ಅಡಿಕೆ ಎಲೆಚುಕ್ಕಿ ರೋಗ(Arecanut Leaf Spot) ಹಾಗೂ ರೋಗ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಕ್ರಮವು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಗುತ್ತಿಗಾರು ಸಹಕಾರಿ ಸಂಘದ ದೀನ್ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು. ನೂರಾರು ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಿಪಿಸಿಐಆರ್ ವಿಜ್ಞಾನಿ ಡಾ.ಭವಿಷ್ಯ ಅವರು ಸಮಗ್ರ ಮಾಹಿತಿ ನೀಡಿದರು. ಅವರು ಮಾತನಾಡಿರುವ ಸಂಪೂರ್ಣ ಆಡಿಯೋ ಇಲ್ಲಿದೆ……
ಎಲೆ ಚುಕ್ಕಿ ರೋಗದಲ್ಲಿ ಚುಕ್ಕಿ ಮಾತ್ರಾ ಆದರೆ ಸಮಸ್ಯೆ ಇಲ್ಲ, ಆದರೆ ಚುಕ್ಕಿ ಬೆಸೆದುಕೊಂಡರೆ ಸಮಸ್ಯೆಯಾಗುತ್ತದೆ ಎಂದು ಮಾಹಿತಿ ವಿವರಿಸಿದ ಡಾ.ಭವಿಷ್ಯ ಅವರು ರಾಜ್ಯದ 5 ಜಿಲ್ಲೆಗಳಲ್ಲಿ ಸದ್ಯ ಎಲೆಚುಕ್ಕಿ ರೋಗ ಹರಡಿಕೊಂಡಿದೆ. ಅದರಲ್ಲಿ ದ ಕ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಸದ್ಯ ಇದೆ. ಶೃಂಗೇರಿ ಭಾಗದಲ್ಲಿ ಕಾಣಿಸಿಕೊಂಡ ಎಲೆಚುಕ್ಕಿ ರೋಗಕ್ಕೂ ಸುಳ್ಯದಲ್ಲಿ ಕಾಣಿಸಿಕೊಂಡ ಎಲೆಚುಕ್ಕಿ ರೋಗ ಒಂದೇ ಆದರೂ ಪ್ರಭಾವದಲ್ಲಿ ವ್ಯತ್ಯಾಸ ಇದೆ. ಎಲೆಚುಕ್ಕಿ ರೋಗಕ್ಕೆ ಕಾರಣವಾಗುವ ಶಿಲೀಂದ್ರಕ್ಕೆ ಪೂರಕ ವಾತಾವರಣ ಬಂದಾಗ ಹರಡಿಕೊಳ್ಳುತ್ತದೆ. ಹೀಗಾಗಿ ಹವಾಮಾನವೂ ಒಂದು ಪ್ರಮುಖ ಕಾರಣವಾಗುತ್ತದೆ ಎಂದರು.
ಸಾಮಾನ್ಯವಾಗಿ 18-24 ಡಿಗ್ರಿಯ ವಾತಾವರಣದ ಉಷ್ಣತೆಯಲ್ಲಿ ಹೆಚ್ಚು ವಿಸ್ತರಣೆಯಾಗುವ ಈ ಶಿಲೀಂದ್ರವು ಮಳೆಗಾಲದಲ್ಲಿ ಹೆಚ್ಚು ವಿಸ್ತರಣೆಯಾಗುತ್ತದೆ. ಮಳೆ ಹಾಗೂ ಬಿಸಿಲು ಈ ಶಿಲೀಂದ್ರ ಅಭಿವೃದ್ಧಿಗೆ ಪೂರಕವಾಗಿದೆ. ಎರಡು ವರ್ಷಗಳ ಹಿಂದೆಯೇ ಸುಳ್ಯದ ಕೆಲವು ಕಡೆ ಈ ರೋಗ ಕಂಡುಬಂದಿದ್ದರೂ ಈ ವರ್ಷ ವಿಪರೀತವಾಗಿದೆ. ಇದಕ್ಕೆ ಸಾಮೂಹಿಕ ಮಟ್ಟದಲ್ಲಿ ರೋಗ ನಿರ್ವಹಣೆಯ ಅಗತ್ಯವಿದೆ ಎಂದರು.
ಇದರ ಜೊತೆಗೆ ಅಡಿಕೆ ಮರಗಳಿಗೆ ನೀಡುವ ಪೋಷಕಾಂಶಗಳ ನಿರ್ವಹಣೆಯೂ ಅಗತ್ಯ ಇದ್ದು, ಅಸಮತೋಲನ ಗೊಬ್ಬರ ಬಳಕೆಯೂ ಈ ರೋಗ ವಿಸ್ತರಣೆ ಹಾಗೂ ಹರಡುವುದಕ್ಕೆ ಕಾರಣವಾಗುತ್ತದೆ.ಹೀಗಾಗಿ ರೋಗ ನಿರ್ವಹಣೆಯ ಜೊತೆಗೆ ಲಘು ಪೋಷಕಾಂಶ ಸೂಕ್ತ ಬಳಕೆಯೂ ಅಗತ್ಯವಿದೆ ಎಂದರು. ಈ ರೋಗದಲ್ಲಿ ಔಷಧಿ ಸಿಂಪಡಣೆಯೇ ಪರಿಹಾರ ಅಲ್ಲ, ಪೋಷಕಾಂಶಗಳ ಸೂಕ್ತ ಬಳಕೆಯೂ ಅಗತ್ಯವಿದೆ. ರೋಗದ ಗಂಭೀರತೆ ಗಮನಿಸಿ ಅದಕ್ಕೆ ಅನುಗುಣವಾಗಿ ಔಷಧಿ ಸಿಂಪಡಣೆ ಅಗತ್ಯವಿದೆ. ಸೆಪ್ಟೆಂಬರ್ ಅವಧಿಗೆ ಔಷಧಿ ಸಿಂಪಡಣೆ ಮಾಡುವುದು ಉತ್ತಮ ಎಂದು ಮಾಹಿತಿ ನೀಡಿದರು.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…