Advertisement
MIRROR FOCUS

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

Share

ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಅಡಿಕೆ ಒಂದಾಗಿದ್ದು  ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಶೇ.60 ರಷ್ಟು ಪೂರೈಸುತ್ತಿರುವ ರಾಜ್ಯವಾಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆ ಹಾಗೂ ಬೆಳೆಗಾರ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ, ಯಾವುದೇ ಆತಂಕವಿಲ್ಲದೆ ಕೃಷಿ ಮಾಡಿ, ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚ್ಹೌವಾಣ್ ತಿಳಿಸಿದ್ದಾರೆ.…..ಮುಂದೆ ಓದಿ….

Advertisement
Advertisement
Advertisement
Advertisement

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಬೆಳೆಯುತ್ತಿರುವ ಒಟ್ಟು ಅಡಿಕೆಯಲ್ಲಿ ಕರ್ನಾಟಕದ ಪಾಲು ಗಮನಾರ್ಹವಾಗಿದೆ. ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ ಆಮದಾಗುತ್ತಿರುವ ಅಡಿಕೆಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ, ಇನ್ನಷ್ಟು ಆಮದು ಸುಂಕ ಏರಿಕೆಯ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು. ಅಡಿಕೆಯ ರೋಗಗಳ ಬಗ್ಗೆ ಅಧ್ಯಯನಕ್ಕೂ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಹೇಳಿದರು.…..ಮುಂದೆ ಓದಿ….

Advertisement

ಸಮಾವೇಶದಲ್ಲಿ ಅಡಿಕೆ ಬೆಳೆಗಾರರು ಮಂಡಿಸಿದ ಬೇಡಿಕೆಗಳು ಹೀಗಿದ್ದವು :

