ತೈವಾನ್, ಥೈಲ್ಯಾಂಡ್, ಮ್ಯಾನ್ಮಾರ್ ಮೊದಲಾದ ದೇಶಗಳಿಂದ ಅಡಿಕೆ ಕಳ್ಳಸಾಗಾಣಿಗೆ ಅವ್ಯಾಹತವಾಗಿ ನಡೆಯುತ್ತಿರುವ ಕಾರಣದಿಂದ ತ್ರಿಪುರಾ ಹಾಗೂ ಮಿಜೋರಾಂ ಅಡಿಕೆ ಬೆಳೆಗಾರರಿಗೂ(Arecanut Growers) ಈಗ ಸಂಕಷ್ಟ ಎದುರಾಗಿದೆ. ಹೀಗಾಗಿ ತಕ್ಷಣವೇ ತ್ರಿಪುರಾ, ಮಿಜೋರಾಂ ಮತ್ತು ಅಸ್ಸಾಂ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಅಡಿಕೆ ಬೆಳೆಗಾರರು ಆಗ್ರಹಿಸಿದ್ದಾರೆ.
ವಿದೇಶಿ ಅಡಿಕೆಯು ಮ್ಯಾನ್ಮಾರ್ ಮೂಲಕ ಅಸ್ಸಾಂ ಮಾರ್ಗದಲ್ಲಿ ಹಾಗೂ ಈಚೆಗೆ ಒಳದಾರಿಯ ಮೂಲಕ ಅಡಿಕೆ ಕಳ್ಳಸಾಗಾಟ ವಿಪರೀತವಾಗಿ ನಡೆಯುತ್ತಿದೆ. ಹೀಗಾಗಿ ತ್ರಿಪುರಾ ಮತ್ತು ಮಿಜೋರಾಂನ ಅಡಿಕೆ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಸಾಗಿಸಲು ಮತ್ತು ಮಾರಾಟ ಮಾಡಲು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ತ್ರಿಪುರಾ ಮತ್ತು ಮಿಜೋರಾಂನ ಕೃಷಿಕರಿಗೆ ಅಡಿಕೆ ಪ್ರಮುಖ ಬೆಳೆಯಾಗಿದೆ. ಈಗ ಪೊಲೀಸ್ ದಾಳಿ ಹಾಗೂ ಕೆಲವು ಕಡೆ ಗ್ರಾಮೀಣ ಭಾಗಗಳಲ್ಲಿಯೂ ಅಕ್ರಮ ದಾಸ್ತಾನು ಕಾರಣಗಳಿಂದ ಕೃಷಿಕರ ವಸ್ತುಗಳ ಮಾರಾಟಕ್ಕೂ ಸಂಕಷ್ಟವಾಗಿದೆ. ಕೃಷಿಕರು ನಷ್ಟದತ್ತ ಮುಖ ಮಾಡುತ್ತಿದ್ದಾರೆ. ತ್ರಿಪುರಾ ಮತ್ತು ಮಿಜೋರಾಂ ರೈತರು ಅಡಿಕೆ ಬೆಳೆಯುತ್ತಿದ್ದರೆ, ವ್ಯಾಪಾರಿಗಳು ಖರೀದಿಸಲು ಮತ್ತು ಮಾರಾಟ ಮಾಡಲು ಸಂಕಷ್ಟ ಪಡಬೇಕಾಗಿದೆ. ಸದ್ಯ ಅಸ್ಸಾಂ ರಾಜ್ಯವನ್ನು ಬಳಸಬೇಕಾಗಿದೆ. ಆದರೆ ಸಾಗಾಟಕ್ಕೆ ಸಂಕಷ್ಟವಾಗಿದೆ. ಈ ಕಾರಣದಿಂದ ಅಡಿಕೆ ಹಾಳಾಗುವ ಸ್ಥಿತಿ ಬಂದಿದೆ. ಹೀಗಾಗಿ ಅಡಿಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಈ ಸಂಕಷ್ಟವನ್ನು ದೂರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ತ್ರಿಪುರಾ, ಮಿಜೋರಾಂ ಅಡಿಕೆ ಬೆಳೆಗಾರರು ತಮ್ಮ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲು ವಿವಿಧ ಪ್ರತಿಭಟನೆ, ಆಂದೋಲನ ಮಾಡಿದ್ದರು. ಸಂಬಂಧಿಸಿದ ಇಲಾಖೆ ಕೃಷಿಕರಿಗೆ ಗುರುತಿನ ಚೀಟಿ ನೀಡುತ್ತದೆ ಎಂದೂ ಹೇಳಿತ್ತು. ಆದರೆ ಯಾವುದೂ ಜಾರಿಯಾಗಿಲ್ಲ ಎಂದು ಅಡಿಕೆ ಬೆಳೆಗಾರರು ಆರೋಪಿಸಿದ್ದಾರೆ.ತ್ರಿಪುರಾ, ಮಿಜೋರಾಂ ಮತ್ತು ಅಸ್ಸಾಂ ಸರ್ಕಾರಗಳ ನಿಷ್ಕ್ರಿಯತೆ ಮತ್ತು ಕಾಳಜಿಯ ಕೊರತೆಯಿಂದಾಗಿ ಅಡಿಕೆ ಕೃಷಿ ಅಪಾಯವನ್ನು ಎದುರಿಸುತ್ತಿದೆ ಎಂದು ಕೃಷಿಕರು ಆರೋಪಿಸಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.