ಪ್ರಮುಖ

ಅಡಿಕೆ ಸಿಪ್ಪೆಯ ನಾರಿನಿಂದ ಬಟ್ಟೆ ತಯಾರಿಕೆ | ಅಂತರಾಷ್ಟ್ರೀಯ ಕ್ಲೋಥಿಂಗ್ ಸೈನ್ಸ್ ಅಂಡ್ ಟೆಕ್ನಾಲಜಿಗೆ ಸೇರ್ಪಡೆಗೊಂಡ ತಾಂತ್ರಿಕತೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಡಿಕೆಯ ಪರ್ಯಾಯ ಬಳಕೆಯ ಬಗ್ಗೆ ಕೆಲವು ಸಮಯಗಳಿಂದ ಪ್ರಯತ್ನ ನಡೆಯುತ್ತಿದೆ. ಅಡಿಕೆ ಜಗಿಯುವುದಕ್ಕೆ ಮಾತ್ರವಲ್ಲ, ಅದರ ಹೊರತಾದ ಉತ್ಪನ್ನ ತಯಾರು ಮಾಡಬಹುದು ಎನ್ನುವ ಅಧ್ಯಯನ ನಡೆಯುತ್ತಿದ್ದರೂ ಅದರ ದಾಖಲೀಕರಣ ನಡೆಯುತ್ತಿರಲಿಲ್ಲ. ಇದೀಗ ಹಂತ ಹಂತವಾಗಿ ದಾಖಲೀಕರಣವಾಗುತ್ತಿದೆ. ಇದೀಗ ಅಡಿಕೆ ಸಿಪ್ಪೆಯ ನಾರು ಬಟ್ಟೆ ತಯಾರಿಕೆಗೂ ಬಳಕೆ ಮಾಡಬಹುದು ಎಂಬುದು ಅಂತರಾಷ್ಟ್ರೀಯ ಕ್ಲೋಥಿಂಗ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ಅಡಿಕೆ ಬೆಳೆಯಲ್ಲಿ ಅಡಿಕೆ ಸಿಪ್ಪೆಯ ವಿಲೇವಾರಿಯೇ ಬಹುದೊಡ್ಡ ಸಮಸ್ಯೆ. ಈ ಬಗ್ಗೆ ಹಲವು ಸಮಯಗಳಿಂದ ಚರ್ಚೆ ನಡೆಯುತ್ತಿದೆ. ಅಡಿಕೆ ಸಿಪ್ಪೆಯನ್ನು ಏನೆಲ್ಲಾ ಮಾಡಬಹುದು ಎಂಬುದರ ಬಗ್ಗೆ ಪ್ರಯೋಗ ನಡೆಯುತ್ತಿತ್ತು. ಬಹುಪಾಲು ಮಂದಿ ಅಡಿಕೆ ಸಿಪ್ಪೆಯನ್ನು ಗೊಬ್ಬರವಾಗಿ ಬಳಕೆ ಮಾಡುತ್ತಿದ್ದರು. ಅಡಿಕೆ ಸಿಪ್ಪೆ ಕೃಷಿ ತ್ಯಾಜ್ಯವಾಗಿದ್ದು, ಅಡಿಕೆ ತೋಟದ ಆರ್ಥಿಕತೆಗೆ ಕೊಡುಗೆ ನೀಡುವುದಿಲ್ಲ. ಕಡಿಮೆ-ವೆಚ್ಚದ ಮತ್ತು ಹಗುರವಾದ ತಯಾರಿಕೆಯಲ್ಲಿ ಅಡಿಕೆ ಸಿಪ್ಪೆಯ  ಬಳಸುವುದು ಅಡಿಕೆ ಸಿಪ್ಪೆಯ ನಾರಿನ ಉಪಯುಕ್ತತೆಯ ಮೌಲ್ಯವನ್ನು ಒದಗಿಸುತ್ತದೆ ಎನ್ನುವ ಚಿಂತನೆ ನಡೆಯುತ್ತಿತ್ತು.

ಈ ನಡುವೆ ಅಡಿಕೆ ಸಿಪ್ಪೆಯಲ್ಲಿ ಬೆಳೆಯುವ ಅಣಬೆಯೂ ಖಾದ್ಯವಾಗಿ ಬಳಕೆ ಮಾಡಬಹುದು, ಅದು ಹೇಗೆ ಎಂಬುದರ ಬಗ್ಗೆಯೂ ಅಂತರಾಷ್ಟ್ರೀಯ ಫುಡ್‌ ಜರ್ನಲ್‌ ನಲ್ಲಿ ಕೃಷಿಕ ಹರೀಶ್‌ ರೈ ದೇರ್ಲ ಅವರ ಪ್ರಯತ್ನವನ್ನು ಸಿಪಿಸಿಆರ್‌ಐ ವಿಜ್ಞಾನಿಗಳ ಅಧ್ಯಯನದ ಕಾರಣದಿಂದ ಈಗ ದಾಖಲಾಗಿದೆ.

