ಇವತ್ತು ತೀರ್ಥಹಳ್ಳಿ ತಾಲ್ಲೂಕಿನ ರಂಜದ ಕಟ್ಟೆ ಬಾಗದ ಅಡಿಕೆ ಬೆಳೆಗಾರರೊಬ್ಬರು ನನಗೆ ಕರೆ ಮಾಡಿ ತಮ್ಮ ತೋಟಕ್ಕೆ ವ್ಯಾಪಕವಾಗಿ ವೇಗವಾಗಿ ಹರಡುತ್ತಿರುವ ಎಲೆಚುಕ್ಕಿ ರೋಗದ ಬಗ್ಗೆ ದುಃಖ ಆತಂಕ ವ್ಯಕ್ತಪಡಿಸಿದರು.
ಅಲ್ಲಿನ ಬಹುತೇಕ ರೈತರು ತಜ್ಞರ ಸಲಹೆಯ ಎಲ್ಲಾ ಬಗೆಯ ಶಿಲೀಂಧ್ರ ನಾಶಕ ಔಷಧವನ್ನೂ ಅಡಿಕೆ ಮರಕ್ಕೆ ಸಿಂಪಡಣೆ ಮಾಡಿ ತಮ್ಮ ತೋಟಕ್ಕೆ ಆದ ಶಿಲೀಂದ್ರ ರೋಗ ನಿವಾರಣೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅವರು ” ವಾರದ ಹಿಂದೆ ಹತ್ತು ಅಡಿಕೆ ಮರದಲ್ಲಿ ಕಾಣಿಸಿಕೊಂಡ ಈ ರೋಗ ವಾರದ ಕೊನೆಯಲ್ಲಿ ಬಹುಪಾಲು ಅಡಿಕೆ ಮರಕ್ಕೆ ಹಬ್ಬಿದೆ…. ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ … ” ಎಂದರು. ಈ ವರ್ಷದ ಫಸಲು ಕೊಯ್ಲು ಮಾಡಬಹುದು ಆದರೆ ಪೂರ್ಣ ಶಿಲೀಂಧ್ರ ಪೀಡಿತವಾಗಿ ಹಣ್ಣಾದ ಅಡಿಕೆ ಮರದಲ್ಲಿ ಮುಂದಿನ ವರ್ಷ ಫಸಲು ಬರುತ್ತದಾ..?.
ಬಹುತೇಕ ರೋಗಪೀಡಿತ ಅಡಿಕೆ ಮರದಲ್ಲಿ ಮರದ ಸೋಗೆ ಮತ್ತೆ ಆರೋಗ್ಯ ಪೂರ್ಣ ವಾಗುವ ವರೆಗೂ ಅಡಿಕೆ ಮರದಲ್ಲಿ ಮತ್ತೆ ಸಿಂಗಾರ ಬರೋಲ್ಲ…!! ಕೊನೆಯಾಗೋಲ್ಲ….!!! ಒಂದು ಅಡಿಕೆ ಮರದಲ್ಲಿ ಕನಿಷ್ಠ ಹದಿನಾರು ಸೋಗೆ ಇರುತ್ತದೆ. ಸುಳಿ ಸೋಗೆಯಾಗಿ ಆ ಸೋಗೆಯ ಹಾಳೆಯೊಳಗೆ ಅಡಿಕೆ ಸಿಂಗಾರ ಮೂಡಬೇಕು.ಇದಕ್ಕೆ ಪತ್ರಹರಿತ್ತು ಅತಿ ಮುಖ್ಯ. ಸೋಗೆ ಆರೋಗ್ಯ ವಾಗಿಲ್ಲದೇ ಪತ್ರ ಹರಿತ್ತು ಎಲ್ಲಿಂದ ಬರುತ್ತದೆ..? ಅಡಿಕೆಯ ಸೃಷ್ಟಿ ಪ್ರಕೃಯಿಯೇ ಬಹುತೇಕ ಸ್ತಬ್ಧ ವಾಗುತ್ತದೆ. ಸಂಪೂರ್ಣ ಶಿಲೀಂಧ್ರ ಪೀಡಿತ ವಾದರೆ ಅಲ್ಲಿ ಮತ್ತೊಮ್ಮೆ ಹೊಸದಾಗಿ ಅಡಿಕೆ ಸಸಿ ನೆಟ್ಟು ಮರವಾಗಿ ಮತ್ತೆ ಫಸಲು ಪಡೆಯುವ ಪ್ರಕ್ರಿಯೆ ನೆಡಯಬೇಕಷ್ಟೇ…ಎಷ್ಟು ಜನ ರೈತರಿಗೆ ಹೊಸದಾಗಿ ಮತ್ತೆ ತೋಟ ಮಾಡುವ ಚೈತನ್ಯ ಇರುತ್ತದೆ…? ಸಾದ್ಯವಾ…?
ಇನ್ನೂ ಹತ್ತು ವರ್ಷಗಳ ನಂತರ ಕ್ಷಣ ಕ್ಷಣಕ್ಕೂ ಬದಲಾಗುವ ಸಾಮಾಜಿಕ ಅರ್ಥಿಕ ವ್ಯವಸ್ಥೆ ಯಲ್ಲಿ ಅಷ್ಟು ದೀರ್ಘಕಾಲಕ್ಕೆ ಅಡಿಕೆ ಯಂತಹ ದೀರ್ಘಕಾಲಿಕ ಬೆಳೆಯ ಬಗ್ಗೆ ಯೋಜಿಸಿ ಬಂಡವಾಳ ಹೂಡುವುದು ಬಹುತೇಕರಿಗೆ ಅಸಾಧ್ಯ…
ಸದ್ಯ ಶಿಲೀಂಧ್ರ ನಾಶಕ್ಕೆ ಹೊಸ ಪರಿಣಾಮಕಾರಿ ಔಷಧವನ್ನು ಮಲೆನಾಡು ಕರಾವಳಿಯ ರೈತ ನಿರೀಕ್ಷೆ ಮಾಡುತ್ತಿದ್ದಾನೆ
ಈ ರೂಪಾಂತರ ಗೊಂಡ ಶಿಲೀಂಧ್ರ ಮದ್ದರೆಯಲೇ ಬೇಕಿದೆ. ಹೌದು ಫೈಟೋಫ್ಲೋರಾ ಶಿಲೀಂಧ್ರ ಇದೀಗ ಖಂಡಿತವಾಗಿಯೂ ರೂಪಾಂತರ ಗೊಂಡಿದೆ. ತಜ್ಞ ವಿಜ್ಞಾನಿಗಳು ಶಿಲೀಂದ್ರ ನಾಶಕ್ಕೆ ಸೂಚಿಸುವ ಬೋರ್ಡೊ , ಸಾಫ್ , ಹೆಕ್ಸೊಕೊನೋಜಲ್, ರೊಡೊಮಿಲ್ ಔಷಧಗಳು ಶಿಲೀಂಧ್ರ ವನ್ನು ಹಿಮ್ಮೆಟ್ಟಿಸುತ್ತಿಲ್ಲ. ನಮ್ಮ ವಿಜ್ಞಾನಿಗಳಿಗೆ ಇದೊಂದು ಸತ್ಯ ಇನ್ನಷ್ಟು ಅಡಿಕೆ ತೋಟಗಳು ನಾಶವಾಗಿ ಅರ್ಥ ವಾಗಬೇಕು…? ಸರ್ಕಾರಕ್ಕೆ ಇದೊಂದು ಸಾಂಕ್ರಾಮಿಕ ಶಿಲೀಂಧ್ರ ತುರ್ತುಸ್ಥಿತಿ ಎಂಬ seriousness ಯಾವಾಗ ಬರುತ್ತದೆ…?
ಸಂಪೂರ್ಣ ಶಿಲೀಂಧ್ರ ಬಾಧೆಗೊಳಗಾದ ಅಡಿಕೆ ತೋಟ ಖಂಡಿತವಾಗಿಯೂ ಮೊದಲಿನಂತಾಗೋಲ್ಲ…. ಜೊತೆಗೆ ಈ ಮಳೆಗಾಲದೊಳಗೆ ಈ ಶಿಲೀಂಧ್ರ ಸಂಪೂರ್ಣ ನಾಶ ವಾಗದಿದ್ದಲ್ಲಿ ಅಥವಾ ಈ ಶಿಲೀಂಧ್ರ ವನ್ನು ಹಿಮ್ಮೆಟ್ಟಿಸುವ ಔಷಧ ಕಂಡು ಹಿಡಿಯದಿದ್ದಲ್ಲಿ ಮಲೆನಾಡು ಪ್ರದೇಶದಲ್ಲಿ ಒಂದೇ ಒಂದು ಅಡಿಕೆ ಮರವೂ ಉಳಿಯಲಾರದು…. ಸರ್ಕಾರ ಜಾಡ್ಯ ಬಿಟ್ಟು ಚುರುಕಾಗಬೇಕು….
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…