ಅಡಿಕೆ ಧಾರಣೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಕೆಲವು ಸಮಯಗಳಿಂದ 500-510 ರೂಪಾಯಿಯಲ್ಲಿ ಇದ್ದ ಚಾಲಿ ಧಾರಣೆ ಇದೀಗ 525-535 ರೂಪಾಯಿಗೆ ಏರಿಕೆಯಾಗಿದೆ. ಈಗ ಅಡಿಕೆ ಬೆಳೆಗಾರರಿಗೆ ಕರೆ ಬರಲು ಆರಂಭವಾಗಿದೆ, ” ಅಡಿಕೆ ಇದೆಯಾ..? ಧಾರಣೆ ಏರುತ್ತಿದೆ…”.
ಕಳೆದ ವಾರದಿಂದ ಮತ್ತೆ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನ ಆರಂಭವಾಗಿದೆ. ಪ್ರತೀ ಬಾರಿಯಂತೆಯೇ ಈ ಬಾರಿ ಕೂಡಾ ನವೆಂಬರ್ ಅಂತ್ಯದಿಂದ ಧಾರಣೆ ಏರಿಕೆ ಪ್ರಕ್ರಿಯೆ ಆರಂಭವಾಗಿದೆ. ಅಡಿಕೆ ದಾಸ್ತಾನು ಮಾಡುವ ಬಗ್ಗೆ ಈಗ ಉತ್ತರ ಭಾರತದ ವ್ಯಾಪಾರಿಗಳು ಮನಸ್ಸು ಮಾಡಿದ್ದಾರೆ ಎನ್ನುವುದು ಸದ್ಯದ ಮಾಹಿತಿ. ನವೆಂಬರ್ ಬಳಿಕ ಚಾಲಿ ಅಡಿಕೆ ಹಾಗೂ ಕೆಂಪಡಿಕೆ ಧಾರಣೆಯೂ ಏರಿಕೆಯಾಗುತ್ತದೆ. ಚಾಲಿ ಅಡಿಕೆಯಲ್ಲಿ ಹಳೆಯ ಅಡಿಕೆ ದಾಸ್ತಾನು ಸಮಯ ಇನ್ನೀಗ ಆರಂಭವಾಗುತ್ತದೆ.
ಇಲ್ಲಿನ ವ್ಯಾಪಾರಿಗಳಿಗಿಂತಲೂ ಉತ್ತರ ಭಾರತದ ವ್ಯಾಪಾರಿಗಳಿಗೆ ಈ ವರ್ಷದ ಸೀಸನ್ ಆರಂಭವಾಗುವುದೇ ಡಿಸೆಂಬರ್ ನಂತರ. ಹೀಗಾಗಿ ಈಗ ಅಡಿಕೆ ದಾಸ್ತಾನು ಇದ್ದರೆ ಮಾತ್ರವೇ ಮುಂದಿನ ಮೂರು ತಿಂಗಳು ಸರಿಯಾದ ವ್ಯಾಪಾರ ನಡೆಯುತ್ತದೆ. ಇದರ ತಯಾರಿ ಈಗ ಆರಂಭವಾಗಿದೆ. ಇದರ ಪರಿಣಾಮ ಕಳೆದ ವಾರದಿಂದ ಧಾರಣೆ ಏರಿಕೆ ಆರಂಭವಾಗಿದೆ. ಮಂಗಳವಾರವೂ ಅಡಿಕೆ ಧಾರಣೆಯು ಏರಿಕೆ ಕಂಡಿದೆ. ಕ್ಯಾಂಪ್ಕೋ ಸಂಸ್ಥೆ ತನ್ನ ಧಾರಣೆಯನ್ನು ಏರಿಕೆ ಮಾಡಿದ್ದು, ಹೊಸ ಅಡಿಕೆ 425 ರೂಪಾಯಿಗೆ, ಹಳೆ ಅಡಿಕೆ 515 ರೂಪಾಯಿಗೆ ಏರಿಕೆ ಮಾಡಿದೆ. ಇದೇ ವೇಳೆ ಖಾಸಗಿ ವ್ಯಾಪಾರಿಗಳು ಹಳೆ ಅಡಿಕೆ ಧಾರಣೆಯನ್ನು 530-535 