ಅಡಿಕೆ ಮಾರುಕಟ್ಟೆ ಚೇತರಿಕೆ ಕಾಣುತ್ತಿಲ್ಲ. ಕಾರಣಗಳು ಹಲವು. ಈ ನಡುವೆಯೇ ಬರ್ಮಾ ಅಡಿಕೆಯು ನಿರಂತರವಾಗಿ ಕಳ್ಳ ಸಾಗಾಣಿಕೆ ಮೂಲಕ ಆಗಮನವಾಗುತ್ತಿದೆ. ಕಳೆದ ಒಂದು ವಾರದಲ್ಲಿ ಎರಡು ಬಾರಿ ಅಡಿಕೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಳೆದ ವಾರ 100 ಕ್ಕೂ ಹೆಚ್ಚು ಅಡಿಕೆ ಚೀಲ ವಶಕ್ಕೆ ತೆಗೆದುಕೊಂಡರೆ , ಅದಾದ ಬಳಿಕ ಮತ್ತೆ 22 ಲಕ್ಷ ರೂಪಾಯಿ ಮೌಲ್ಯದ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ.
ಅಕ್ರಮವಾಗಿ ಅಡಿಕೆ ಕಳ್ಳಸಾಗಣೆಯು ಮಿಜೋರಾಂ ರಾಜ್ಯದ ಕಳವಳಕ್ಕೆ ಕಾರಣವಾಗಿದೆ. ‘ಈಶಾನ್ಯದ ಸೆಂಟಿನೆಲ್ಸ್’ ಎಂದು ಸರಿಯಾಗಿ ನಾಮಕರಣಗೊಂಡಿರುವ ಅಸ್ಸಾಂ ರೈಫಲ್ಸ್ ಮಿಜೋರಾಂನಲ್ಲಿ ಕಳ್ಳಸಾಗಣೆ ವಿರುದ್ಧ ಕಾರ್ಯಾಚರಣೆಗಳನ್ನು ಪ್ರಾರಂಭಿಸುವಲ್ಲಿ ಯಶಸ್ವಿಯಾಗಿದೆ.ಈಚೆಗೆ ಸುಮಾರು 22.4 ಲಕ್ಷ ರೂಪಾಯಿ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿದೆ.
ಅದಕ್ಕೂ ಮೊದಲು ಅಸ್ಸಾಂನ ಗೌರಿಪುರದಲ್ಲಿ 101 ಗೋಣಿ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಗೌರಿಪುರ ಪ್ರದೇಶದ ಕಾಲಿಬರಿ ಎಂಬಲ್ಲಿ ಪೊಲೀಸರು ಅಪಾರ ಪ್ರಮಾಣದ ಅಡಿಕೆಯೊಂದಿಗೆ ಮೂವರನ್ನು ಬಂಧಿಸಿದ್ದಾರೆ. ಬರ್ಪೇಟಾದಿಂದ ಪಶ್ಚಿಮ ಬಂಗಾಳಕ್ಕೆ ಬರ್ಮಾದ ಅಡಿಕೆ ಸಾಗಣೆ ಮಾಡಲಾಗುತ್ತಿದೆ ಎಂದು ವಿಚಾರಣೆ ವೇಳೆ ತಿಳಿದುಬಂದಿತ್ತು.
ಇದಕ್ಕೂ ಮೊದಲು ಫೆಬ್ರವರಿ 25 ರಂದು ಅಸ್ಸಾಂ ಪೊಲೀಸರು ಅಸ್ಸಾಂನ ಹೈಲ್ಕಂಡಿ ಜಿಲ್ಲೆಯ ಬಿಲೈಪುರ್ ಗ್ರಾಮದಲ್ಲಿ 104 ಚೀಲ ಬರ್ಮಾ ಅಡಿಕೆಯನ್ನು ವಶಪಡಿಸಿಕೊಂಡಿದ್ದರು.
ಕಳೆದ ಕೆಲವು ಸಮಯಗಳಿಂದ ಬರ್ಮಾ ಅಡಿಕೆ ಅಕ್ರಮವಾಗಿ ಭಾರತದೊಳಕ್ಕೆ ಆಗಮನವಾಗುತ್ತಿದೆ. ಇದರಿಂದ ಭಾರತದ ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ.
ಅಡಿಕೆ ನಿಷೇಧಕ್ಕಿಂತ ಬಳಕೆಯ ನಿಯಂತ್ರಣವೇ ಪರಿಣಾಮಕಾರಿ ಎಂದು WHO ಅಭಿಪ್ರಾಯಪಟ್ಟಿದೆ. ಆಗ್ನೇಯ ಏಷ್ಯಾದ…
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…
ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…