ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೊ ಮಹಾಸಭೆ ಆ.31 ರಂದು ಅಡ್ಯಾರ್ ನಲ್ಲಿರುವ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ. ಈ ಬಾರಿ ಕ್ಯಾಂಪ್ಕೊ ಸಂಸ್ಥೆ ಲಾಭದಲ್ಲಿದ್ದು 2023-24 ರ ಹಣಕಾಸು ವರ್ಷದಲ್ಲಿ 3336.87 ಕೋಟಿಗಳ ವ್ಯವಹಾರ ನಡೆಸಿ 5.99 ಕೋಟಿ ನಿವ್ವಳ ಲಾಭ ಗಳಿಸಿದೆ.…..ಮುಂದೆ ಓದಿ….
2023-24 ರಲ್ಲಿ ಅಡಿಕೆ ಮಾರುಕಟ್ಟೆಯು ತೀರಾ ಸಂಕಷ್ಟದಲ್ಲಿತ್ತು, ಅಡಿಕೆ ಮಾರುಕಟ್ಟೆ ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿತ್ತು, ಈ ನಡುವೆಯೂ ಅಡಿಕೆ ಚಟುವಟಿಕೆಯನ್ನು ಸಮರ್ಥವಾಗಿ ನಿರ್ವಹಿಸಿ ಸಂಸ್ಥೆಯು ಲಾಭದತ್ತ ಮುನ್ನುಗ್ಗಿದೆ. ಅಕ್ರಮ ಅಡಿಕೆ ಆಮದು ಅಡಿಕೆ ಬೇಡಿಕೆಯ ಮೇಲೆ ಪರಿಣಾಮ ಬೀರಿದ್ದರೂ ಕೂಡಾ ಕ್ಯಾಂಪ್ಕೋ ಕೆಲವು ನಿರ್ಧಾರಗಳ ಮೂಲಕ ಅಡಿಕೆ ಮಾರುಕಟ್ಟೆ ಸ್ಥಿರತೆಗೆ ಪ್ರಯತ್ನ ಮಾಡಿದೆ.
ಭಾರತದಲ್ಲಿ ಕೃಷಿ ಕ್ಷೇತ್ರವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲಿ ಹವಾಮಾನ ವೈಪರೀತ್ಯವೂ ಒಂದು. ಇದರಿಂದಾಗಿ ಕೃಷಿ ಕ್ಷೇತ್ರದ ಮೇಲೆ ಅಪಾರ ಒತ್ತಡ ಕಾಣುತ್ತಿದೆ. ಆದರೆ ಅಡಿಕೆ ಕೃಷಿ ಅಂತಹ ಭಾರೀ ಒತ್ತಡಕ್ಕೆ ಸಿಲುಕಿಲ್ಲ. ಇದಕ್ಕೆ ಪ್ರಮುಖವಾದ ಕಾರಣ ಅಡಿಕೆ ಮಾರುಕಟ್ಟೆ ಕೂಡಾ ಆಗಿದೆ. ಇದಕ್ಕಾಗಿ ಸಹಕಾರಿ ಸಂಸ್ಥೆಗಳು ಬಹುಮುಖ್ಯ ಪಾತ್ರವಹಿಸಿದೆ. ಅಡಿಕೆ ಧಾರಣೆಯೂ ಆಕರ್ಷಕವಾಗಿದೆ.
The Arecanut Growers’ Organization CAMPCO General Meeting is scheduled to take place on August 31 at Adyar Garden in Adyar. This year, Campco has reported a profit with a turnover of Rs 336.87 crores and a net profit of Rs 5.99 crores in the financial year 2023-24.
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…