ರೂಪಾಯಿಗೆ ರೂಪಾಯಿಗೆ ಏರಿಕೆ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಡಿಕೆ ಧಾರಣೆ 50,919 ರೂ. ದರದಲ್ಲಿ ವಹಿವಾಟು ನಡೆದರೆ ಶಿವಮೊಗ್ಗದಲ್ಲೂ ಧಾರಣೆ ಏರಿಕೆಯ ಹಾದಿಯಲ್ಲಿದೆ. ದಕ್ಷಿಣ ಕನ್ನಡ, ಕಾಸರಗೋಡು ಭಾಗದಲ್ಲಿ ಚಾಲಿ ಅಡಿಕೆ ಧಾರಣೆ ಏರಿಕೆ ಕಾಣುತ್ತಿದೆ. ಮಂಗಳವಾರ ಚಾಲಿ ಧಾರಣೆ ಇದೀಗ 525-535 ರೂಪಾಯಿಗೆ ಏರಿಕೆಯಾಗಿದೆ. ಹೊಸ ಅಡಿಕೆಗೆ 430 ರಿಂದ 440 ರೂಪಾಯಿವರೆಗೂ ಖರೀದಿ ಆಗಿದೆ.
Advertisement
ಈ ಧಾರಣೆ ಹೇಗಾಗಬಹುದು ಎನ್ನುವ ಪ್ರಶ್ನೆ ಬೆಳೆಗಾರರಲ್ಲಿದೆ. ಈಗಾಗಲೇ 500+ ಧಾರಣೆ ಇರುವುದರಿಂದ ಭಾರೀ ಏರಿಕೆಯ ನಿರೀಕ್ಷೆ ಕಷ್ಟವಾಗಬಹುದು. ಕಳೆದ ವರ್ಷವೇ ಅಡಿಕೆಯ ದಾಸ್ತಾನು ಖಾಲಿಯಾಗಿದ್ದರೆ, ಕಳೆದ ಬಾರಿ ಧಾರಣೆಯಲ್ಲಿ ಭಾರೀ ಏರಿಕೆ ಕಂಡ ಹಿನ್ನೆಲೆಯಲ್ಲಿ ಹೊಸ ಅಡಿಕೆಯನ್ನು ಕೂಡಾ ಅರ್ಧದಷ್ಟು ಬೆಳೆಗಾರರು ಖಾಲಿ ಮಾಡಿದ್ದಾರೆ.
ಹೀಗಾಗಿ ಹಳೆ ಅಡಿಕೆಯ ಕೊರತೆ ಇದ್ದೇ ಇದೆ. ಈ ನಡುವೆ ಈಗಿನ ಹೊಸ ಅಡಿಕೆಯು ಗುಣಮಟ್ಟದ ಕೊರತೆಯನ್ನು ಎದುರಿಸುತ್ತಿದೆ. ಮಳೆಯ ಕಾರಣದಿಂದ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರುತ್ತಿಲ್ಲ. ಈ ಕಾರಣದಿಂದಲೂ ಹಳೆ ಅಡಿಕೆ ಧಾರಣೆ ಏರಿಕೆ ಕಾಣಬಹುದು. ಇದರ ಜೊತೆಗೇ ಹೊಸ ಅಡಿಕೆ ಧಾರಣೆಯೂ ಸ್ವಲ್ಪ ಏರಿಕೆಯಾಗಬಹುದು.
ಈಗಿನ ಅಂದಾಜು ಪ್ರಕಾರ 550 ರೂಪಾಯಿವರೆಗೆ ಹಳೆ ಅಡಿಕೆ ಧಾರಣೆ ತಲಪುವ ನಿರೀಕ್ಷೆ ಇದೆ. ಹೊಸ ಅಡಿಕೆ ಧಾರಣೆಯೂ 460+ ತಲುಪಬಹುದು ಎನ್ನುವುದು ಮಾರುಕಟ್ಟೆ ವಲಯದ ಈಗಿನ ಅಭಿಮತ.
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…