Advertisement
MIRROR FOCUS

ಅಡಿಕೆ ಕೊಳೆರೋಗ ಸಮೀಕ್ಷೆ | ಕೊಳೆರೋಗಕ್ಕೆ ಔಷಧಿ ಸಿಂಪಡಣೆ ಸಾಧ್ಯವಾಗಿದೆಯೇ…?

Share

ಈ ಬಾರಿಯ ಭಾರೀ ಮಳೆಗೆ ಅಡಿಕೆ ಕೊಳೆರೋಗ ವ್ಯಾಪಕವಾಗಿ ಹರಡಿತ್ತು. ಜೂನ್‌ ಅಂತ್ಯದವರೆಗೂ ಕೊಳೆರೋಗದ ಬಗ್ಗೆ ಸದ್ದು ಇರಲಿಲ್ಲ. ಜುಲೈ ತಿಂಗಳಲ್ಲಿ ಒಮ್ಮೆಲೇ ವ್ಯಾಪಕವಾಗಿ ಕೊಳೆರೋಗ ಕಂಡುಬಂದಿತ್ತು. ಮೇ. 17 ಸುಮಾರಿಗೆ ಆರಂಭವಾದ ಮಳೆಯು ನಿರಂತರವಾಗಿ ಜುಲೈ ಅಂತ್ಯದವರೆಗೆ ಸುರಿದಿದೆ. ಪರಿಣಾಮವಾಗಿ ಅಡಿಕೆ ಕೊಳೆರೋಗವೈ ವ್ಯಾಪಕವಾಯಿತು. ಈ ಸಂದರ್ಭ ಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಹಯೋಗದಲ್ಲಿ ದ ರೂರಲ್‌ ಮಿರರ್.ಕಾಂ ಸಮೀಕ್ಷೆ ನಡೆಸಿತ್ತು.  ಒಟ್ಟು 15 ಪ್ರಶ್ನೆಗಳನ್ನು ಅಡಿಕೆ ಬೆಳೆಗಾರರಿಗೆ ಕೇಳಲಾಯಿತು. ಇಂದು ಬಹುತೇಕ ಮಂದಿ ಸೋಶಿಯಲ್‌ ಮೀಡಿಯಾದಲ್ಲಿ ಇರುವುದರಿಂದ ಅಡಿಕೆ ಬೆಳೆಗಾರರ ವಿವಿಧ ಗುಂಪುಗಳಲ್ಲಿ ಹಾಗೂ ಪೇಸ್‌ಬುಕ್‌ ಮೂಲಕ ಈ ಪ್ರಶ್ನೆಗಳನ್ನು ನೀಡಲಾಯಿತು. ಸಮೀಕ್ಷೆ ಎಂದಾಕ್ಷಣ ಮನೆ ಮನೆಗೆ ತೆರಳಿ ನಡೆಸಿದ ಸಮೀಕ್ಷೆ ಇದಲ್ಲ. ಕೊಳೆರೋಗದ ಗಂಭೀರತೆ ಅರಿಯುವುದ ಉದೇಶದಿಂದ ಹಮ್ಮಿಕೊಂಡ ಸಮೀಕ್ಷೆ ಇದಾಗಿತ್ತು. ಇದಕ್ಕಾಗಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ನೆರವನ್ನೂ ಪಡೆಯಲಾಗಿದೆ.

