ಶ್ರೀಲಂಕಾ ಮೂಲಕ ಭಾರತಕ್ಕೆ ಬರುತ್ತಿದ್ದ 23 ಕಂಟೈನರ್‌ ಅಡಿಕೆ ವಶ | ಅಡಿಕೆ ಮಾರುಕಟ್ಟೆ ಮತ್ತೆ ಸ್ಥಿರತೆಯ ನಿರೀಕ್ಷೆ |

Advertisement
Advertisement

ಅಡಿಕೆ ಮಾರುಕಟ್ಟೆ ಅಸ್ಥಿರಗೊಳಿಸುವ ಸತತ ಪ್ರಯತ್ನಗಳು ವಿಫಲವಾಗುತ್ತಿದೆ. ಅಸ್ಸಾಂ ಗಡಿಯ ಮೂಲಕ ಭಾರತದೊಳಕ್ಕೆ ಬರುತ್ತಿದ್ದ ಅಡಿಕೆಗೆ ನಿರಂತರ ತಡೆಯಾಗುತ್ತಿದ್ದಂತೆಯೇ ಇದೀಗ ಶ್ರೀಲಂಕಾ ಮೂಲಕ ಭಾರತದೊಳಕ್ಕೆ ಅಡಿಕೆ ಸಾಗಾಟದ ಪ್ರಯತ್ನವೂ ವಿಫಲವಾಗಿದೆ. ಶ್ರೀಲಂಕಾ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಡಿಕೆ ಆಮದು ಹಾಗೂ ರಫ್ತು ಬಗ್ಗೆ ಮಾಹಿತಿ ಪಡೆದು 23 ಕಂಟೈನರ್‌ ಅಡಿಕೆ ವಶಕ್ಕೆ ಪಡೆದುಕೊಂಡು ಕಸ್ಟಮ್ಸ್ ಇಲಾಖೆಯ ಮಾಜಿ ಸಹಾಯಕ ಅಧೀಕ್ಷಕರನ್ನುವಶಕ್ಕೆ ತೆಗೆದುಕೊಂಡಿದೆ.

Advertisement

ಇಂಡೋನೇಶ್ಯಾದಿಂದ ಅಡಿಕೆ ಆಮದು ಮಾಡಿ ಭಾರತಕ್ಕೆ ಮರು ರಫ್ತು ಮಾಡುವ ಸಂದರ್ಭದಲ್ಲಿ  ಈ ಪ್ರಕರಣ ಬೆಳಕಿಗೆ ಬಂದಿದೆ. ಇಂಡೋನೇಶ್ಯಾದಿಂದ ಅಡಿಕೆ ಆಮದು ಮಾಡಿ ಶ್ರೀಲಂಕಾದಲ್ಲಿ  ಬೆಳೆದ ಅಡಿಕೆಯನ್ನು  ಭಾರತಕ್ಕೆ ರಫ್ತು ಮಾಡುವಂತೆ ದಾಖಲೆ ಸೃಷ್ಟಿ ಮಾಡಿ 23 ಕಂಟೈನರ್‌ ಅಡಿಕೆಯನ್ನು ನಕಲಿ ದಾಖಲೆ ಮೂಲಕ ಸಾಗಾಟ ಮಾಡಲು ಯತ್ನ ನಡೆದಿತ್ತು. ಇದನ್ನು ಶ್ರೀಲಂಕಾದ ಅಪರಾಧ ತನಿಖಾ ಇಲಾಖೆ  ಪತ್ತೆ ಮಾಡಿದೆ.

Advertisement
Advertisement

ಈ ಬಗ್ಗೆ ಮಾಹಿತಿ ನೀಡಿದ ಅಪರಾಧ ತನಿಖಾ ವಿಭಾಗದ ವಕ್ತಾರ ಡಿಐಜಿ ಅಜಿತ್‌ , ಇಂಡೋನೇಶ್ಯಾದಿಂದ ಅಡಿಕೆ ತರಿಸಿ ಭಾರತಕ್ಕೆ ಮರುರಫ್ತು ಮಾಡುವ ಜಾಲ ಇದಾಗಿದೆ. ಶ್ರೀಲಂಕಾದಲ್ಲಿ  ಬೆಳೆದ ಅಡಿಕೆಯಂತೆ ನಕಲಿ ದಾಖಲೆ ಸೃಷ್ಟಿ ಮಾಡಿ ಸಾಗಾಟ ಮಾಡುವ ಪ್ರಯತ್ನ ನಡೆದಿತ್ತು. ಸದ್ಯ 23 ಕಂಟೈನರ್‌ ಅಡಿಕೆ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು 2020  ಆಗಸ್ಟ್‌ ತಿಂಗಳಿನಿಂದ ಕೆಲವು ಬಾರಿ ಅಡಿಕೆ ಶ್ರೀಲಂಕಾಕ್ಕೆ ಬಂದಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದಕ್ಕಾಗಿ ಕಸ್ಟಮ್ಸ್ ಮಾಜಿ ಸಹಾಯಕ ಅಧೀಕ್ಷಕರು ಸಹಾಯ ನೀಡಿದ್ದು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು  ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಅಸ್ಸಾಂ ಗಡಿಯಲ್ಲಿ ಕೂಡಾ ಅಡಿಕೆ ಆಮದು ತಡೆಯಲಾಗಿದೆ. ಕಳ್ಳ ದಾರಿ ಮೂಲಕ ಅಸ್ಸಾಂ ಗಡಿಯಲ್ಲಿ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣರವನ್ನು  ಅಸ್ಸಾಂ ಗಡಿ ಭದ್ರತಾ ಪಡೆ ಪತ್ತೆ ಮಾಡಿದ್ದು ಸುಮಾರು 7.7 ಲಕ್ಷ ಮೌಲ್ಯದ ಅಡಿಕೆಯನ್ನು ವಶಕ್ಕೆ ಪಡೆದಿದ್ದಾರೆ. ಮಿಜೋರಾಂನ ಚಂಪೈ ಜಿಲ್ಲೆಯ ಇಂಡೋ-ಮ್ಯಾನ್ಮಾರ್ ಅಂತರರಾಷ್ಟ್ರೀಯ ಗಡಿ ಮೂಲಕ  ಕಳ್ಳಸಾಗಣೆ ಮಾಡಲು ಉದ್ದೇಶಿಸಲಾಗಿತ್ತು ಎಂದು ಗಡಿ ಭದ್ರತಾ ಸಿಬಂದಿಗಳು ಮಾಹಿತಿ ನೀಡಿದ್ದಾರೆ.

Advertisement
Advertisement
ಏನಾಗಬಹುದು ಅಡಿಕೆ ಮಾರುಕಟ್ಟೆ ?
ಇದೀಗ ಅಡಿಕೆ ಧಾರಣೆಯಲ್ಲಿ ಇಲ್ಲೂ ಏರಿಳಿತಳ ಮೂಲಕ ಧಾರಣಿ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಅಡಿಕೆ ಬೇಡಿಕೆ ಯಥಾ ಸ್ಥಿತಿ ಇದ್ದು ಮಾರುಕಟ್ಟೆಯಲ್ಲಿ  ಹಣದ ಕೊರತೆ ಇರುವುದು  ಸದ್ಯದ ಮಟ್ಟಿಗೆ ಧಾರಣೆ ಏರಿಕೆಗೆ ಹಿನ್ನಡೆಯಾಗಿದೆ. 15 ದಿನಗಳಲ್ಲಿ  ಮತ್ತೆ ಅಡಿಕೆ ಧಾರಣೆಯಲ್ಲಿ ಚೇತರಿಕೆ ಕಾಣಲಿದೆ. ಅಡಿಕೆ ಖರೀದಿಯಲ್ಲಿ  ಹಾಗೂ ಬಳಕೆಯಲ್ಲಿ  ಯಾವುದೇ ಹಿನ್ನಡೆಯಾಗಿಲ್ಲ, ಹೀಗಾಗಿ ಬೇಡಿಕೆ ಹೆಚ್ಚುತ್ತಲೇ ಇದ್ದು, ಮಾರುಕಟ್ಟೆಗೆ ಅಡಿಕೆ ಬರುವ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಧಾರಣೆ ಏರಿಕೆಯ ನಿರೀಕ್ಷೆ ಇದೆ. ಕೊರೋನಾ, ಲಾಕ್ಡೌನ್‌ ಹಾಗೂ ಹಣದ ಕೊರತೆ ಮಾರುಕಟ್ಟೆಗೆ ಅಡ್ಡಿಯಾಗದೇ ಇದ್ದರೆ ಧಾರಣೆ ಏರಿಕೆ ನಿರೀಕ್ಷೆ ಮಾಡಲಾಗಿದೆ.

 

 

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಶ್ರೀಲಂಕಾ ಮೂಲಕ ಭಾರತಕ್ಕೆ ಬರುತ್ತಿದ್ದ 23 ಕಂಟೈನರ್‌ ಅಡಿಕೆ ವಶ | ಅಡಿಕೆ ಮಾರುಕಟ್ಟೆ ಮತ್ತೆ ಸ್ಥಿರತೆಯ ನಿರೀಕ್ಷೆ |"

Leave a comment

Your email address will not be published.


*