Advertisement
ಪ್ರಮುಖ

ಅಡಿಕೆಯಲ್ಲಿ ಎಲೆ ಚುಕ್ಕೆ ರೋಗದ ಸಮಗ್ರ ನಿರ್ವಹಣೆ ಹೇಗೆ..? ತಜ್ಞರಿಂದ ಸಮಗ್ರ ನಿರ್ವಹಣಾ ಮಾರ್ಗಸೂಚಿ – ಸಲಹೆ

Share

ಅಡಿಕೆ ತೋಟಗಳಲ್ಲಿ ಇತ್ತೀಚೆಗೆ  ಹರಡುತ್ತಿರುವ ಎಲೆ ಚುಕ್ಕೆ ರೋಗ ರೈತರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ರೋಗವು ಮುಖ್ಯವಾಗಿ  ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಗಾಳಿಯ ಮೂಲಕ ವೇಗವಾಗಿ ಹರಡುವುದರಿಂದ ಪ್ರಾಥಮಿಕ ಹಂತದಲ್ಲೇ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ಈ ಬಗ್ಗೆ ಸಿಪಿಸಿಆರ್‌ ಐ ಸಂಸ್ಥೆಯು ಕರ್ನಾಟಕದ ವಿವಿದ ಕಡೆಗಳಲ್ಲಿ ಪ್ರಾತ್ಯಕ್ಷಿಕೆ ತೋಟಗಳನ್ನು ಮಾಡಿದೆ. ಈ ಹಿನ್ನೆಲೆಯಲ್ಲಿ ಸುಳ್ಯದ ಗುತ್ತಿಗಾರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಿಪಿಸಿಆರ್‌ ಐ ವಿಜ್ಞಾನಿ ಡಾ.ವಿನಾಯಕ ಹೆಗ್ಡೆ ಅವರು ನೀಡಿದ ಮಾಹಿತಿ ಹೀಗಿದೆ…

ಈ ರೋಗವು ಭಾರತದ ಈಶಾನ್ಯ ರಾಜ್ಯ ತ್ರಿಪುರಾದ ಜಂಪುಯಿ ಹಿಲ್ಸ್ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ನಂತರ ಕರ್ನಾಟಕದ ಮಲೆನಾಡು ಭಾಗಗಳಿಗೆ ಹರಡಿದೆ. ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದರ ಲಕ್ಷಣಗಳು ಕಂಡುಬಂದಿವೆ. ಕೇರಳ ಮತ್ತು ತಮಿಳುನಾಡು ಪ್ರದೇಶಗಳಿಗೂ ಈ ರೋಗ ಪಸರಿಸಿರುವುದು ಗಮನಾರ್ಹವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ರೋಗ ಲಕ್ಷಣಗಳು :  ಎಲೆಗಳ ಮೇಲೆ ಹಳದಿ ವಲಯದೊಳಗಿನ ಕಂದು ಬಣ್ಣದ ಸಣ್ಣ ಚುಕ್ಕೆಗಳು ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣವಾಗಿದೆ. ಕೆಲವೊಮ್ಮೆ ಕಪ್ಪು ಅಂಚು ಹೊಂದಿರುವ ಬೂದು ಬಣ್ಣದ ಚುಕ್ಕೆಗಳೂ ಕಾಣಬಹುದು. ಈ ಚುಕ್ಕೆಗಳು ದೊಡ್ಡದಾಗಿ ಒಂದಕ್ಕೊಂದು ಸೇರಿ ಎಲೆ ಒಣಗುವ ಸ್ಥಿತಿಗೆ ತಲುಪುತ್ತವೆ.

ಮೊದಲು ಕೆಳಭಾಗದ ಎಲೆಗಳಲ್ಲಿ ಲಕ್ಷಣಗಳು ಕಾಣಿಸಿಕೊಂಡು, ನಂತರ ಮೇಲಿನ ಎಲೆಗಳಿಗೆ ಹರಡುತ್ತದೆ. ಅಡಿಕೆ ಕಾಯಿ ಹಾಗೂ ಹಾಳೆಯ ಮೇಲೂ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ರೋಗಬಾಧಿತ ಕಾಯಿಗಳು ಪೂರ್ಣ ಬೆಳವಣಿಗೆಗೂ ಮುನ್ನವೇ ಹಳದಿಯಾಗಿ ಬಿದ್ದುಹೋಗುತ್ತವೆ. ಕಾಯಿಯ ಮೇಲಿನ ಚುಕ್ಕೆಗಳಿರುವ ಭಾಗ ಸೀಳಿ ಉದುರುವ ಸಾಧ್ಯತೆಯೂ ಇದೆ.

ರೋಗ ಹರಡುವಿಕೆ ಕಾರಣಗಳು: ಗಾಳಿಯ ಮೂಲಕ ವೇಗವಾಗಿ ಹರಡುವುದು, ಹೆಚ್ಚು ತೇವಾಂಶ ಮತ್ತು ಮಳೆಯ ಪರಿಸ್ಥಿತಿ, ತಾಪಮಾನ ಬದಲಾವಣೆ, ತೋಟಗಳ ಸ್ಥಿತಿ ಪ್ರಮುಖ ಕಾರಣ.

ಸಮಗ್ರ ನಿರ್ವಹಣಾ ಕ್ರಮಗಳು :

  • ಬಾಧಿತ ಎಲೆಗಳನ್ನು ಕತ್ತರಿಸಿ ತೆಗೆಯುವುದು (ಫೈಟೋಸ್ಯಾನಿಟೇಶನ್)
  • ಬಾಧಿತ ಎಲೆಗಳನ್ನು ಸುಡುವುದು ಅಥವಾ ಬುಡಕ್ಕೆ ಕತ್ತರಿಸಿ ಹಾಕುವ ಬದಲಾಗಿ ಕಾಂಪೋಸ್ಟ್‌ ವಿಧಾನದ ಬಳಿಕ ವರ್ಷಗಳ ನಂತರ ಬಳಕೆ ಮಾಡುವುದು ಉತ್ತಮ
  • ರೋಗಬಾಧಿತ ಸಸಿಗಳನ್ನು ಬೇರೆ ಪ್ರದೇಶಗಳಿಗೆ ಸಾಗಿಸಬಾರದು
  • ಸಮುದಾಯ ಮಟ್ಟದಲ್ಲಿ ಒಟ್ಟಿಗೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ

 ಔಷಧಿ ಸಿಂಪಡಣೆ

  • ಪ್ರೋಪಿಕೊನಜೋಲ್ 25EC @ 0.1% ಅಥವಾ ಟೆಬುಕೊನಜೋಲ್ 38.9% ಸಿಂಪಡಣೆ
  • 20–25 ದಿನಗಳ ನಂತರ ಪ್ರೋಪಿನೆಬ್ 70WP (1 ಲೀಟರ್ ನೀರಿಗೆ 2 ಗ್ರಾಂ) ಸಿಂಪಡಣೆ

ಬೋರ್ಡೋ ಮಿಶ್ರಣ

ಮಳೆಗಾಲದಲ್ಲಿ ಬೋರ್ಡೋ ಮಿಶ್ರಣವನ್ನು ಎಲೆಗಳಿಗೂ ಸಿಂಪಡಿಸುವುದು ಉತ್ತಮ ಫಲಿತಾಂಶ ನೀಡುತ್ತದೆ. Spreader cum sticker (1%) ಅನ್ನು 1 ಲೀಟರ್ ನೀರಿಗೆ 1 ಮಿ.ಲೀ ಪ್ರಮಾಣದಲ್ಲಿ ಸೇರಿಸಿ ಸಿಂಪಡಿಸಬೇಕು

 ಗೊಬ್ಬರ ನಿರ್ವಹಣೆ : ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಗೊಬ್ಬರ ನೀಡುವುದು ಉತ್ತಮ

  • ಒಂದು ಅಡಿಕೆ ಮರಕ್ಕೆಸುಮಾರು 12 ಕಿಲೋ ಗ್ರಾಂ ಹಟ್ಟಿ ಗೊಬ್ಬರ ಮತ್ತು ಹಸಿರೆಲೆಗಳು.
    • ಯೂರಿಯಾ – 220 ಗ್ರಾಂ
    • ರಾಕ್ ಫಾಸ್ಫೇಟ್ – 200 ಗ್ರಾಂ
    • ಪೊಟಾಶ್ – 240–350 ಗ್ರಾಂ
  • ಗೊಬ್ಬರವನ್ನು ಕನಿಷ್ಠ ಎರಡು ಹಂತಗಳಲ್ಲಿ ನೀಡಬೇಕು

ಲಘೂ ಪೋಷಕಾಂಶಗಳು:

  • ಸತುವಿನ ಸಲ್ಫೇಟ್ – 5 ಗ್ರಾಂ
  • ಬೋರಾಕ್ಸ್ – 5 ಗ್ರಾಂ‌ ನೀಡಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್‌ ಮಾಡಿ

Arecanut leaf spot disease is spreading rapidly in Karnataka due to favorable climatic conditions. Experts recommend integrated disease management including removal of infected leaves, fungicide spraying (Propiconazole, Propineb, Tebuconazole), Bordeaux mixture application, and balanced nutrient management. Early intervention and community-level action are key to control the disease.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಭಾರತೀಯ ಮಾವಿನ ಹಣ್ಣಿಗೆ ನೇಪಾಳ ನಿಷೇಧವಿಲ್ಲ – ಸುಳ್ಳು ವರದಿಗಳಿಗೆ ಭಾರತ-ನೇಪಾಳ ಸರ್ಕಾರಗಳ ಸ್ಪಷ್ಟನೆ

ಭಾರತೀಯ ಮಾವಿನ ಹಣ್ಣಿನ ಆಮದಿಗೆ ನೇಪಾಳ ಯಾವುದೇ ನಿಷೇಧ ಹೇರಿಲ್ಲ ಎಂದು ಭಾರತ…

5 hours ago

ಮುಂದಿನ 5 ದಿನ ರಾಜ್ಯಾದ್ಯಂತ ಭಾರೀ ಮಳೆ ಎಚ್ಚರಿಕೆ- ಕರಾವಳಿ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಣೆ

ರಾಜ್ಯದ ಹಲವೆಡೆ ಮುಂದಿನ ಐದು ದಿನ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ…

7 hours ago

ಸುಲಭವಾಗಿ ಮಾಡಿ ರುಚಿಕರ ಹಲಸಿನ ಕಾಯಿ ಚಟ್ನಿ – ಬಿಸಿ ಅನ್ನಕ್ಕೆ ಸೂಪರ್ ಕಾಂಬಿನೇಷನ್!

ಹಲಸಿನ ಕಾಯಿ, ಕಾಯಿತುರಿ ಹಾಗೂ ಜೀರಿಗೆ ಬಳಸಿ ತಯಾರಿಸುವ ಈ ಚಟ್ನಿ ಬಿಸಿ…

8 hours ago

ಅಡಿಕೆ ಕೃಷಿ ಲಾಭದಾಯಕವೇ..? – ಮೂರು ವರ್ಷದಲ್ಲಿ ಕೆಜಿಗೆ ₹34.53 ವೆಚ್ಚ ಏರಿಕೆ – ನ್ಯಾಯಸಮ್ಮತ ಬೆಲೆಗಾಗಿ ರೈತರ ಒತ್ತಾಯ

2023ರಿಂದ 2026ರವರೆಗೆ ಅಡಿಕೆ ಉತ್ಪಾದನಾ ವೆಚ್ಚ ಸುಮಾರು 27% ಏರಿಕೆಯಾಗಿದೆ. ಈ ಲೆಕ್ಕಾಚಾರದ…

16 hours ago

ಎಲ್ ನೀನೋ, ಲಾ ನೀನಾ ಮತ್ತು ಮಳೆ ಅನಿಶ್ಚಿತತೆ – ಮುಂದಿನ ಪೀಳಿಗೆಗಾಗಿ ಮಳೆನೀರು ಉಳಿಸುವುದು ಈಗಲೇ ಅನಿವಾರ್ಯ..!

ಎಲ್ ನೀನೋ ಮತ್ತು ಲಾ ನೀನಾ ಪ್ರಭಾವದಿಂದ ಮಳೆಯ ಮಾದರಿಯಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ.…

17 hours ago

ರಸ್ತೆ ಬದಿ ತ್ಯಾಜ್ಯ ಎಸೆದರೆ ಎಚ್ಚರ – ದಂಡ ಖಚಿತ | ಬೆಂಗಮಲೆಯಲ್ಲಿ ತ್ಯಾಜ್ಯ ಎಸೆದವರಿಗೆ ₹5,000 ದಂಡ

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಗಮಲೆಯಲ್ಲಿ ತ್ಯಾಜ್ಯ ಎಸೆದ ಸುಳ್ಯ ನಿವಾಸಿಗೆ ₹5,000…

18 hours ago