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು 1960 ರ ಆಸುಪಾಸಿನಲ್ಲಿ ಹುಟ್ಟಿಕೊಂಡ ಸಂಸ್ಥೆ. ಅಡಿಕೆ ಬೆಳೆಗಾರರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ ಸಂಸ್ಥೆಯೂ ಆಗಿದೆ. ಅಡಿಕೆ ಧಾರಣೆ ಕುಸಿದಾಗ ವಾರಣಾಸಿ ಸುಬ್ರಾಯ ಭಟ್‌ ಅವರ ಸಾರಥ್ಯದಲ್ಲಿ ಮುನ್ನಡೆಯುತ್ತಿದ್ದ ಈ ಸಂಘದ ಸದಸ್ಯರ ನೆರವಿನೊಂದಿಗೆ ಕ್ಯಾಂಪ್ಕೊ ಸ್ಥಾಪನೆ ಕಾರಣವಾಯಿತ್ತು. ಆ ಬಳಿಕ ವಾರಣಾಸಿ ಸುಬ್ರಾಯ ಭಟ್ಟರು ಕ್ಯಾಂಪ್ಕೊ ಸಾರಥ್ಯ ವಹಿಸಿಕೊಂಡು ಇತರ ಸದಸ್ಯರು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವನ್ನು ಮುನ್ನಡೆಸಿದರು. ಅಡಿಕೆ ಬೆಳೆಗಾರರ ಸಂಘಟನೆ ಮಾಡುತ್ತಿದ್ದ ಬಹುತೇಕ ಕೆಲಸ ಕಾರ್ಯಗಳನ್ನು ಕ್ಯಾಂಪ್ಕೊ ಮಾಡುತ್ತಿತ್ತು. ಅಡಿಕೆ ಬೆಳೆಗಾರರ ಸಂಘ ಸಹಯೋಗ ಇತ್ತು. ಈಚೆಗೆ ಅಡಿಕೆ ಕೊಳೆರೋಗದ ಸುದ್ದಿ ಹರಡಿದಾಗ ಸಂಘದ ಸದಸ್ಯರು ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿದ್ದರು.

“ದ ರೂರಲ್‌ ಮಿರರ್.ಕಾಂ” ಕೃಷಿ, ಗ್ರಾಮೀಣ ಹಾಗೂ ಪರಿಸರ ಸುದ್ದಿಗಳಿಗೆ ಆದ್ಯತೆ ನೀಡುತ್ತಿದೆ. ಕೃಷಿ ಸಮಸ್ಯೆ, ಬೆಳವಣಿಗೆಯನ್ನು ಗಮನಿಸಿ ಸಾಧ್ಯವಾದಷ್ಟು ಬೆಳಕು ಚೆಲ್ಲುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

ಅಡಿಕೆ ಬೆಳೆಗಾರರು ಕೊಳೆರೋಗದ ಬಗ್ಗೆ ಮಾತನಾಡುತ್ತಿದ್ದಾಗ ಅದರ ಗಂಭೀರತೆಯ ಬಗ್ಗೆ ಅರಿಯಲು ಸಮೀಕ್ಷಾ ಕಾರ್ಯದ ಬಗ್ಗೆ ಅಡಿಕೆ ಬೆಳೆಗಾರರ ಸಂಘದ ಸದಸ್ಯರ ಸಲಹೆ ಹಾಗೂ  ಸಸ್ಯಶಾಸ್ತ್ರ ವಿಭಾಗದಲ್ಲಿ ಎಂಎಸ್ಸಿ ಮಾಡಿರುವ, ಸದ್ಯ ಕೃಷಿಯಲ್ಲಿ  ತೊಡಗಿರುವ ಅರುಣ ಕಾಂಚೋಡು ಹಾಗೂ ಕೃಷಿಕ ರಮೇಶ ದೇಲಂಪಾಡಿ ಅವರ ಸಲಹೆ ಪಡೆಯಲಾಯಿತು.  ಬಳಿಕ ಅರುಣ್ ಕಾಂಚೋಡು ಅವರು ಕೊಳೆರೋಗಕ್ಕೆ ಸಂಬಂಧಿಸಿ ತಿಳಿಯಬೇಕಾದ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ಈ ಪ್ರಕಾರ 15 ಪ್ರಶ್ನೆಗಳನ್ನು ಕೃಷಿಕರಿಗೆ ಕೇಳಲಾಗಿತ್ತು. ಕೆಲವು ಸರಳ ಪ್ರಶ್ನೆಗಳನ್ನು ಕೂಡಾ ಕೇಳಲಾಗಿತ್ತು. ಸುಳ್ಳು ಮಾಹಿತಿಗಳನ್ನು ಪತ್ತೆ ಮಾಡಲು ಕೆಲವು ತಂತ್ರಗಳ ಬಗ್ಗೆ ಅರುಣ್‌ ಕಾಂಚೋಡು ಅವರ ಪ್ರಶ್ನೆಗಳ ಸಹಕಾರಿ ಆಗಿವೆ. ಪ್ರಶ್ನೆಗಳಿಗೆ ಉತ್ತರ ನೀಡಿರುವ ಎಲ್ಲರ ಇ ಮೈಲ್‌, ಬಹುತೇಕ ಕೃಷಿಕರ ಮೊಬೈಲ್‌ ಸಂಖ್ಯೆಕೂಡಾ ದಾಖಲಿಸಿಕೊಳ್ಳಲಾಗಿದೆ.

