ಕಳೆದ ವರ್ಷ ಹಿಂಗಾರ ಒಣಗುವ ರೋಗದಿಂದ ಇಡೀ ಫಲಸು ನಷ್ಟವಾಗುವ ಸ್ಥಿತಿ ಇತ್ತು. ಕೃಷಿಕನ ಸಕಾಲಿಕ ಎಚ್ಚರಿಕೆಯಿಂದ ವಿಜ್ಞಾನಿಗಳು ತೋಟಕ್ಕೆ ಭೇಟಿ ನೀಡಿದರು. ತಕ್ಷಣವೇ ವಿಜ್ಞಾನಿಗಳ ಶಿಫಾರಸಿನಂತೆ ರೋಗ ನಿರ್ವಹಣೆ ಮಾಡಿದರು. ಈ ಬಾರಿ ಉತ್ತಮ ಫಸಲು ಕಂಡರು. ಈ ಯಶೋಗಾಥೆ ಅಡಿಕೆ ಬೆಳೆಗಾರರಿಗೆ ಮಾದರಿಯಾಗಿದೆ. ಮುಂದಿನ ತಿಂಗಳಿನಿಂದ ಈ ರೋಗ ಆರಂಭವಾಗುತ್ತದೆ. ಹೀಗಾಗಿ ಸಕಾಲಿಕ ಮುನ್ನೆಚ್ಚರಿಕೆ ಅಗತ್ಯವಾಗಿದೆ.
ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಬಳಿಯ ವಿಷ್ಣು ಭಟ್ ಅವರ ತೋಟದಲ್ಲಿ ಹಿಂಗಾರ ಒಣಗುವ ರೋಗ ಕಂಡುಬಂತು. ಈ ಬಗ್ಗೆ ಅನುಮಾನ ಮೂಡಿದ ತಕ್ಷಣವೇ ಅವರು ವಿಟ್ಲದ ಸಿಪಿಸಿಐಆರ್ ವಿಜ್ಞಾನಿಗಳನ್ನು ಸಂಪರ್ಕಿಸಿದರು. ವಿಟ್ಲದಿಂದ ವಿಜ್ಞಾನಿಗಳಾದ ಡಾ.ಭವಿಶ್ ಹಾಗೂ ಡಾ.ಶಿವಾಜಿ ತುಬೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಹಿಂಗಾರ ಒಣಗುವ ರೋಗದ ಬಗ್ಗೆ ಮಾಹಿತಿ ನೀಡಿ ರೋಗ ನಿರ್ವಹಣೆಯ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಲು ಸಲಹೆ ನೀಡಿದರು. ಅದಾಗಿ ಒಂದು ತಿಂಗಳಲ್ಲಿ ರೋಗ ನಿಯಂತ್ರಣ ಬಂದು ಉತ್ತಮ ಫಸಲನ್ನು ಈ ಬಾರಿ ಕಂಡರು. ಅದಕ್ಕಿಂತಲೂ ಹಿಂದೆ ಕಡಬ ಬಳಿಯ ಕೃಷಿಕರೊಬ್ಬರ ತೋಟದಲ್ಲಿ ಹಿಂಗಾರ ಒಣಗುವ ರೋಗ ಕಂಡುಬಂದಿತ್ತು, ಆದರೆ ಆ ಕೃಷಿಕ ಸಕಾಲಿಕವಾಗಿ ಗಮನಿಸದೇ ಇಡೀ ತೋಟದ ಫಲಸು ನಷ್ಟವಾಗಿತ್ತು. ಹೀಗಾಗಿ ಅಡಿಕೆ ಬೆಳೆಗಾರರು ಮುಂದಿನ ಎರಡು ತಿಂಗಳು ನಿಗಾ ಇರಿಸಿದರೆ ಈ ರೋಗದಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ವಿಜ್ಞಾನಿಗಳ ಸಲಹೆ ಹೀಗಿದೆ……
ನಿರ್ವಹಣೆ ಹೇಗೆ ?
ರೋಗ ಬಾಧಿತ ಹಿಂಗಾರವನ್ನ ತೆಗೆದು ಹಾಕುವುದು. ದೊಡ್ಡ ಮರಗಳಲ್ಲಿ ಸಾಧ್ಯ ಆಗದಿದ್ದರೂ ಮಧ್ಯಮ ಎತ್ತರದ ಮರಗಳಲ್ಲಿ ಮೂರನೇ ಕೊಯ್ಲಿನ ಸಮಯದಲ್ಲಿ ಸಾಧ್ಯವಾದಷ್ಟು ಒಣಗಿದ ಹಿಂಗಾರ ತೆಗೆಯುವುದು ಹಾಗೂ ಸಣ್ಣ ಪ್ರಾಯದ ಮರಗಳಲ್ಲಿ 2-3 ಸಲ ಒಣಗಿದ ಹಿಂಗಾರವನ್ನು ತೆಗೆಯುವುದು ಸೋಂಕು ಕಡಿಮೆ ಮಾಡಲು ಬಹಳ ಮುಖ್ಯ. ಏಕೆಂದರೆ, ಒಣಗಿದ ಹಿಂಗಾರವನ್ನು ಆಗಾಗ್ಗೆ ತೆಗೆದು ನಾಶ ಮಾಡುವುದು ಕೊಳೆರೋಗ ಮತ್ತು ಹಿಂಗಾರ ಒಣಗುವ ರೋಗದ ನಿರ್ವಹಣೆಗೆ ಬಹಳ ಒಳ್ಳೆಯದು. ಸಾಮಾನ್ಯವಾಗಿ, ಒಣಗುವ ಹಿಂಗಾರ ರೋಗದಿಂದ ಬಾಧಿತವಾದ ಹಿಂಗಾರದಲ್ಲಿ ಶಿಲೀಂಧ್ರವು 8 ತಿಂಗಳ ಕಾಲ ಮತ್ತು ಕೊಳೆರೋಗವನ್ನು ಉಂಟು ಮಾಡುವ ಫೈಟೋಪ್ತೊರ ಶಿಲೀಂಧ್ರವು ಬಾಧಿತ ಗೊನೆಯಲ್ಲಿ ಕೆಲವು ವರ್ಷಗಳ ಕಾಲ ಸ್ಥುಪ್ತಾವಸ್ಥೆಯಲ್ಲಿದ್ದು, ಪೂರಕ ವಾತಾವರಣ ಲಭ್ಯವಾದಾಗ ಅವು ಸಕ್ರೀಯವಾಗುತ್ತವೆ. ಹಾಗಾಗಿ, ಒಣಗಿದ ಹಿಂಗಾರ/ಗೊನೆಯನ್ನು ಕಿತ್ತು ನಾಶಪಡಿಸಬೇಕು.
ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಮಾರ್ಚ್…
ಸಣ್ಣಪುಟ್ಟ ಸಮಸ್ಯೆಗಳಿಗೆ, ಮುಂದೆ ಆಗಬಹುದಾದ ಅನೇಕ ಸಾಧ್ಯತೆಗಳ ಊಹಾತ್ಮಕ ಘಟನೆಗಳಿಗೆ, ಇನ್ನೂ ಅನೇಕ…
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ…
ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ನಂತರ, ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಬಿಟ್ಟು…
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಬಿಹಾರ ಮತ್ತು ಉತ್ತರ…
ಕಲ್ಯಾಣ ಕರ್ನಾಟಕ ಭಾಗದಲ್ಲಿ 1800 ಶಿಕ್ಷಕರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 5 ಸಾವಿರ…