ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ ? | ಕೃಷಿಕರು ಏನು ಮಾಡಬೇಕು ? | ಪರಿಹಾರ ಹೇಗೆ ? | ಗುತ್ತಿಗಾರಿನಲ್ಲಿ ವಿವರಿಸಿದ್ದಾರೆ ವಿಜ್ಞಾನಿ ಡಾ.ಭವಿಷ್ಯ |

November 5, 2022
10:13 PM

ಅಡಿಕೆ ಎಲೆಚುಕ್ಕಿ ರೋಗ(Arecanut Leaf Spot) ಹಾಗೂ ರೋಗ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಕ್ರಮವು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಗುತ್ತಿಗಾರು ಸಹಕಾರಿ ಸಂಘದ  ದೀನ್‌ ದಯಾಳ್‌ ರೈತ ಸಭಾಭವನದಲ್ಲಿ ನಡೆಯಿತು. ನೂರಾರು ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಿಪಿಸಿಐಆರ್‌ ವಿಜ್ಞಾನಿ ಡಾ.ಭವಿಷ್ಯ ಅವರು ಸಮಗ್ರ ಮಾಹಿತಿ ನೀಡಿದರು. ಅವರು ಮಾತನಾಡಿರುವ ಸಂಪೂರ್ಣ ಆಡಿಯೋ ಇಲ್ಲಿದೆ……

Advertisement
Advertisement
Advertisement

Advertisement

ಎಲೆ ಚುಕ್ಕಿ ರೋಗದಲ್ಲಿ ಚುಕ್ಕಿ ಮಾತ್ರಾ ಆದರೆ ಸಮಸ್ಯೆ ಇಲ್ಲ, ಆದರೆ ಚುಕ್ಕಿ ಬೆಸೆದುಕೊಂಡರೆ ಸಮಸ್ಯೆಯಾಗುತ್ತದೆ ಎಂದು ಮಾಹಿತಿ ವಿವರಿಸಿದ ಡಾ.ಭವಿಷ್ಯ ಅವರು ರಾಜ್ಯದ 5 ಜಿಲ್ಲೆಗಳಲ್ಲಿ ಸದ್ಯ ಎಲೆಚುಕ್ಕಿ ರೋಗ ಹರಡಿಕೊಂಡಿದೆ. ಅದರಲ್ಲಿ ದ ಕ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಸದ್ಯ ಇದೆ. ಶೃಂಗೇರಿ ಭಾಗದಲ್ಲಿ ಕಾಣಿಸಿಕೊಂಡ ಎಲೆಚುಕ್ಕಿ ರೋಗಕ್ಕೂ ಸುಳ್ಯದಲ್ಲಿ ಕಾಣಿಸಿಕೊಂಡ ಎಲೆಚುಕ್ಕಿ ರೋಗ ಒಂದೇ ಆದರೂ ಪ್ರಭಾವದಲ್ಲಿ ವ್ಯತ್ಯಾಸ ಇದೆ. ಎಲೆಚುಕ್ಕಿ ರೋಗಕ್ಕೆ ಕಾರಣವಾಗುವ ಶಿಲೀಂದ್ರಕ್ಕೆ ಪೂರಕ ವಾತಾವರಣ ಬಂದಾಗ ಹರಡಿಕೊಳ್ಳುತ್ತದೆ. ಹೀಗಾಗಿ ಹವಾಮಾನವೂ ಒಂದು ಪ್ರಮುಖ ಕಾರಣವಾಗುತ್ತದೆ ಎಂದರು.

Advertisement

 

Advertisement

ಸಾಮಾನ್ಯವಾಗಿ 18-24 ಡಿಗ್ರಿಯ ವಾತಾವರಣದ ಉಷ್ಣತೆಯಲ್ಲಿ ಹೆಚ್ಚು ವಿಸ್ತರಣೆಯಾಗುವ ಈ ಶಿಲೀಂದ್ರವು ಮಳೆಗಾಲದಲ್ಲಿ ಹೆಚ್ಚು ವಿಸ್ತರಣೆಯಾಗುತ್ತದೆ. ಮಳೆ ಹಾಗೂ ಬಿಸಿಲು ಈ ಶಿಲೀಂದ್ರ ಅಭಿವೃದ್ಧಿಗೆ ಪೂರಕವಾಗಿದೆ.  ಎರಡು ವರ್ಷಗಳ ಹಿಂದೆಯೇ ಸುಳ್ಯದ ಕೆಲವು ಕಡೆ ಈ ರೋಗ ಕಂಡುಬಂದಿದ್ದರೂ ಈ ವರ್ಷ ವಿಪರೀತವಾಗಿದೆ.  ಇದಕ್ಕೆ ಸಾಮೂಹಿಕ ಮಟ್ಟದಲ್ಲಿ ರೋಗ ನಿರ್ವಹಣೆಯ ಅಗತ್ಯವಿದೆ ಎಂದರು.

ಇದರ ಜೊತೆಗೆ ಅಡಿಕೆ ಮರಗಳಿಗೆ ನೀಡುವ ಪೋಷಕಾಂಶಗಳ ನಿರ್ವಹಣೆಯೂ ಅಗತ್ಯ ಇದ್ದು, ಅಸಮತೋಲನ ಗೊಬ್ಬರ ಬಳಕೆಯೂ ಈ ರೋಗ ವಿಸ್ತರಣೆ ಹಾಗೂ ಹರಡುವುದಕ್ಕೆ ಕಾರಣವಾಗುತ್ತದೆ.ಹೀಗಾಗಿ ರೋಗ ನಿರ್ವಹಣೆಯ ಜೊತೆಗೆ ಲಘು ಪೋಷಕಾಂಶ ಸೂಕ್ತ ಬಳಕೆಯೂ ಅಗತ್ಯವಿದೆ ಎಂದರು. ಈ ರೋಗದಲ್ಲಿ ಔಷಧಿ ಸಿಂಪಡಣೆಯೇ ಪರಿಹಾರ ಅಲ್ಲ,‌ ಪೋಷಕಾಂಶಗಳ ಸೂಕ್ತ ಬಳಕೆಯೂ ಅಗತ್ಯವಿದೆ. ರೋಗದ ಗಂಭೀರತೆ ಗಮನಿಸಿ ಅದಕ್ಕೆ ಅನುಗುಣವಾಗಿ  ಔಷಧಿ ಸಿಂಪಡಣೆ ಅಗತ್ಯವಿದೆ. ಸೆಪ್ಟೆಂಬರ್ ಅವಧಿಗೆ ಔಷಧಿ ಸಿಂಪಡಣೆ ಮಾಡುವುದು ಉತ್ತಮ ಎಂದು ಮಾಹಿತಿ ನೀಡಿದರು.

Advertisement

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾಡ್ಗಿಚ್ಚು ಕೇವಲ ಜನರಿಗೆ ಅಪಾಯವಲ್ಲ | ಹವಾಮಾನ ಬದಲಾವಣೆಯ ಮೇಲೂ ಪರಿಣಾಮ |
April 16, 2024
3:48 PM
by: ದ ರೂರಲ್ ಮಿರರ್.ಕಾಂ
ತಾಪಮಾನ, ನೀರಿನ ಕೊರತೆ | ಇನ್ನಷ್ಟು ಗಂಭೀರ ಸ್ಥಿತಿಗೆ ತೆರಳಲಿದೆ ನಾಡು | ಪರಿಸರ ಕಾಳಜಿ ಗೆ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ನಿಶ್ಚಿತ | ಪರಿಸರವಾದಿ ದಿನೇಶ್‌ ಹೊಳ್ಳ ಹೇಳಿದ್ದೇನು..?
April 10, 2024
11:09 PM
by: ಮಹೇಶ್ ಪುಚ್ಚಪ್ಪಾಡಿ
ಪರಿಸರ ಶಾಲೆ | ಮಕ್ಕಳಿಗೆ ಪಾಠದ ಅಂಕದಷ್ಟೇ ಪರಿಸರ ಕಾಳಜಿಯೂ ಅಗತ್ಯ | ಪುತ್ತೂರಿನ ಈ ಪ್ಲೇ ಸ್ಕೂಲ್‌ ಮಾದರಿ ಏಕೆ..?
April 6, 2024
2:11 PM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆ ಮಿತ ಬಳಕೆ ಹಾನಿಕಾರಕವಲ್ಲ | 1974 ರಿಂದಲೇ ವರದಿ ಇದೆ…!, ನ್ಯಾಯಾಲಯಕ್ಕೆ ಸಲ್ಲಿಸುವವರು ಯಾರು…? |
April 5, 2024
9:20 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror