ಭೂತಾನ್‌ನಲ್ಲಿನ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಭಾರತವು 279.2 ಕೋಟಿ ರೂಪಾಯಿಗಳ ಅಭಿವೃದ್ಧಿ ಸಹಾಯವನ್ನು ಒದಗಿಸುತ್ತಿದೆ. ರಸ್ತೆ ಮೂಲಸೌಕರ್ಯ, ನಗರಾಭಿವೃದ್ಧಿ, ಕೃಷಿ, ಕೈಗಾರಿಕಾ ಅಭಿವೃದ್ಧಿ, ಆರೋಗ್ಯ ಮೂಲಸೌಕರ್ಯ, ಶಿಕ್ಷಣ ಮತ್ತು ಸಂಸ್ಕೃತಿ ಸಂರಕ್ಷಣೆಯಂತಹ ಕ್ಷೇತ್ರಗಳಲ್ಲಿ ಅನುಷ್ಟಾನ ಮಾಡಲಾಗುತ್ತದೆ ಎಂದು ಭೂತಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಭೂತಾನ್‌ನಲ್ಲಿ ವ್ಯಾಪಾರ ಮೂಲಸೌಕರ್ಯ ಮತ್ತು ಆಡಳಿತ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಲು ಪರಿವರ್ತನಾ ವ್ಯಾಪಾರ ಬೆಂಬಲ ಸೌಲಭ್ಯಕ್ಕಾಗಿ ಕೂಡಾ ನೆರವು ನೀಡಲಾಗುತ್ತಿದೆ. ಭಾರತವು ಭೂತಾನ್‌ನಾದ್ಯಂತ ಹಲವಾರು ಯೋಜನೆಗಳ ಅಭಿವೃದ್ಧಿಯನ್ನು ಬೆಂಬಲಿಸುತ್ತಿದೆ. ಭೂತಾನ್ ಭಾರತದ ಉತ್ತಮ ಸ್ನೇಹಿತ ದೇಶವಾಗಿ ಮುಂದುವರಿಯುತ್ತಿದೆ. ಭಾರತಕ್ಕೆ ಭೂತಾನ್ ದೇಶವು ವಿವಿಧ ಕಾರಣಗಳಿಗೆ ಹತ್ತಿರವಾಗಿದೆ. ಈಗ ಉಭಯ ದೇಶಗಳ ನಡುವಿನ ರಾಜಕೀಯ ಸಂಬಂಧಗಳು ಕೂಡ ಬಹಳ ಉತ್ತಮವಾಗಿವೆ. ಭೂತಾನ್ ಎಲ್ಲಾ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತಕ್ಕೆ ಬೆಂಬಲವನ್ನು ನೀಡುತ್ತದೆ.
ಇದಕ್ಕೆ ಪ್ರಮುಖ ಕಾರಣ ಇದೆ. ಭೂತಾನ್ ಚೀನಾದೊಂದಿಗೆ ಈಚೆಗೆ ಸೀಮಿತ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದೆ. ಭೂತಾನ್ ಮೇಲೆ ಭಾರತದ ಒತ್ತಡವೇ ಕಾರಣ ಎಂದು ಚೀನಾ ಈಚೆಗೆ ಹೇಳಿದೆ. ಭೂತಾನ್ ದೇಶವು ಭಾರತ ಮತ್ತು ಚೀನಾ ನಡುವಿನ ಬಫರ್ ದೇಶವಾಗಿದೆ. ಹೀಗಾಗಿ ಈಗ ಭಾರತಕ್ಕೆ ಭೂತಾನ್ ದೇಶವು ಹೆಚ್ಚು ಆಪ್ತವಾಗಿದೆ. ಭೂತಾನ್ ಚೀತಾನದೊಂದಿಗೆ ಸೀಮಿತ ಸಂಬಂಧ ಹೊಂದಿದೆ. ಆದರೆ ಭಾರತವು ಈಗ ಭೂತಾನ್‌ಗೆ ಹೆಚ್ಚಿನ ಅನುದಾನದ ನೆರವು ಒದಗಿಸುವ ದೇಶವಾಗಿದೆ.
ಭಾರತವು ಈಗ ಭೂತಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವೂ ಆಗಿದೆ. ಇತ್ತೀಚೆಗೆ, ಭೂತಾನ್ ಸರ್ಕಾರದ ಕೋರಿಕೆಯ ಮೇರೆಗೆ ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಭಾರತವು ನಿಯಮಾವಳಿಗಳನ್ನು ಸಡಿಲಗೊಳಿಸಿದೆ. ಭಾರತ ಸರ್ಕಾರವು ಭೂತಾನ್‌ನಿಂದ ವಾರ್ಷಿಕವಾಗಿ 17,000 ಟನ್ ಹಸಿರು ಅಡಿಕೆಯನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ಭೂತಾನ್ ದೇಶವು ಭಾರತದ ಅಡಿಕೆ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಕೂಡಾ ಸಿದ್ಧತೆ ಮಾಡಿಕೊಂಡಿದೆ.
ಹೀಗಾಗಿ ಸದ್ಯ ಭೂತಾನ್ ದೇಶದಿಂದ ಅಡಿಕೆ ಆಮದು ಸ್ಥಗಿತಗೊಳ್ಳುವುದು ಕಷ್ಟವಿದೆ. ಭಾರತಕ್ಕೆ ಅಂತರಾಷ್ಟ್ರೀಯ ಸಂಬಂಧ ಗಟ್ಟಿಯಾಗಲು ಹಾಗೂ ನೆರೆಯ ಚೀನಾ ದೇಶವನ್ನು ಬಗ್ಗು ಬಡಿಯಲು ಭೂತಾನ್ ನೆರವು ಅಗತ್ಯವಿದೆ. ಇದಕ್ಕಾಗಿ ಕೆಲವೊಂದು ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದೆ ಎನ್ನುವುದು ರಾಜಕೀಯ ವಿಶ್ಲೇಷಣೆಯ ವರದಿಯಾಗಿದೆ.
ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು…
ನೈಸರ್ಗಿಕ ರಬ್ಬರ್ ಮತ್ತು ಅದರ ಉತ್ಪನ್ನಗಳು ಅರಣ್ಯನಾಶ ಮುಕ್ತ ನಿಯಮಗಳಿಗಾಗಿ ಯುರೋಪಿಯನ್ ಒಕ್ಕೂಟ…
ಮುನ್ಸೂಚನೆಯಂತೆ ಮೇ 1 ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಆರಂಭವಾಗುವ ಸಾಧ್ಯತೆಗಳಿವೆ.
ಖಾಸಗಿಯವರಿಂದ ಒತ್ತುವರಿಯಾಗಿರುವ ಪ್ರದೇಶವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ…
ಭಾರತವು 4.8 ಟನ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆಕಳುಹಿಸುವ ಮೂಲಕ ಮಾನವೀಯ ನೆರವು ನೀಡಿದೆ. ಇದರಲ್ಲಿ…
ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ…