ಸುದ್ದಿಗಳು

#arecanut |ದೆಹಲಿಗೆ ತಲಪಿದ ಅಡಿಕೆ ಬೆಳೆಗಾರರ ಸಮಸ್ಯೆ | ಕೇಂದ್ರ ಸಚಿವರುಗಳಿಂದ ನಿಯೋಗಕ್ಕೆ ಸಕಾರಾತ್ಮಕ ಸ್ಪಂದನೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕರ್ನಾಟಕದ ಅಡಿಕೆ ಬೆಳೆಗಾರರ ಪ್ರಸ್ತುತ ಸಮಸ್ಯೆಗಳು ಈಗ ದೆಹಲಿಗೆ ತಲುಪಿದೆ. ಬೆಳೆಗಾರರ ಸಮಸ್ಯೆಯ ಬಗ್ಗೆ ರಾಜ್ಯದ ಗೃಹ ಸಚಿವ ಅಡಿಕೆ ಟಾಸ್ಕ್‌ ಫೋರ್ಸ್‌ ಸಮಿತಿ ಅಧ್ಯಕ್ಷ, ಸ್ವತ: ಅಡಿಕೆ ಬೆಳೆಗಾರರೂ ಆಗಿರುವ ಅರಗ ಜ್ಞಾನೇಂದ್ರ ಮತ್ತು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹಾಗೂ  ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ನೇತೃತ್ವದ ನಿಯೋಗ ಕೇಂದ್ರದ ವಿವಿಧ ಸಚಿವರುಗಳ ಜೊತೆ ಚರ್ಚೆ ನಡೆಸಿದರು. ಈ ಸಂದರ್ಭ ಅಡಿಕೆ ಬೆಳೆಗಾರರ ಸಮಸ್ಯೆಗಳ ಪರಿಹಾರದ ಬಗ್ಗೆ ಹಾಗೂ ಮಾರುಕಟ್ಟೆ ಸ್ಥಿರತೆಗೆ ಬೇಕಾದ ಸರ್ಕಾರ ನೀತಿಗಳಲ್ಲಿ ಬದಲಾವಣೆಯ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.

Advertisement

ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆಗಳನ್ನೊಳಗೊಂಡ ನಿಯೋಗವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್‌ ಅವರನ್ನು  ಭೇಟಿ ಮಾಡಿದ ನಿಯೋಗ ವಿವಿಧ ಬೇಡಿಕೆ ಮಂಡಿಸಿತು. CIB/FCO 1985 ಪರವಾನಗಿ ಅಡಿಯಲ್ಲಿ ತಯಾರಿಸಲ್ಪಡುವ ಕಾಪರ್‌ ಸಲ್ಫೇಟ್‌ ಮೇಲೆ ಶೇ 5 ಜಿ ಎಸ್ಟಿ ವಿಧಿಸುವುದು ಹಾಗೂ  ಕೃಷಿಕರಿಗೆ ಅನುಕೂಲವಾಗುವ ಕಾರ್ಬನ್‌ ಫೈಬರ್‌ ದೋಟಿಯ ಮೇಲಿನ ಆಮದು ಸುಂಕ ಕಡಿಮೆ ಮಾಡಲು ಹಾಗೂ ಅಡಿಕೆ ಮೇಲಿನ ಜಿಎಸ್ಟಿ ಕಡಿಮೆ ಮಾಡಲಯ ಮನವಿ ಮಾಡಲಾಯಿತು.

ಬಳಿಕ ನಿಯೋಗವು ಕೇಂದ್ರ ಕೃಷಿ ಸಚಿವರ ನರೇಂದ್ರ ಸಿಂಗ್‌ ತೋಮರ್‌ ಭೇಟಿ ಮಾಡಿ, ಅಡಿಕೆಯ ಮೇಲಿನ ತೇವಾಂಶದ ಗರಿಷ್ಠ ಮಿತಿಯನ್ನು ಶೇ.11 ಕ್ಕೆ ಹೆಚ್ಚಿಸಿ FSSAI ಮೂಲಕ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿತು. FSSAI ಈಗಾಗಲೇ ಅಡಿಕೆಯ ತೇವಾಂಶದ ಗರಿಷ್ಠ ಮಿತಿಯನ್ನು ಶೇ.7 ಕ್ಕೆ ನಿಗದಿಪಡಿಸಿತ್ತು. ಇದರಿಂದ ಅಡಿಕೆ ಬೆಳೆಗಾರರಿಗೆ ಸಮಸ್ಯೆ ಆಗಿತ್ತು. ಮಳೆಗಾಲ ಹಾಗೂ ಆ ನಂತರದ ಅಡಿಕೆಯ ತೇವಾಂಶದ ಕಾರಣದಿಂದ ಅಡಿಕೆ ಮಾರಾಟಕ್ಕೆ ಸಮಸ್ಯೆ ಆಗಿತ್ತು. ಇದಕ್ಕಾಗಿ ಕ್ಯಾಂಪ್ಕೋ ಹಾಗೂ ಸಿಪಿಸಿಆರ್‌ ಐ, ಎ ಆರ್‌ ಡಿಎಫ್‌, ಅಖಿಲ ಭಾರತ ಅಡಿಕೆ ಬೆಳೆಗಾರರ ತಂಡವು ಕಳೆದ ವರ್ಷ ತೇವಾಂಶ ಏರಿಕೆ ಮಾಡಲು ಅಗತ್ಯ ಕ್ರಮಗಳ ಬಗ್ಗೆ ಸಭೆ ನಡೆಸಿತ್ತು.

ಬಳಿಕ ನಿಯೋಗವು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರನ್ನು ಭೇಟಿ ಮಾಡಿ,  ಅಡಿಕೆ ಆಮದು ಕಾರಣದಿಂದ ಅಡಿಕೆ ಧಾರಣೆ ಏರಿಳಿತವಾಗುತ್ತಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಧಾರಣೆ ಸ್ಥಿರತೆ ಕಷ್ಟವಾಗುತ್ತಿದೆ ಎಂದು ಮನವರಿಕೆ ಮಾಡಿ, ಸದ್ಯ ಅಡಿಕೆ ಉತ್ಪಾದನಾ ವೆಚ್ಚವೂ ಹೆಚ್ಚಾದ ಕಾರಣದ ಅದಕ್ಕೆ ಅನುಸಾರವಾಗಿ ಅಡಿಕೆಯ ಆಮದು ದರವನ್ನು ಏರಿಕೆಗೆ ಒತ್ತಾಯ ಮಾಡಲಾಯಿತು. ಚಾಲಿ ಅಡಿಕೆ ಕೆಜಿಗೆ 360 ರೂಪಾಯಿ ಮತ್ತು ಕೆಂಪಡಿಕೆಗೆ 420 ರೂಪಾಯಿಗೆ ಆಮದು ದರ ನಿಗದಿ ಮಾಡಲು ಮನವಿ ಮಾಡಲಾಯಿತು. ಎರಡೂ ಬೇಡಿಕೆಗೆ ಸಕಾರಾತ್ಮಕವಾಗಿ ಸಚಿವರು ಸ್ಪಂದಿಸಿದರು.

ನಿಯೋಗದಲ್ಲಿ ಮಂಜಪ್ಪ ಹೊಸಬಾಳೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಜೀವರಾಜ್, ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕರಾದ ಎಚ್ .ಎಂ.ಕೃಷ್ಣಕುಮಾರ್, ಅಡಿಕೆ ಮಹಾಮಂಡಳದ ಅಧ್ಯಕ್ಷರಾದ ಸುಬ್ರಹ್ಮಣ್ಯ ಎಡಗೆರೆ, ಅಖಿಲ ಭಾರತ ಸಹಕಾರ ಭಾರತೀಯ ಸಂರಕ್ಷಕ ಸುರೇಶ್‌ ವೈದ್ಯ, ತುಮ್ಕೋಸ್ ಅಧ್ಯಕ್ಷ ಆರ್.ಎಂ.ರವಿ, ಕ್ಯಾಂಪ್ಕೊ ನಿರ್ದೇಶಕರು ಮತ್ತು ಸಹಕಾರ ಭಾರತಿಯ ರಾಜ್ಯಕಾರ್ಯದರ್ಶಿ ಕೃಷ್ಣಪ್ರಸಾದ್ ಮಡ್ತಿಲ, ಟಿಎಸ್‌ಎಸ್  ನಿರ್ದೇಶಕ  ಶಶಾಂಕ್ಎ ಸ್. ಹೆಗಡೆ ಹಾಗೂ ಮಹಾಮಂಡಳದ ನಿರ್ದೇಶಕರಾದ ಶಿವಕುಮಾರ್ ಭಾಗವಹಿಸಿದ್ದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು

ಕೃಷಿಯಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ…

4 hours ago

ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದು ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

5 hours ago

ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ

ಭಾರತೀಯ ಸೇನಾಪಡೆಯು, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ…

13 hours ago

ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ

ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…

21 hours ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ..

1 day ago