ಭೂತಾನ್‌ ಅಡಿಕೆ ಆಮದು | ಭಾರತದ ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮವಿಲ್ಲ – ಸಚಿವೆ ಶೋಭಾ ಕರಂದ್ಲಾಜೆ |

Advertisement
Advertisement

ಭೂತಾನ್‌ ದೇಶವು ಕೇಂದ್ರ ಸರ್ಕಾರಕ್ಕೆ ಮಾಡಿಕೊಂಡ ಕೋರಿಕೆಯಂತೆ ಒಂದು ವರ್ಷದ ಮಟ್ಟಿಗೆ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಆಮದು ಕಾರಣದಿಂದ ಭಾರತದ ಅಡಿಕೆ ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಆಗದು ಎಂದು ಕೃಷಿ ಮತ್ತು ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement
ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತದಲ್ಲಿ ಸುಮಾರು 15 ಲಕ್ಷ ಟನ್‌ ಅಡಿಕೆ ಬೆಳೆಯಲಾಗುತ್ತದೆ.  ಭೂತಾನ್‌ ದೇಶದಲ್ಲಿ ಕೇವಲ 17 ಸಾವಿರ  ಟನ್ ಅಡಿಕೆ ಬೆಳೆಯಲಾಗುತ್ತಿದೆ.‌ ನಮ್ಮ ದೇಶದ ಬೆಳೆಯ 0.02 ಪ್ರಮಾಣದಷ್ಟು ಮಾತ್ರಾ ಅಲ್ಲಿ ಅಡಿಕೆ ಇದೆ. ಹೀಗಾಗಿ ಈ ಅಡಿಕೆ ಆಮದು ಕಾರಣದಿಂದ ಭಾರತದ ಅಡಿಕೆ ಮಾರುಕಟ್ಟೆಗೆ ಪರಿಣಾಮವಾಗದು.  ಭೂತಾನ್‌ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಕಾರಣ ಭೂತಾನ್ ಕೇಂದ್ರ ಸರ್ಕಾರಕ್ಕೆ ಮಾಡಿಕೊಂಡ ಕೋರಿಕೆಯಂತೆ ಒಂದು ವರ್ಷದ ಮಟ್ಟಿಗೆ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆಯಷ್ಟೇ ಎಂದು  ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement
Advertisement

ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಪರವಾಗಿದೆ. ಅಡಿಕೆ ಬೆಳೆಗಾರರಿಗೆ ಸಂಕಷ್ಟವಾಗದಂತೆ ಹಿಂದೆಯೂ ಕೆಲಸ ಮಾಡಿದೆ. ಅಡಿಕೆ ಆಮದು ಮೇಲೆ ಅಧಿಕ ತೆರಿಗೆ ವಿಧಿಸಿದ ಕಾರಣದಿಂದ ಅಡಿಕೆ ಆಮದು ತಡೆಯಾಗಿತ್ತು ಹಾಗೂ ಅಡಿಕೆ ಇಂದು 450 ರಿಂದ 500 ರೂ. ಬೆಲೆಗೆ ಮಾರಾಟವಾಗುತ್ತಿದೆ ಎಂದ ಶೋಭಾ ಕರಂದ್ಲಾಜೆ ಅಡಿಕೆ ಕಳ್ಳಸಾಗಾಣಿಕೆಗೂ ಸರ್ಕಾರ ಕ್ರಮ ಕೈಗೊಂಡಿತ್ತು. ಈಗ ಭೂತಾನ್‌ ದೇಶದಿಂದ ಆಮದು ಕಾರಣದಿಂದ ಭಾರತದ ಅಡಿಕೆ ಧಾರಣೆ ಮೇಲೆ ಪರಿಣಾಮ ಬೀರದು ಎಂದು ಅವರು ಹೇಳಿದ್ದಾರೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಭೂತಾನ್‌ ಅಡಿಕೆ ಆಮದು | ಭಾರತದ ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮವಿಲ್ಲ – ಸಚಿವೆ ಶೋಭಾ ಕರಂದ್ಲಾಜೆ |"

Leave a comment

Your email address will not be published.


*