸುಖಕ್ಕೆ ಕಾರಣವಾಗಿದೆ. ಬೀಡಿ ಆರೋಗ್ಯಕ್ಕೆ ಹಾನಿಕಾರಕ. Copper Sulphate ಬಳಸುವುದು ಬೆಳೆರಕ್ಷಣೆಗೆ. ಅಂದರೆ,ಉಪಭೋಗಕ್ಕೆ ರಿಯಾಯಿತಿ , ಉತ್ಪಾದನೆಗೆ ದಂಡ ವಿಧಿಸಿದಂತಾಯಿತಲ್ಲವೇ? ಇದು ಅರ್ಥಶಾಸ್ತ್ರಕ್ಕೂ ವಿರುದ್ಧ, ಸಾರ್ವಜನಿಕ ಹಿತಕ್ಕೂ ವಿರುದ್ಧ.
ಸರ್ಕಾರಕ್ಕೆ ತೋರುವ ಸುಂಕ ಆದಾಯ , ಪರ್ಯಾಯವಾಗಿ ಬೆಳೆಗಾರನಿಗೆ ಸಾಲದ ಹೊರೆ ಹೆಚ್ಚಿ ,ಕುಟುಂಬಕ್ಕೆ ಅಸ್ಥಿರ ಆದಾಯದ ಭಯವನ್ನು ಹುಟ್ಟಿಸುತ್ತದೆ. ಗ್ರಾಮೀಣ ಆರ್ಥಿಕತೆ ಕುಸಿತ ಕಾಣುತ್ತದೆ .ಇದು indirect ಟ್ಯಾಕ್ಸ್ ಆಗಿರುವುದರಿಂದ ಅತೀ ಹೆಚ್ಚು ಹೊಡೆತ ಬಡ ಮತ್ತು ಮಧ್ಯಮ ರೈತನಿಗೆ.
ಮೌನದಲ್ಲಿರುವ ಜನಪ್ರತಿನಿಧಿಗಳು : ಇಷ್ಟು ಗಂಭೀರ ವಿಷಯದಲ್ಲೂ ಸಂಸದರ ಧ್ವನಿ ಇಲ್ಲ , ಶಾಸಕರ ಪ್ರಶ್ನೆ ಇಲ್ಲ, ರೈತ ಪರ ಸಂಘಟನೆಗಳ ಮಾತಿಗೆ ಸ್ಪಂದನೆ ಕಡಿಮೆ. ಇದು ಕೇವಲ ನಿರ್ಲಕ್ಷ್ಯವಲ್ಲ, ಕೃಷಿ ವಲಯದ ಅಸಮಾನತೆಗಳ ಪ್ರತಿಬಿಂಬ. Copper Sulphate ಅನ್ನು “Essential Agricultural Input” ಎಂದು ಘೋಷಣೆ ಮಾಡಿ ಕೃಷಿ ರೋಗ ನಿಯಂತ್ರಣ ಔಷಧಗಳಿಗೆ ಸುಂಕ ಮುಕ್ತಗೊಳಿಸುವುದು. ಅಡಿಕೆ ವಿಶೇಷ ಬೆಳೆ ಎಂದು ಪರಿಗಣಿಸುವುದು. ವೈಜ್ಞಾನಿಕ ಸಂಸ್ಥೆಗಳ ಶಿಫಾರಸುಗಳನ್ನು ನೀತಿ ರೂಪಣೆಗೆ ಕಡ್ಡಾಯಗೊಳಿಸುವುದು.
ಅಡಿಕೆ ಬೆಳೆಗಾರರು ದಾನ ಕೇಳುತ್ತಿಲ್ಲ. ನ್ಯಾಯ ಕೇಳುತ್ತಿದ್ದಾರೆ. ರೋಗದಿಂದ ಬೆಳೆ ರಕ್ಷಿಸಲು ಬಳಸುವ ಔಷಧಕ್ಕೂ ಸರ್ಕಾರ ಸುಂಕ ವಿಧಿಸಿದರೆ, ಅದು ಕೃಷಿ ನೀತಿಯ ದೌರ್ಬಲ್ಯ ಮತ್ತು ಸಾಮಾಜಿಕ ಅನ್ಯಾಯ. ಇದನ್ನು ಪ್ರಶ್ನಿಸುವುದು ರೈತನ ಹಕ್ಕು ಮಾತ್ರವಲ್ಲ ಸಮಾಜದ ಜವಾಬ್ದಾರಿ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ




