ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆಗಳ ಪ್ರಮುಖರನ್ನೊಳಗೊಂಡ ನಿಯೋಗ ದೆಹಲಿಗೆ ತೆರಳಿ ಅಡಿಕೆಯ ಕನಿಷ್ಟ ಆಮದು ಬೆಲೆ ಹೆಚ್ಚಳಕ್ಕೆ ಮನವಿ ಮಾಡಿದೆ. ಅಡಿಕೆಯ ಕನಿಷ್ಟ ಆಮದು ಬೆಲೆಯನ್ನು ಕೆ.ಜಿಗೆ 360 ರೂಪಾಯಿಗೆ ನಿಗದಿಪಡಿಸುವಂತೆ ನಿಯೋಗವು ಸಚಿವರಿಗೆ ಮನವಿಯನ್ನು ಸಲ್ಲಿಸಿತು.
ನಿಯೋಗವು ದೆಹಲಿಯಲ್ಲಿ ಕೆಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯವರನ್ನು ಭೇಟಿ ಮಾಡಿತು. ಅಡಿಕೆಯ ಕನಿಷ್ಟ ಆಮದು ಬೆಲೆಯನ್ನು ಕೆ.ಜಿಗೆ 360 ರೂಪಾಯಿಗೆ ನಿಗದಿಪಡಿಸುವಂತೆ ನಿಯೋಗವು ಸಚಿವರಿಗೆ ಮನವಿಯನ್ನು ಸಲ್ಲಿಸಿತು. ಕೇಂದ್ರ ಸರ್ಕಾರವು 2017 ರಲ್ಲಿ ಕನಿಷ್ಟ ಬೆಲೆಯನ್ನು ಕೆ.ಜಿಗೆ 251 ರೂಪಾಯಿಗೆ ನಿಗದಿಪಡಿಸಿತ್ತು.
ನಿಯೋಗದಲ್ಲಿ ಕ್ಯಾಂಪ್ಕೊಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ ಹಾಗೂ ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರಾದ ಎಚ್ .ಎಂ .ಕೃಷ್ಣಕುಮಾರ್, ಅಡಿಕೆ ಮಹಾಮಂಡಳದ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ತುಮ್ಕೋಸ್ ಅಧ್ಯಕ್ಷರಾದ ಆರ್. ಎಮ್. ರವಿ, ಕ್ಯಾಂಪ್ಕೋ ನಿರ್ದೇಶಕರು ಮತ್ತು ರಾಜ್ಯ ಸಹಕಾರ ಭಾರತಿಯ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಮಡ್ತಿಲ , ಟಿಎಸ್ಎಸ್ ನಿರ್ದೇಶಕರಾದ ಶಶಾಂಕ್ಎ ಸ್. ಹೆಗಡೆ ಹಾಗೂ ಮಹಾಮಂಡಳದ ನಿರ್ದೇಶಕ ಶಿವಕುಮಾರ್ ಅವರು ನಿಯೋಗದಲ್ಲಿ ಭಾಗವಹಿಸಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…