Advertisement
ಸುದ್ದಿಗಳು

ಅಡಿಕೆ ಆಮದು ಪ್ರಮಾಣ ಏರಿಕೆ | ಕಳೆದ ವರ್ಷ 42236 ಮೆಟ್ರಿಕ್‌ ಟನ್‌ ಅಡಿಕೆ ಆಮದು

Share

ಭಾರತಕ್ಕೆ 2024-25 ನೇ ಸಾಲಿನಲ್ಲಿ 1208 ಕೋಟಿ ರೂಪಾಯಿ ಮೌಲ್ಯದ 42236 ಮೆಟ್ರಿಕ್‌ ಟನ್‌ ಅಡಿಕೆ ವಿವಿಧ ದೇಶಗಳಿಂದ ಆಮದಾಗಿದೆ. ಇದೇ ವೇಳೆ 105 ಕೋಟಿ ರೂಪಾಯಿ ಮೌಲ್ಯದ 2396 ಮೆಟ್ರಿಕ್‌ ಟನ್‌ ಅಡಿಕೆ ಭಾರತದಿಂದ ರಪ್ತು ಆಗಿದೆ.

ಲೋಕಸಭೆಯಲ್ಲಿ  ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ಸಂಸದ ಬಿ ವೈ ರಾಘವೇಂದ್ರ ಅವರು ಕೇಳಿದ ಪ್ರಶ್ನೆಗೆ ಸಚಿವಾಲಯವು ಈ ಉತ್ತರ ನೀಡಿದೆ. ಸಂಸದ ರಾಘವೇಂದ್ರ ಅವರು, ಕಳೆದ ಹತ್ತು ವರ್ಷಗಳಲ್ಲಿ ದೇಶದಿಂದ ಅಡಿಕೆ ರಫ್ತಿನ ವಿವರ,  ಭಾರತದಿಂದ ಅಡಿಕೆ ರಫ್ತು ಮಾಡುದ ದೇಶಗಳು, ಕಳೆದ ಹತ್ತು ವರ್ಷಗಳಲ್ಲಿ ಭಾರತಕ್ಕೆ ಅಡಿಕೆ ಆಮದಿನ ವಿವರ ಹಾಗೂ  ಅಡಿಕೆ ರಫ್ತನ್ನು ಉತ್ತೇಜಿಸಲು  ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಶ್ನೆ ಕೇಳಿದ್ದರು.

ಪ್ರಶ್ನೆಗೆ ಸಚಿವಾಲಯವು ನೀಡಿದ ಉತ್ತರದಂತೆ, 2015-16 ರಿಂದ 2024-25 ರ ನಡುವಿನ ಹತ್ತು ವರ್ಷಗಳ ಅವಧಿಯಲ್ಲಿ, ಅಡಿಕೆಯ ರಫ್ತು ಮೌಲ್ಯದ ಆಧಾರದಲ್ಲಿ ಹೆಚ್ಚಳವಾಗಿದೆ.  ರೂಪಾಯಿಗಳಲ್ಲಿ 35.69%  ಮತ್ತು  ಡಾಲರ್‌ಗಳಲ್ಲಿ 6.2% ರಷ್ಟು ಹೆಚ್ಚಾಗಿದೆ.

2024-25 ರಲ್ಲಿ ಭಾರತದಿಂದ 2396 ಮೆಟ್ರಿಕ್‌ ಟನ್‌ ಅಡಿಕೆ ರಫ್ತು ಮಾಡಲಾಗಿದ್ದು, 2023-24 ರಲ್ಲಿ 400 ಕೋಟಿ ರೂಪಾಯಿ ಮೌಲ್ಯದ  10636 ಮೆಟ್ರಿಕ್‌ ಟನ್‌ ಅಡಿಕೆ ರಫ್ತು ಮಾಡಲಾಗಿತ್ತು. 2022-23 ರಲ್ಲಿ 13765 ಮೆಟ್ರಿಕ್‌ ಟನ್‌, 2021-22 ರಲ್ಲಿ 6663 ಮೆಟ್ರಿಕ್‌ ಟನ್‌, 2020-21 ರಲ್ಲಿ 3195 ಮೆಟ್ರಿಕ್‌ ಟನ್‌ ಅಡಿಕೆ ರಪ್ತು ಮಾಡಲಾಗಿತ್ತು.  ಮಲೇಶ್ಯಾಕ್ಕೆ  ಅತೀ ಹೆಚ್ಚು ಅಡಿಕೆ ರಫ್ತಾಗಿದೆ. ಕಳೆದ ಸಾಲಿನಲ್ಲಿ 224 ಮೆಟ್ರಿಕ್‌ ಟನ್‌ ಅಡಿಕೆ ರಫ್ತು ಮಾಡಲಾಗಿತ್ತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಇದೇ ವೇಳೆ ಅಡಿಕೆ ಆಮದು ಕೂಡಾ ಏರಿಕೆಯಾಗಿದೆ.  2024-25 ರ ಅವಧಿಯಲ್ಲಿ 1208 ಕೋಟಿ ರೂಪಾಯಿ ಮೌಲ್ಯದ 42236 ಮೆಟ್ರಿಕ್‌ ಟನ್‌ ಅಡಿಕೆ ಆಮದಾಗಿದೆ.  2023-24 ರಲ್ಲಿ 40386 ಮೆಟ್ರಿಕ್‌ ಟನ್‌, 2022-23 ರಲ್ಲಿ 78233 ಮೆಟ್ರಿಕ್‌ ಟನ್‌, 2021-22 ರಲ್ಲಿ 30049 ಮೆಟ್ರಿಕ್‌ ಟನ್‌, 2020-21 ರಲ್ಲಿ 23988 ಮೆಟ್ರಿಕ್‌ ಟನ್‌ ಅಡಿಕೆ ಆಮದು ಆಗಿದೆ. …… ಮುಂದೆ ಓದಿ……

Advertisement

2024-25 ನೇ ಸಾಲಿನಲ್ಲಿ ಬಾಂಗ್ಲಾದೇಶದಿಂದ ಅತೀ ಹೆಚ್ಚು ಅಡಿಕೆ ಆಮದಾಗಿದ್ದು, 12155 ಮೆಟ್ರಿಕ್‌ ಟನ್‌ ಅಡಿಕೆ ಬಂದಿದೆ. ಉಳಿದಂತೆ ಶ್ರೀಲಂಕಾ, ಮ್ಯಾನ್ಮಾರ್‌, ಇಂಡೋನೇಶ್ಯಾ, ಯುಎಇ, ಮಲೇಶ್ಯಾ, ಒಮನ್‌, ಸಿಂಗಾಪುರ, ಭೂತಾನ್‌, ಥೈಲ್ಯಾಂಡ್‌ ಹಾಗೂ ಇತರ ದೇಶಗಳಿಂದ ಅಡಿಕೆ ಆಮದು ಆಗಿದೆ.  ಅಚ್ಚರಿ ಎಂದರೆ ಯುಎಇಯಿಂದಲೂ ಅಡಿಕೆ ಆಮದು ಆಗಿದೆ..! ಯುಎಇಯಿಂದ 390 ಮೆಟ್ರಿಕ್‌ ಟನ್‌ ಅಡಿಕೆ ಬಂದಿದೆ, ಒಮನ್‌ನಿಂದ 144 ಮೆಟ್ರಿಕ್‌ ಟನ್‌ ಅಡಿಕೆ ಬಂದಿರುವುದಾಗಿ ವರದಿ ನೀಡಲಾಗಿದೆ.

ಭಾರತದಿಂದ ಅಡಿಕೆ ರಫ್ತು ಮಾಡುವ ಉದ್ದೇಶದಿಂದಲೂ ಪ್ರಯತ್ನ ಮಾಡಿದೆ. ಅಡಿಕೆ ರಫ್ತು ಪ್ರಚಾರಕ್ಕಾಗಿ, ಸೆಪ್ಟೆಂಬರ್ 2025 ರಲ್ಲಿ ಕಾರ್ಯಕ್ರಮ ಮಾಡಿತ್ತು. ಈಗಲೂ ಪ್ರಯತ್ನ ಮಾಡುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ

ಉತ್ತರ ಪ್ರದೇಶ ಸರ್ಕಾರವು ಕಿಸಾನ್ ಪಾಠಶಾಲೆ ಕಾರ್ಯಕ್ರಮದ ಮೂಲಕ 2025–26 ಹಂಗಾಮಿನಲ್ಲಿ 20.15…

9 hours ago

ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ

ಕರಡು ಪೆಸ್ಟಿಸೈಡ್ಸ್ ಮ್ಯಾನೇಜ್ಮೆಂಟ್ ಬಿಲ್–2025 ಕುರಿತು ಸಾರ್ವಜನಿಕ ಅಭಿಪ್ರಾಯಕ್ಕೆ ಕೇಂದ್ರ ಆಹ್ವಾನ ಮಾಡಿದೆ.…

9 hours ago

ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ

ಕುರಿಸಾಕಾಣಿಕೆ ಅದೇಷ್ಟೋ ಯುವಕರು ತಮ್ಮ ಸ್ವಂತ ಉದ್ಯಮವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಹೆಚ್ಚು…

10 hours ago

ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್- ಕೃಷಿಕನಾಗಿಯೂ ಯಶಸ್ಸು…!

ಯಾವುದೇ ವೃತ್ತಿಯಲ್ಲಿದ್ದರೂ ಕೃಷಿಯನ್ನು ಬಿಡಬಾರದು ಎಂಬ ಹಠದಿಂದ ಜೀವನದಲ್ಲಿ ಯಶಸ್ಸು ಕಂಡವರಲ್ಲಿ ಅಮರಾವತಿ…

10 hours ago

ಯಶಸ್ವಿನಿ ಕಾರ್ಡ್ ಅರ್ಜಿ ಪ್ರಾರಂಭ

ಆರ್ಥಿಕವಾಗಿ ದುರ್ಬಲ ಹೊಂದಿರುವ ಕುಟುಂಬದ ಸದಸ್ಯರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾದದ ದೊಡ್ಡ ಮಟ್ಟದ…

10 hours ago

ಹೊಟ್ಟೆಯ ಕೊಬ್ಬು ಕರಗಿಸಲು ಸೋರೆಕಾಯಿ ಜ್ಯೂಸ್

ಅಧಿಕ ಎಣ್ಣೆ ಅಂಶವುಳ್ಳ ತಿಂಡಿಗಳು, ಶೇಖರಿಸಿಕೊಂಡಿರುವ ಆಹಾರಗಳ ಸೇವನೆಯು ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ.…

10 hours ago