ಒಟ್ಟು 503 ಪ್ರತಿಕ್ರಿಯೆ ಬಂದಿತ್ತು.ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರಕನ್ನಡ, ಶಿವಮೊಗ್ಗ , ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಕೊಡಗು, ತುಮಕೂರು ಜಿಲ್ಲೆಗಳ ಅಡಿಕೆ ಬೆಳೆಗಾರರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಕೃಷಿಕರು ನೀಡಿರುವ ಮಾಹಿತಿ ಪ್ರಕಾರ ಶೇ.95 ರಷ್ಟು ಅಡಿಕೆ ಬೆಳೆಗಾರರು ಕೊಳೆರೋಗ ಬಾಧಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಸಮೀಕ್ಷೆಯ ಆರಂಭದಲ್ಲಿ 30-40 ಶೇಕಡಾ ಅಡಿಕೆ ನಷ್ಟವಾಗಬಹುದು ಎಂದವರು ಆಗಸ್ಟ್ ಅಂತ್ಯದ ವೇಳೆ ಶೇ.50 ಕ್ಕಿಂತ ಅಧಿಕ ಅಡಿಕೆ ಕೊಳೆರೋಗಕ್ಕೆ ಹಾನಿಯಾಗಿರುವ ಬಗ್ಗೆ ಹೇಳಿದ್ದಾರೆ.‌ ಅಂದರೆ ಈ ಬಾರಿಯ ಅಡಿಕೆ ಕೊಳೆರೋಗದ ಭೀಕರತೆ ಅಂತಹ ಸ್ಥಿತಿಯಲ್ಲಿತ್ತು. …… ಮುಂದೆ ಓದಿ……

Advertisement

ಮುಂದಿನ 15 ದಿನ , ಸಮೀಕ್ಷೆಯಲ್ಲಿ ಅಡಿಕೆ ಬೆಳೆಗಾರರಿಗೆ ಕೇಳಿರುವ ಪ್ರಶ್ನೆಗಳ ವಿಶ್ಲೇಷಣೆ ಹಾಗೂ ಸಮೀಕ್ಷೆಯ ವಿವರವನ್ನು ಸರಣಿ ಬರಹದ ಮೂಲಕ ನೀಡಲಾಗುತ್ತದೆ. ಈಗಾಗಲೇ  ತಕ್ಷಣದ ಪರಿಹಾರವಾಗಿ ಬೆಳೆ ವಿಮೆಯನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಕ್ರಮ ಕೈಗೊಳ್ಳಲು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ, ದ ರೂರಲ್‌ ಮಿರರ್.ಕಾಂ ಹಾಗೂ ವಿವಿಧ ಸಹಕಾರಿ ಸಂಸ್ಥೆಗಳು ಒತ್ತಾಯ ಮಾಡಿದ್ದಾರೆ. ಸರ್ಕಾರದಿಂದ ಸೂಕ್ತ ರೀತಿಯ ಪರಿಹಾರದ ಬಗ್ಗೆಯೂ ಮನವಿ ಮಾಡಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

“ಅಡಿಕೆ ಕೊಳೆರೋಗಕ್ಕೆ ಮುಂಜಾಗ್ರತಾ ಕ್ರಮವಾಗಿ ಔಷಧಿ ಸಿಂಪಡಣೆ ಆಗಿದೆಯೇ” ಎಂದು ಪ್ರಶ್ನೆ ಕೇಳಲಾಗಿತ್ತು. ಜುಲೈ ಅಂತ್ಯದವರೆಗೆ ಹಾಗೂ ಸಮೀಕ್ಷೆ ಅಂತ್ಯವಾಗುವವರೆಗೆ ಶೇ 44.7 ಕೃಷಿಕರಿಗೆ ಒಂದು ಬಾರಿ ಸಿಂಪಡಣೆ ಆಗಿತ್ತು. ಶೇ.40.6 ಕೃಷಿಕರಿಗೆ ಎರಡು ಬಾರಿಯ ಸಿಂಪಡಣೆ ಆಗಿತ್ತು, ಶೇ.9.3 ಕೃಷಿಕರಿಗೆ ಮೂರು ಬಾರಿ ಸಿಂಪಡಣೆ ಆಗಿತ್ತು. ಶೇ.7.2 ಕೃಷಿಕರಿಗೆ ಒಂದು ಬಾರಿಯೂ ಔಷಧಿ ಸಿಂಪಡಣೆಗೆ ಸಾಧ್ಯವಾಗಿರಲಿಲ್ಲ.

