ಕಳೆದ ತಿಂಗಳು ಸುರಿದ ಭಾರೀ ಮಳೆಗೆ ಅಡಿಕೆ ಕೃಷಿಕರು ಈಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದೇ ತಿಂಗಳಲ್ಲಿ ಸುಮಾರು 2500 ಮಿಮೀ ಗಿಂತಲೂ ಅಧಿಕ ಮಳೆ ಸುರಿದಿದೆ. ಎಡೆಬಿಡದೆ ಸುರಿದ ಮಳೆಗೆ ಅಡಿಕೆ ಕೊಳೆರೋಗ ಆರಂಭವಾಗಿದ್ದು, ಇದೀಗ ವ್ಯಾಪಕವಾಗಿದೆ. ಅಡಿಕೆ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಾರ್ಷಿಕ ಬೆಳೆಯಾದ ಅಡಿಕೆಗೆ ಈ ಬಾರಿಯ ಮಳೆ ಹೊಡೆತ ನೀಡಿದೆ. 2018 ರಲ್ಲಿ ಉಂಟಾದ ಪರಿಸ್ಥಿತಿ ಬಹುತೇಕ ಕಡೆಗಳಲ್ಲಿ ಉಂಟಾಗಿದೆ. ಭಾರೀ ಮಳೆ, ನಿರಂತರವಾಗಿ ಸುರಿದ ಮಳೆಗೆ ಕೊಳೆರೋಗ ಆರಂಭವಾಗಿದೆ. ಎಡೆಬಿಡದೆ ಸುರಿದ ಮಳೆಯ ಕಾರಣದಿಂದ ಸೂಕ್ತ ಸಮಯದಲ್ಲಿ ಔಷಧಿ ಸಿಂಪಡಣೆಗೆ ಸಾಧ್ಯವಾಗದೆ ಕೃಷಿಕರು ಸೋತು ಹೋದರು. ದೋಟಿ ಸಹಾಯದಿಂದ ಅನೇಕ ಕೃಷಿಕರು ಸಾಹಸ ಮಾಡಿದರೂ ಕೊಳೆರೋಗ ನಿಯಂತ್ರಣ ಮಾಡಲು ಸಾಧ್ಯವಾಗಲಿಲ್ಲ. ಅದರಲ್ಲೂ ಮಲೆನಾಡು ಭಾಗದಲ್ಲಿ, ಸುಳ್ಯ, ಕಡಬ, ಬೆಳ್ತಂಗಡಿ ಮೊದಲಾದ ಕಡೆಗಳಲ್ಲಿ ನಿರಂತರವಾದ ಭಾರೀ ಮಳೆಗೆ ವಾತಾವರಣದ ಉಷ್ಣತೆಯೂ ತೀವ್ರವಾಗಿ ಇಳಿಕೆಯಾಯಿತು. ಪರಿಣಾಮವಾಗಿ ಎಲ್ಲೆಡೆಯೂ ಕೊಳೆರೋಗ ಬಾಧಿಸಿದೆ. ಈಗ ರೋಗದಿಂದ ಅಡಿಕೆ ಬೀಳುತ್ತಿದೆ. ಫಸಲು ಅರ್ಧದಷ್ಟು ನಷ್ಟವಾಗಿದೆ. ಅಡಿಕೆ ಮರದ ಬುಡ ತುಂಬೆಲ್ಲಾ ಅಡಿಕೆ ರಾಶಿ ರಾಶಿ ಬಿದ್ದಿದೆ.
ಇದೀಗ ಮತ್ತೆ ಮಳೆಯ ಆತಂಕ ಎದುರಾಗಿದೆ. ಕೆಲವು ಕಡೆ ಮಳೆಯ ಕಾರಣದಿಂದ ಒಮ್ಮೆಯೂ ಔಷಧಿ ಸಿಂಪಡಣೆ ಸಾಧ್ಯವಾಗಲಿಲ್ಲ. ಇನ್ನಷ್ಟು ಮಳೆಯಾದರೆ ಅಡಿಕೆ ಬೆಳೆಗಾರರು ಈ ಬಾರಿ ಸಂಕಷ್ಟ ಎದುರಿಸಬೇಕಾಗುತ್ತದೆ. ಈಗಾಗಲೇ ವಿವಿಧ ಸಂಕಷ್ಟದಿಂದ ಬಳಲುತ್ತಿರುವ ಅಡಿಕೆ ಬೆಳೆಗಾರರಿಗೆ ಮಳೆಯೂ ಶಾಕ್ ನೀಡಿದೆ. ಧಾರಣೆ ಇದ್ದರೂ ಕೈಗೆ ಸಿಗದ ಪರಿಸ್ಥಿತಿಯಾಗಿದೆ.
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…
ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9535156490