ಇದೀಗ ಅಡಿಕೆ ಸಿಪ್ಪೆಯ ಇನ್ನೊಂದು ಬಳಕೆಯ ಬಗ್ಗೆಯೂ ಅಂತರಾಷ್ಟ್ರೀಯ ಕ್ಲೋಥಿಂಗ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಉಲ್ಲೇಖಿಸಲಾಗಿದೆ.ಅಡಿಕೆಯ ಸಿಪ್ಪೆಯಲ್ಲಿನ ನಾರಿನ ಗುಣ ಹಲವಾರು ಬಳಕೆಗಳನ್ನು ಹೊಂದಿದೆ. ಇದನ್ನು ಸ್ಯಾನಿಟರಿ ಪಾಡ್ ಪ್ಯಾಡ್, ಕ್ರಾಪ್ಟ್ ಪೇಪರ‍್, ರಟ್ಟು ತಯಾರಿಕೆಯಲ್ಲಿ ಬಳಸಬಹುದಾಗಿದೆ. ಅಡಿಕೆ ಸಿಪ್ಪೆಯಲ್ಲಿನ ನಾರು ಪರಿಸರ ಸ್ನೇಹಿ ನೈಸರ್ಗಿಕ ನಾರುಗಳ ಬಳಕೆಯನ್ನು ಉತ್ತೇಜಿಸುವ ಮೂಲಕ ಫ್ಯಾಶನ್ ಉದ್ಯಮದ ಸಮರ್ಥ ಪ್ರಯತ್ನಗಳು, ಸಂಶೋಧನೆಗಳು ಗ್ರಾಮೀಣ ಕೃಷಿ ಸಮುದಾಯಕ್ಕೆ ಪ್ರಯೋಜನಕಾರಿಯಾಗಿದೆ.

ಅಡಿಕೆ ಸಿಪ್ಪೆಯ ನಾರುಗಳ ಹೊಸ ಬಳಕೆ ಮತ್ತು ಸಮರ್ಥವಾದ ಫ್ಯಾಷನ್‌ಗೆ ಕೊಡುಗೆಯಾಗಿದೆ. ಉತ್ತಮ  ಫೈಬರ್ ಗುಣಲಕ್ಷಣಗಳನ್ನು ಹೊಂದಿರುವ ಅಡಿಕೆ ಸಿಪ್ಪೆ ರಟ್ಟಿಂಗ್ ವಿಧಾನದ ಮೂಲಕ ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು ಎಂದು ಉಲ್ಲೇಖಿಸಲಾಗಿದೆ. ಎಲ್ಲಾ ಫೈಬರ್ ಪರೀಕ್ಷೆಗಳನ್ನು ದಕ್ಷಿಣ ಭಾರತ ಟೆಕ್ಸ್‌ಟೈಲ್ ರಿಸರ್ಚ್ ಅಸೋಸಿಯೇಷನ್ ​ನಲ್ಲಿ ಉದ್ಯಮದಿಂದ ಪ್ರಾಯೋಜಕತ್ವ ಮತ್ತು ಭಾರತ ಸರ್ಕಾರದ ಜವಳಿ ಸಚಿವಾಲಯದ ಬೆಂಬಲದೊಂದಿಗೆ   ಪ್ರತ್ಯೇಕವಾಗಿ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಕಚ್ಚಾ ಅಡಿಕೆ ನಾರುಗಳ ಜೈವಿಕ ಮೃದುಗೊಳಿಸುವಿಕೆ ಮತ್ತು ಸುಧಾರಿತ ನೂಲು, ಅದರ  ಫೈಬರ್ ಗುಣಲಕ್ಷಣಗಳು, ಅದರ ಪ್ರಭಾವಗಳಿ ಇತ್ಯಾದಿಗಳು ಅಧ್ಯಯನದ ವಿಷಯವಾಗಿತ್ತು. ಕೊನೆಗೆ ಈ ನಾರು  ಫ್ಯಾಷನ್ ಉದ್ಯಮದಲ್ಲಿ ಮಹತ್ವದ ಬದಲಾವಣೆಗೆ ಕೊಡುಗೆ ನೀಡುವ ಭರವಸೆ ವ್ಯಕ್ತವಾಗಿದೆ.

