ಭೂತಾನ್‌ನಿಂದ ಅಡಿಕೆ(Arecanut) ಆಮದು ಮಾಡುವ ವೇಳೆ ಬಿಗಿಯಾದ ಕ್ರಮ ಕೈಗೊಳ್ಳಲು ಹಾಗೂ ಸರಿಯಾದ ಮಾರ್ಗಸೂಚಿ ಅನುಸರಿಸಲು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರೀಯ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ(CBIC) ಕೋಲ್ಕತ್ತಾ ಕಸ್ಟಮ್ಸ್ ವಲಯಕ್ಕೆ ನಿರ್ದೇಶನ ನೀಡಿದೆ.
ಆಮದು ನೀತಿಯ ಪ್ರಕಾರ ಇದುವರೆಗೆ ಹಸಿ ಅಡಿಕೆ ಆಮದು ಅವಕಾಶ ಇರಲಿಲ್ಲ. ಆದರೆ ವಿಶೇಷ ಸೂಚನೆಯಂತೆ ಈಗ ಹಸಿರು ಅಡಿಕೆಗೆ ಆಮದು ನೀತಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಕೆಲವು ನಿಯಮಗಳಲ್ಲಿ ಬದಲಾವಣೆ ಹಾಗೂ ಕಟ್ಟುನಿಟ್ಟಿನ ಕೆಲವು ಅಗತ್ಯ ಕ್ರಮಗಳು ಬೇಕಾಗಿದೆ ಎಂದು ಕೇಂದ್ರೀಯ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಹೇಳಿದೆ.
ಆಮದು ನೋಂದಣಿ ಪ್ರಮಾಣಪತ್ರಗಳ ನೋಂದಣಿ ಹಾಗೂ ಆಮದು ಮತ್ತು ರಫ್ತು ಪ್ರಮಾಣದ ಮಾನ್ಯತೆ , ಮೇಲ್ವಿಚಾರಣೆ ಮಾಡಲು ಸೂಕ್ತವಾದ ಕಾರ್ಯವಿಧಾನವೂ ಅಗತ್ಯವಿದೆ. ಇದರ ಜೊತೆಗೆ ಈ ವರ್ಷ ಕನಿಷ್ಟ ಆಮದು ಬೆಲೆ(MIP) 251 ರೂಪಾಯಿ ಮಾನದಂಡ ಇಲ್ಲದೆಯೇ ಅಡಿಕೆ ಆಮದು ಆಗುತ್ತದೆ, ಆದರೆ ಇಲ್ಲಿ ಹಸಿ ಅಡಿಕೆ ಮಾತ್ರವೇ ಆಮದು ಆಗಬೇಕು. ಅದರ ಜೊತೆಗೆ ಭೂತಾನ್ ದೇಶದಿಂದ ಮಾತ್ರವೇ ಒಂದು ಬಂದರಿನ ಮೂಲಕವೇ 17000 ಟನ್ ಹಸಿಅಡಿಕೆ ಆಮದು ಆಗಬೇಕು. 2022-23 ರಲ್ಲಿ 8500 ಟನ್ ಹಾಗೂ 2023-24 ರ ನಂತರ 17000 ಟನ್ ಆಮದು ಮಾಡಲು ಡಿಜಿಎಫ್‌ಟಿ ಅನುಮತಿ ನೀಡಿದೆ. ಹೀಗಾಗಿ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕು ಎಂದು ಕೋಲ್ಕತ್ತಾ ಕಸ್ಟಮ್ಸ್ ವಲಯಕ್ಕೆ ಕೇಂದ್ರೀಯ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ನಿರ್ದೇಶನ ನೀಡಿದೆ.ಉಳಿದಂತೆ ಡಿಜಿಎಫ್‌ಟಿ ನಿಯಮಗಳು ಪಾಲನೆಯಾಗಬೇಕು ಎಂದು ಹೇಳಿದೆ.
ಈಗಿನ ಆಮದು ನೀತಿ ಪ್ರಕಾರ ಹಾಗೂ ಅಡಿಕೆ ಆಮದು ಶರ್ತಗಳ ಪ್ರಕಾರ ಹಸಿ ಅಡಿಕೆ ನಿಷೇಧಿತ ವಸ್ತುವಾಗಿದೆ ಎಂಬ ಅಂಶದ ಹಿನ್ನೆಲೆಯಲ್ಲಿ ಪರಿಷ್ಕೃತ ನೀತಿ ನಿಬಂಧನೆಗಳ ಪರಿಣಾಮಕಾರಿ ಅನುಷ್ಠಾನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಸೆ.28 ರಂದು ಆಮದು ಅಧಿಸೂಚನೆ ಹೊರಡಿಸಲಾಗಿತ್ತು. ಕನಿಷ್ಟ ಆಮದು ಬೆಲೆ ಇಲ್ಲದೆಯೇ ಭೂತಾನ್‌ನಿಂದ 17000 ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು DGFT ಅನುಮತಿ ನೀಡಿತ್ತು ಹಾಗೂ ಅದಕ್ಕೆ ಅಗತ್ಯವಾದ ಕಾರ್ಯಸೂಚಿ, ಅರ್ಜಿ, ನೋಂದಣಿ ಹಾಗೂ ಆಮದು ನಿಯಮಗಳ ಬಗ್ಗೆ ಹೇಳಿತ್ತು. ಆದರೆ ಹಸಿ ಅಡಿಕೆ ಆಮದಿಗೆ ಕೆಲವು ನೀತಿಗಳಲ್ಲಿ ಬದಲಾವಣೆ ಅಗತ್ಯವಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…