Advertisement
  • ವಿಸ್ತೃತ ಸಂಶೋಧನೆಗೆ ಚಾಲನೆ: ಶುದ್ಧ ಅಡಿಕೆಯೂ ಸಹ ಆರೋಗ್ಯಕ್ಕೆ ಹಾನಿಕರ ಎಂಬ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ(WHO) ನಿರಂತರವಾಗಿ ವರದಿ ಪ್ರಕಟಿಸುತ್ತಲೇ ಇದೆ. ದೇಶದ ಸರ್ವೋಚ್ಚ ನ್ಯಾಯಾಲಯದಲ್ಲೂ ಈ ಕುರಿತ ದಾವೆ ಮುಂದುವರಿದಿದೆ. ಆದರೆ, ರೈತರು ಹಾಗೂ ಬಳಕೆದಾರರು ತಲೆತಲಾಂತರದಿಂದ ಕಂಡುಕೊಂಡಿರುವ ನೈಜ ಅನುಭವ ಇದನ್ನು ಒಪ್ಪಲು ಸಾಧ್ಯವಿಲ್ಲ. ಜೊತೆಗೆ, ದೇಶದ ಬಹಳಷ್ಟು ಸಂಶೋಧನಾ ಸಂಸ್ಥೆಗಳ ಸಂಶೋಧನೆಗಳೂ ಸಹ ಶುದ್ಧ ಅಡಿಕೆಯನ್ನು ಸುರಕ್ಷಿತ ಎಂದೇ ನಿರೂಪಿಸಿವೆ. ಆದ್ದರಿಂದ, ಅಡಿಕೆಯ ಸುರಕ್ಷಿತವೆಂಬ ನಿಖರ ಮಾಹಿತಿಯನ್ನು ಸರ್ವೋಚ್ಚ ನ್ಯಾಯಾಲಯ ಹಾಗೂ ವಿಶ್ವ ಅರೋಗ್ಯ ಸಂಸ್ಥೆಯ ಎದುರು ವ್ಯವಸ್ಥಿತವಾಗಿ ಮಂಡಿಸುವ ಅಗತ್ಯವಿದೆ.
  • ಅಡಿಕೆ ಪೊಟ್ಟಣದ ಮೇಲಿನ ಸೂಚನಾಪಟ್ಟಿ ಕೈಬಿಡುವುದು: ಕೇಂದ್ರ ಆರೋಗ್ಯ ಇಲಾಖೆಯಡಿಯಲ್ಲಿ ಬರುವ “ಆಹಾರ ಸುರಕ್ಷತೆ ಮತ್ತು ಮಾನದಂಡ ನಿರ್ವಹಣಾ ಪ್ರಾಧಿಕಾರ” 2011 ಅಗಸ್ಟ್ 1ರಂದು ಗೆಜೆಟ್ ಪ್ರಕಟಣೆಯಲ್ಲಿ, ಸಿದ್ಧ ಆಹಾರ ಸಾಮಗ್ರಿಗಳನ್ನು ಮಾರುಕಟ್ಟೆಯಲ್ಲಿ ಮಾರುವಾಗ ಪಾಲಿಸಬೇಕಾದ ನಿಯಮಗಳ ಆದೇಶದ 2ನೇ ಅಧ್ಯಾಯದ 31ನೇ ನಿಯಮದಂತೆ, ಮಾರುಕಟ್ಟೆಯಲ್ಲಿ ಮಾರುವ ಶುದ್ಧ ಅಡಿಕೆಯ ಪೊಟ್ಟಣಗಳ ಮೇಲೂ “ಅಡಿಕೆ ಜಗಿಯುವದು ಆರೋಗ್ಯಕ್ಕೆ ಹಾನಿಕರ” ಎಂಬ ಸೂಚನೆ ಮುದ್ರಿಸುವದು ಖಡ್ಡಾಯ ಮಾಡಲಾಗಿದೆ. ಇದು ನಿಜಕ್ಕೂ ಅವಸರದ ತೀರ್ಮಾನ. ಹೀಗಾಗಿ, ಈ ಸರ್ಕಾರಿ ಆದೇಶದಲ್ಲಿನ ಈ ಅಂಶವನ್ನು ಸರ್ಕಾರವು ತಕ್ಷಣ ಕೈಬಿಡುವಂತೆ ಮನವಿ ಮಾಡಲಾಗಿದೆ.
  • ಪಾರಂಪರಿಕ ಅಡಿಕೆ ಕೃಷಿಭೂಮಿ ರಕ್ಷಣೆ: ರಾಜ್ಯ ಹಾಗೂ ದೇಶದ ಪಾರಂಪರಿಕ ಅಡಿಕೆ ಬೆಳೆ ಕೃಷಿ ಪ್ರದೇಶಗಳನ್ನು ಹೊರತುಪಡಿಸಿ, ಬೇರೆಡೆ ತೀರಾ ವೇಗವಾಗಿ ಈ ಬೆಳೆ ಪಸರಿಸುತ್ತಿದೆ. ಹೀಗಾಗಿ, ದೇಶದಲ್ಲಿ ಇಂದು ಮಾರುಕಟ್ಟೆಗೆ ಅಗತ್ಯವಿರುವ ಪ್ರಮಾಣಕ್ಕಿಂತ ಎರಡುಪಟ್ಟು ಹೆಚ್ಚು ವೇಗದ ದರದಲ್ಲಿ ಅಡಿಕೆ ಉತ್ಪಾದನೆಯಾಗುತ್ತಿದೆ. ಇದು ಕೃಷಿಭೂಮಿಯ ವಲಯ ಹಾಗೂ ಅಡಿಕೆ ಮಾರುಕಟ್ಟೆ ಸ್ಥಿರತೆ- ಇವೆರಡರ ಮೇಲೂ ಗಾಢವಾದ ವ್ಯತಿರಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ, ಸೂಕ್ತ ಕೃಷಿ ಭೂಬಳಕೆ ನೀತಿ ಜಾರಿಗೆ ತಂದು, ಪ್ರತಿಯೊಂದೂ ಕೃಷಿ-ಹವಾಮಾನ ವಲಯಕ್ಕೆ ಸೂಕ್ತವಾದ ಬೆಳೆಯನ್ನು ಮಾತ್ರ ಉತ್ತೇಜಿಸುವ ಹಾಗೂ ಅಡಿಕೆ ಬೆಳೆಯ ಅವೈಜ್ಞಾನಿಕ ವಿಸ್ತರಣೆಯನ್ನು ನಿಯಂತ್ರಿಸುವ ನೀತಿ ರೂಪಿಸಬೇಕು.
  • ಆಮದು ನಿರ್ಬಂಧ: ದೇಶದೊಳಗೆ ಕಾನೂನು ಬಾಹೀರವಾಗಿ ಒಳನುಸುಳುತ್ತಿರುವ ಅಡಿಕೆಯನ್ನು ಸಂಪೂರ್ಣ ನಿಶೇಧಿಸಬೇಕು. ಕಾನೂನಿನ ಅನ್ವಯ ಆಮದು ಮಾಡಿಕೊಳ್ಳಲಾಗುತ್ತಿರುವ ಅಡಿಕೆಯ ಪ್ರಮಾಣವನ್ನು ಸೂಕ್ತ ಕಸ್ಟಮ್ಸ್ ತೆರಿಗೆ ಹಾಗೂ ಕನಿಷ್ಟ ಆಮದು ಬೆಲೆ ನಿಗದಿ ಪಡಿಸುವದರ ಮೂಲಕ, Central Board of Indirect Taxes and Customs (CBIC) ನಿಯಂತ್ರಿಸಬೇಕು.
  • ರೈತರಿಂದ-ಬಳಕೆದಾರರವರೆಗಿನ ಅಡಿಕೆ ಉತ್ಪನ್ನದ ಗರಿಷ್ಟ ಗುಣಮಟ್ಟ ಕಾಯ್ದುಕೊಳ್ಳುವದು ಹಾಗೂ ಕಲಬೆರಕೆಯಾಗುತ್ತಿರುವ ಅಪಾಯಕಾರಿ ರಾಸಾಯನಿಕಗಳ ಬಳಕೆಗೆ ಕಠಿಣ ಕಡಿವಾಣ ಹಾಕಲು, ಅಡಿಕೆ ಮತ್ತು ಸಾಂಬಾರು ಬೆಳೆ ಅಭಿವೃದ್ಧಿ ನಿರ್ದೇಶನಾಲಯ ಸಮಗ್ರವಾ ನಿಯಮಾವಳಿ ರೂಪಿಸಿ, ಜಾರಿಗೆ ತರಬೇಕು.
  • ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಡಿಕೆ ಉತ್ಪನ್ನಗಳ ಗುಣಮಟ್ಟದ ಕುರಿತು ಆಹಾರ ಸುರಕ್ಷತೆ ಮತ್ತು ಮಾನದಂಡ ನಿರ್ವಹಣಾ ಪ್ರಾಧಿಕಾರ ಸೂಕ್ತ ನಿಯಮವಾಳಿ ರೂಪಿಸಿ ಜಾರಿಗೆ ತರಬೇಕು.
  • ಆಹಾರ ವಸ್ತುಗಳ ಗುಣಮಟ್ಟ ಮೇಲ್ವಿಚಾರಣೆ ಹಾಗೂ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸುವುದು
  • ಅಡಿಕೆ ಬೆಳೆಯ ಪಾರಂಪರಿಕ ಪ್ರದೇಶಗಳಲ್ಲಿ ಸೂಕ್ತ ಮಿಶ್ರ ಬೆಳೆಗಳಿಗೆ ಉತ್ತೇಜನ ನೀಡುವುದು
  • ಅಡಿಕೆಯ ಬ್ರಾಂಡ್ ಮೌಲ್ಯ ಕಾಪಾಡಿಕೊಳ್ಳುವುದು
  • ಅಡಿಕೆ ಬೆಳೆಯುವ ಪ್ರದೇಶದ ಸಂಸದರ ಸಮಿತಿ ರಚನೆ ಮಾಡುವುದು.

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

17 hours ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

1 day ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

2 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

2 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

2 days ago

ಬೆಂಗಳೂರಲ್ಲಿ ದಾಖಲೆ ತಾಪಮಾನ | ಬೇಸಿಗೆಯಲ್ಲಿ ಈ ಬಾರಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ

ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…

2 days ago