ಇಲ್ಲಿ ಎರಡು ಮುಖ್ಯವಾದ ಅಂಶಗಳು ಇವೆ. ಇಂದು ಫ್ಯಾಶನ್‌ ಉದ್ಯಮವೂ ಕೂಡಾ ನೈಸರ್ಗಿಕವಾದ ಉತ್ಪನ್ನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ, ಹೀಗಾಗಿ ಅಡಿಕೆ ಸಿಪ್ಪೆಯ ನಾರು ನೈಸರ್ಗಿಕ ಕೊಡುಗೆಯಾಗಿದೆ. ಇನ್ನೊಂದು ಅಂಶವೆಂದರೆ ಅಧಿಕ ಪ್ರಮಾಣದ ರಾಸಾಯನಿಕವು ಪ್ಯಾಶನ್‌ ಉದ್ಯಮದಲ್ಲಿ ಬಳಕೆಯಾಗುವುದು ಕಡಿಮೆಯಾಗಿಸುವುದು. ಇದೆರಡೂ ಕೂಡಾ ಅಡಿಕೆ ನಾರಿನಿಂದ ಸಾಧ್ಯವಿದೆ. ಮತ್ತೊಂದು ಪ್ರಮುಖವಾದ ಅಂಶವೆಂದರೆ ಕೃಷಿ ತ್ಯಾಜ್ಯವನ್ನು ಅಂದರೆ ಅಡಿಕೆ ಸಿಪ್ಪೆಯನ್ನು ಸೂಕ್ತವಾದ ಬೆಲೆಬಾಳುವ ನಾರುಗಳಾಗಿ ಪರಿವರ್ತಿಸಲು ಕಾರ್ಯವೂ ನಡೆಯುತ್ತದೆ. ಹೀಗಾಗಿ ಈ ಯೋಜನೆಯು ಹೆಚ್ಚು ಗಮನ ಸೆಳೆದಿದೆ.

ಅಡಿಕೆ ಸಿಪ್ಪೆಯ ನಾರುಗಳು ಪ್ರಧಾನವಾಗಿ ಸೆಲ್ಯುಲೋಸ್ ಮತ್ತು ವಿವಿಧ ಪ್ರಮಾಣದಲ್ಲಿ ಹೆಮಿಸೆಲ್ಯುಲೋಸ್, ಲಿಗ್ನಿನ್, ಪೆಕ್ಟಿನ್ ಮತ್ತು ಪ್ರೊಟೊಪೆಕ್ಟಿನ್ ನಿಂದ ಕೂಡಿದೆ. ಸೆಲ್ಯುಲೋಸ್ ಮತ್ತು ಫೈಬರ್ ಶಕ್ತಿ ಗುಣಲಕ್ಷಣಗಳ  ಪ್ರಮಾಣ ನಷ್ಟವಿಲ್ಲದೆಯೇ ಲಿಗ್ನಿನ್ ಅನ್ನು ತೆಗೆದುಹಾಕುವ ಸೂಕ್ಷ್ಮಜೀವಿಗಳು ಅಡಿಕೆ ನಾರಿನ ಜೈವಿಕ ಮೃದುತ್ವಕ್ಕೆ ಅತ್ಯಂತ ಆಕರ್ಷಕವಾಗಿವೆ. ಮೊದಲ 72 ಗಂಟೆಗಳ  ಸಮಯದಲ್ಲಿ ಶಿಲೀಂಧ್ರಗಳ ಬೆಳವಣಿಗೆಯಾಗುತ್ತದೆ ಮತ್ತು ಒಂದು ವಾರದಲ್ಲಿ, ಕಿಣ್ವದ ಉತ್ಪಾದನೆಯು ಗರಿಷ್ಠ ಮಟ್ಟವನ್ನು ತಲುಪುತ್ತದೆ. ಇದರಿಂದಾಗಿ ಫೈಬರ್ನ ಬಣ್ಣ ಮತ್ತು ಮೃದುತ್ವವನ್ನು ಸುಧಾರಿಸುತ್ತದೆ ಎನ್ನುವುದು ಅಧ್ಯಯನ. ಬಣ್ಣ ಮತ್ತು ಮೃದುತ್ವದಲ್ಲಿ ಗರಿಷ್ಠ ಸುಧಾರಣೆಯಾಗಿದೆ. ಹೀಗಾಗಿ ಸಹಜವಾಗಿ ಮೃದುಗೊಂಡ ಅಡಿಕೆ ನಾರುಗಳನ್ನು ಹತ್ತಿ, ವಿಸ್ಕೋಸ್ ಮತ್ತು ಪಾಲಿಯೆಸ್ಟರ್‌ನೊಂದಿಗೆ ಮಿಶ್ರಣ ಮಾಡುವ ಮೂಲಕ ಬಟ್ಟೆಗಳು, ಜವಳಿ ಇತ್ಯಾದಿಗಳ ಉತ್ಪಾದನೆಗೆ ವಾಣಿಜ್ಯಿಕವಾಗಿಯೂ ಬಳಸಿಕೊಳ್ಳಬಹುದು ಎಂದು ಅಧ್ಯಯನ ಉಲ್ಲೇಖಿಸಿದೆ.

ಸಾಂಪ್ರದಾಯಿಕ ಕಚ್ಚಾ ಸಾಮಗ್ರಿಗಳೊಂದಿಗೆ ಬೆರೆಸಿದ ಅಡಿಕೆ ಸಿಪ್ಪೆಯಿಂದ ಹಲ್ಲುಜ್ಜುವ ಬ್ರಷ್, ಪೇಪರ್ ಬೋರ್ಡ್‌ಗಳು, ಪ್ಲೈಬೋರ್ಡ್‌ಗಳು, ಹಾರ್ಡ್‌ಬೋರ್ಡ್‌ಗಳು ಮತ್ತು ಪ್ಲಾಸ್ಟಿಕ್‌ಗಳಂತಹ ಉತ್ಪನ್ನಗಳಿಗೆ ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳನ್ನು ಮುಂದೆ ನಡೆಸಬೇಕಿದೆ.

ಈ ಹಿಂದೆ ಶಿವಮೊಗ್ಗದ ಸುರೇಶ್‌ ಹಾಗೂ ಅವರ ತಂಡ ಅಡಿಕೆ ನಾರಿನಿಂದ ಹಲವು ಉತ್ಪನ್ನ ತಯಾರು ಮಾಡಿದ್ದರು. ಅಡಿಕೆ ನಾರಿನ ಕೈಚೀಲ, ತಟ್ಟೆ ಸೇರಿದಂತೆ ವಿವಿಧ ಉತ್ಪನ್ನ ತಯಾರು ಮಾಡಿದ್ದರು.ಪರಿಸರ ಸ್ನೇಹಿ ಎಂಬ ಕಾರಣದಿಂದ ಅದು ಗಮನ ಸೆಳೆದಿತ್ತು.

ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೆಳಗಾವಿಯಲ್ಲಿ 3 ದಿನಗಳ ಮಾವು, ಜೇನು ಮೇಳ | ರೈತರಿಂದ ಪ್ರದರ್ಶನ, ಗ್ರಾಹಕರಿಗೆ ನೇರ ಮಾರಾಟ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆಯಿಂದ ಬೆಳಗಾವಿಯ ಹೋಮ್ ಪಾರ್ಕ್ ನಲ್ಲಿ…

3 hours ago

ದೇಶಾದ್ಯಂತ 47 ಸ್ಥಳಗಳಲ್ಲಿ ಉದ್ಯೋಗ ಮೇಳ | 51000 ನವ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಣೆ

ದೇಶಾದ್ಯಂತ ಒಂದೇ ದಿನ 47 ಸ್ಥಳಗಳಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಬೆಂಗಳೂರಿನ ಎನ್‌ಎಸಿಐಎ…

4 hours ago

ಹವಾಮಾನ ವರದಿ | 26-04-2025 | ಸಂಜೆ ಗುಡುಗು ಸಹಿತ ಮಳೆ ಸಾಧ್ಯತೆ |

ಅಲ್ಲಲ್ಲಿ ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

11 hours ago

ಚಿಕ್ಕಬಳ್ಳಾಪುರ ಜಿಲ್ಲೆ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ 2863 ಎಕರೆ ಭೂಮಿ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ೨…

16 hours ago

ಹೊಸರುಚಿ | ಹಲಸಿನ ಕಾಯಿ ಪೂರಿ

ಹಲಸಿನ ಕಾಯಿ ಪೂರಿಗೆ ಬೇಕಾಗುವ ಸಾಮಗ್ರಿಗಳು: ಹಲಸಿನ ಕಾಯಿ 1/2 ಕಪ್, ಗೋಧಿ ಹುಡಿ.1…

17 hours ago

ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಿಸುವ ಕೊನೆಯ ಅವಕಾಶ

ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು…

1 day ago