“ಔಷಧಿಯ ಸಿಂಪಡಣೆಯ ಸಮಯ”ದ ಬಗ್ಗೆಯೂ ಕೇಳಲಾಗಿತ್ತು. ಅದರಲ್ಲಿ ಮೇ ತಿಂಗಳಲ್ಲಿ ಶೇ.22.1 ಕೃಷಿಕರಿಗೆ ಸಿಂಪಡಣೆ ಆಗಿದ್ದರೆ, ಶೇ. 75.1ಕೃಷಿಕರಿಗೆ ಜೂನ್‌ ತಿಂಗಳಲ್ಲಿ ಹಾಗೂ ಶೇ 53.1 ಕೃಷಿಕರಿಗೆ ಜುಲೈ ತಿಂಗಳಲ್ಲಿ ಔಷಧಿ ಸಿಂಪಡಣೆ ಆಗಿತ್ತು. …… ಮುಂದೆ ಓದಿ……

Advertisement

ಅಂದರೆ ಇಲ್ಲಿ, ಬಹುತೇಕ ಮಂದಿಗೆ ಒಂದನೇ ಬಾರಿಯ ಸಿಂಪಡಣೆಗೆ ಸರಿಯಾದ ಅವಕಾಶ ಸಿಕ್ಕಿತ್ತು. ಕೆಲವು ಕಡೆ ಎರಡನೇ ಬಾರಿ ಸಿಂಪಡಣೆಗೆ ಅವಕಾಶ ಸಿಕ್ಕಿದೆ. ಕೆಲವೇ ಕೆಲವು ಮಂದಿಗೆ ಮೂರು ಬಾರಿ ಸಿಂಪಡಣೆ ಸಾಧ್ಯವಾಗಿದೆ. ಉಳಿದ ಕೆಲವು ಕೃಷಿಕರಿಗೆ ಕಾರ್ಮಿಕರು ಲಭ್ಯವಾಗದೆ, ಮಳೆಯೂ ಬಿಡದ ಕಾರಣ ಸಿಂಪಡಣೆ ಸಾಧ್ಯವಾಗಲಿಲ್ಲ.  ಮೇ ತಿಂಗಳಲ್ಲೇ ಸಿಂಪಡಣೆ ಮಾಡಿದ ಬಹುತೇಕ ಮಂದಿಗೆ ಮೂರು ಬಾರಿ ಹಾಗೂ ಕೆಲವರಿಗೆ ಎರಡು ಬಾರಿಯ ಸಿಂಪಡಣೆ ಸಾಧ್ಯವಾಗಿರುವುದು ಮೇಲಿನ ಎರಡು ಮಾಹಿತಿಯಲ್ಲಿ ತಿಳಿದಿದೆ. ಅಂದರೆ , ಕೊಳೆರೋಗಕ್ಕೆ ಔಷಧಿ ಸಿಂಪಡಣೆ ಮೇ ತಿಂಗಳ ಅಂತ್ಯದಲ್ಲಿಯೇ ಮುಂಜಾಗ್ರತಾ ಕ್ರಮವಾಗಿ ಸಿಂಪಡಣೆ ಅಗತ್ಯ ಇದೆ ಎನ್ನುವುದು ಇಲ್ಲಿ ಕಂಡುಬರುವ ಅಂಶ. ( ಉಳಿದ ಮಾಹಿತಿಗೆ .. ನಾಳೆ ನಿರೀಕ್ಷಿಸಿ….. ) ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…

11 hours ago

ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..

ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…

11 hours ago

ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ

ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…

12 hours ago

2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು

ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…

12 hours ago

ಕುಕ್ಕುಟ ಸಂಜೀವಿನಿ ಯೋಜನೆ : ಉಚಿತ ಕೋಳಿ ಮರಿ ಶೇಡ್ ನಿರ್ಮಾಣಕ್ಕೆ ಆರ್ಥಿಕ ನೆರವು

ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…

12 hours ago

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

1 day ago