ಭೂತಾನ್‌ ಅಡಿಕೆ ಆಮದು | ಹಸಿ ಅಡಿಕೆ ಆಮದು ಬಿಗಿ ಕ್ರಮಕ್ಕೆ ಸೂಚನೆ |

October 10, 2022
6:24 PM

ಭೂತಾನ್‌ನಿಂದ ಅಡಿಕೆ(Arecanut) ಆಮದು ಮಾಡುವ ವೇಳೆ ಬಿಗಿಯಾದ ಕ್ರಮ ಕೈಗೊಳ್ಳಲು ಹಾಗೂ ಸರಿಯಾದ ಮಾರ್ಗಸೂಚಿ ಅನುಸರಿಸಲು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರೀಯ  ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ(CBIC) ಕೋಲ್ಕತ್ತಾ ಕಸ್ಟಮ್ಸ್ ವಲಯಕ್ಕೆ ನಿರ್ದೇಶನ ನೀಡಿದೆ.

ಆಮದು ನೀತಿಯ ಪ್ರಕಾರ ಇದುವರೆಗೆ ಹಸಿ ಅಡಿಕೆ ಆಮದು ಅವಕಾಶ ಇರಲಿಲ್ಲ. ಆದರೆ ವಿಶೇಷ ಸೂಚನೆಯಂತೆ ಈಗ ಹಸಿರು ಅಡಿಕೆಗೆ ಆಮದು ನೀತಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಕೆಲವು ನಿಯಮಗಳಲ್ಲಿ ಬದಲಾವಣೆ ಹಾಗೂ ಕಟ್ಟುನಿಟ್ಟಿನ  ಕೆಲವು  ಅಗತ್ಯ ಕ್ರಮಗಳು ಬೇಕಾಗಿದೆ ಎಂದು ಕೇಂದ್ರೀಯ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಹೇಳಿದೆ.

ಆದೇಶದ ಪ್ರತಿ

ಆಮದು ನೋಂದಣಿ ಪ್ರಮಾಣಪತ್ರಗಳ ನೋಂದಣಿ ಹಾಗೂ ಆಮದು ಮತ್ತು ರಫ್ತು ಪ್ರಮಾಣದ ಮಾನ್ಯತೆ , ಮೇಲ್ವಿಚಾರಣೆ ಮಾಡಲು ಸೂಕ್ತವಾದ ಕಾರ್ಯವಿಧಾನವೂ ಅಗತ್ಯವಿದೆ. ಇದರ ಜೊತೆಗೆ ಈ ವರ್ಷ ಕನಿಷ್ಟ ಆಮದು ಬೆಲೆ(MIP) 251 ರೂಪಾಯಿ  ಮಾನದಂಡ ಇಲ್ಲದೆಯೇ ಅಡಿಕೆ ಆಮದು ಆಗುತ್ತದೆ, ಆದರೆ ಇಲ್ಲಿ ಹಸಿ ಅಡಿಕೆ ಮಾತ್ರವೇ ಆಮದು ಆಗಬೇಕು. ಅದರ ಜೊತೆಗೆ ಭೂತಾನ್‌ ದೇಶದಿಂದ ಮಾತ್ರವೇ ಒಂದು ಬಂದರಿನ ಮೂಲಕವೇ 17000 ಟನ್‌ ಹಸಿಅಡಿಕೆ  ಆಮದು ಆಗಬೇಕು. 2022-23 ರಲ್ಲಿ 8500 ಟನ್‌ ಹಾಗೂ 2023-24 ರ ನಂತರ 17000 ಟನ್‌ ಆಮದು ಮಾಡಲು ಡಿಜಿಎಫ್‌ಟಿ ಅನುಮತಿ ನೀಡಿದೆ. ಹೀಗಾಗಿ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕು  ಎಂದು ಕೋಲ್ಕತ್ತಾ ಕಸ್ಟಮ್ಸ್‌ ವಲಯಕ್ಕೆ ಕೇಂದ್ರೀಯ  ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ನಿರ್ದೇಶನ ನೀಡಿದೆ.ಉಳಿದಂತೆ ಡಿಜಿಎಫ್‌ಟಿ ನಿಯಮಗಳು ಪಾಲನೆಯಾಗಬೇಕು ಎಂದು ಹೇಳಿದೆ.

ಈಗಿನ ಆಮದು ನೀತಿ ಪ್ರಕಾರ ಹಾಗೂ ಅಡಿಕೆ ಆಮದು ಶರ್ತಗಳ ಪ್ರಕಾರ ಹಸಿ ಅಡಿಕೆ ನಿಷೇಧಿತ ವಸ್ತುವಾಗಿದೆ ಎಂಬ ಅಂಶದ ಹಿನ್ನೆಲೆಯಲ್ಲಿ  ಪರಿಷ್ಕೃತ ನೀತಿ ನಿಬಂಧನೆಗಳ ಪರಿಣಾಮಕಾರಿ ಅನುಷ್ಠಾನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

 

ಸೆ.28 ರಂದು ಆಮದು ಅಧಿಸೂಚನೆ ಹೊರಡಿಸಲಾಗಿತ್ತು. ಕನಿಷ್ಟ ಆಮದು ಬೆಲೆ ಇಲ್ಲದೆಯೇ ಭೂತಾನ್‌ನಿಂದ 17000 ಟನ್‌ ಹಸಿ ಅಡಿಕೆ ಆಮದು ಮಾಡಿಕೊಳ್ಳಲು DGFT  ಅನುಮತಿ ನೀಡಿತ್ತು ಹಾಗೂ ಅದಕ್ಕೆ ಅಗತ್ಯವಾದ ಕಾರ್ಯಸೂಚಿ, ಅರ್ಜಿ, ನೋಂದಣಿ ಹಾಗೂ ಆಮದು ನಿಯಮಗಳ ಬಗ್ಗೆ ಹೇಳಿತ್ತು. ಆದರೆ ಹಸಿ ಅಡಿಕೆ ಆಮದಿಗೆ ಕೆಲವು ನೀತಿಗಳಲ್ಲಿ ಬದಲಾವಣೆ ಅಗತ್ಯವಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ
September 13, 2026
9:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?
September 13, 2026
12:16 PM
by: ಸಾಯಿಶೇಖರ್ ಕರಿಕಳ
ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು
September 13, 2026
8:13 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror