ಅಡಿಕೆ ಮಾರುಕಟ್ಟೆ ಭವಿಷ್ಯ ಹೇಗಿದೆ ? ಅಧ್ಯಯನ ವರದಿ ಏನು ಹೇಳುತ್ತದೆ ?

April 17, 2021
12:55 PM

ಅಡಿಕೆ ಮಾರುಕಟ್ಟೆಯ ಬಗ್ಗೆ ಪ್ರತೀ ವರ್ಷ ಖಾಸಗಿ ಸಂಸ್ಥೆಗಳು ಅಡಿಕೆ ಮಾರುಕಟ್ಟೆ, ಉತ್ಪಾದನೆ ಹಾಗೂ ಮಾರುಕಟ್ಟೆ ಪ್ರಗತಿಯ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುತ್ತವೆ. ಇದರಲ್ಲಿ ಪ್ರಮುಖ ಖಾಸಗಿ ಅಡಿಕೆ ಕಂಪನಿಗಳು, ಅಡಿಕೆ ಖರೀದಿ ಹಾಗೂ ಮಾರಾಟ, ಬೇಡಿಕೆ ಇತ್ಯಾದಿಗಳ ಡಾಟಾ ಪಡೆದು 12 ಅಧ್ಯಾಯಗಳ ವರದಿಯನ್ನು  ಖಾಸಗಿ ಸಂಸ್ಥೆಗಳು ನೀಡುತ್ತವೆ. ಈ ಬಾರಿಯ ವರದಿಯಲ್ಲಿ ಕೊರೋನಾ ಬಳಿಕ ಅಡಿಕೆ ಮಾರುಕಟ್ಟೆಯ ಬಗ್ಗೆ ಉತ್ತಮ ಭವಿಷ್ಯ ಇದೆ  ಎಂದು ಹೇಳಿದೆ.

Advertisement
Advertisement

ಕೊರೋನಾದ ಕಾರಣದಿಂದ 2020  ರಲ್ಲಿ ಆರ್ಥಿಕ ಹಿಂಜರಿತ ಉಂಟಾಗಿತ್ತು. ಹಾಗಿದ್ದರೂ ಕಳೆದ ವರ್ಷದ ನಿರೀಕ್ಷಿಸಿದಂತೆಯೇ ಮಾರುಕಟ್ಟೆ ಪ್ರಗತಿಯಾಗಿತ್ತು ಎಂದು ವರದಿ ಉಲ್ಲೇಖ ಮಾಡಿದೆ. ಮುಂದೆಯೂ ಕೊರೋನಾ ಹೆಮ್ಮಾರಿ ಕಾಡುತ್ತಿದೆ.

Advertisement

ಕೊರೋನಾ ಸಾಂಕ್ರಾಮಿಕ ರೋಗವು ಜಾಗತಿಕ ಆರ್ಥಿಕತೆಯ ಮೂರು ಪ್ರಮುಖ ಅಂಶಗಳ ಮೇಲೆ ಪರಿಣಾಮ ಬೀರಬಹುದು. ಉತ್ಪಾದನೆ, ಪೂರೈಕೆ ಸರಪಳಿ ಹಾಗೂ ಸಂಸ್ಥೆಗಳು ಮತ್ತು ಹಣಕಾಸು ಮಾರುಕಟ್ಟೆಗಳು. ಅಡಿಕೆಯಲ್ಲೂ ಇದೇ ಮೂರು ವಿಷಯಗಳಲ್ಲಿ  ಪರಿಣಾಮ ಕಾಣಬಹುದು. ಇಲ್ಲಿ ಉತ್ಪಾದನೆಯು ವಾತಾವರಣದ ಏರುಪೇರಿನ ಕಾರಣದಿಂದ ಉಂಟಾದರೆ, ಉಳಿದಂತೆ ಕೊರೋನಾ ಪರಿಣಾಮ ಕಾಣಬಹುದ. ಹಾಗಿದ್ದರೂ ಈಗಿನ ನಿರೀಕ್ಷೆ ಹಾಗೂ ಮಾರುಕಟ್ಟೆ ಅಧ್ಯಯನ ಪ್ರಕಾರ ಅಡಿಕೆ  ಉದ್ಯಮದ ಭವಿಷ್ಯದ ದೃಷ್ಟಿಕೋನದಲ್ಲಿ ನಿರೀಕ್ಷಿತ ಬದಲಾವಣೆಯನ್ನು ಒಳಗೊಂಡಿರುತ್ತದೆ.  ಅಡಿಕೆಯ ಬಗೆಗಿನ ಸಂಶೋಧನಾ ವರದಿಯ ಪ್ರಕಾರ ಮುಂಬರುವ ದಿನಗಳಲ್ಲಿ ಅಡಿಕೆಯ ಮಾರುಕಟ್ಟೆಯಲ್ಲಿ  ಬೇಡಿಕೆಯೇ ಹೆಚ್ಚಿರುತ್ತದೆ ಎಂದು ವರದಿ ಸೂಕ್ಷ್ಮವಾಗಿ ಹೇಳುತ್ತದೆ.

ಅಡಿಕೆ ಮಾರುಕಟ್ಟೆಯ ಅಧ್ಯಯನಕ್ಕೆ ಈ ಸಂಸ್ಥೆಗಳು ಮಾರುಕಟ್ಟೆ ವಿಭಾಗದಲ್ಲಿ ಇಡೀ ಅಡಿಕೆ ಹಾಗೂ ಒಡೆದ ಅಡಿಕೆ ಎಂಬ ವಿಭಾಗ ಮಾತ್ರಾ ಗಮನಿಸುತ್ತವೆ.  5  ಕಂಪನಿಗಳ ವರದಿಯನ್ನು  ಪಡೆಯಲಾಗಿದೆ.ಅದೇ ರೀತಿ ಅಡಿಕೆ ಖರೀದಿದಾರರು, ಬಳಕೆದಾರರನ್ನೂ ಈ ಅಧ್ಯಯನ ವರದಿಗೆ ಪರಿಗಣಿಸಲಾಗಿತ್ತು.

Advertisement

ಈ ಪ್ರಕಾರ

ಏಷ್ಯಾ (ವಿಯೆಟ್ನಾಂ, ಚೀನಾ, ಮಲೇಷ್ಯಾ, ಜಪಾನ್, ಫಿಲಿಪೈನ್ಸ್, ಕೊರಿಯಾ, ಥೈಲ್ಯಾಂಡ್, ಭಾರತ, ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾ)

Advertisement

ಯುರೋಪ್ (ಟರ್ಕಿ, ಜರ್ಮನಿ, ರಷ್ಯಾ ಯುಕೆ, ಇಟಲಿ, ಫ್ರಾನ್ಸ್, ಇತ್ಯಾದಿ)

 ಉತ್ತರ ಅಮೆರಿಕಾ (ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೊ ಮತ್ತು ಕೆನಡಾ.)

Advertisement

ದಕ್ಷಿಣ ಅಮೆರಿಕಾ (ಬ್ರೆಜಿಲ್ ಇತ್ಯಾದಿ)

ಮಧ್ಯಪ್ರಾಚ್ಯ ಮತ್ತು ಆಫ್ರಿಕಾ (ಜಿಸಿಸಿ ದೇಶಗಳು ಮತ್ತು ಈಜಿಪ್ಟ್.)

Advertisement

ಇಷ್ಟು ಪ್ರದೇಶಗಳಲ್ಲಿನ ಅಡಿಕೆ ಬಳಕೆ ಸಹಿತ ಇತರ ವಿವರ ಪಡೆಯಲಾಗಿತ್ತು, ಅಲ್ಲದೆ ಮಾರುಕಟ್ಟೆ ವ್ಯಾಪ್ತಿ, ಉತ್ಪನ್ನ ವಿವರಗಳು ಮತ್ತು ಪರಿಚಯ,  ಅಡಿಕೆ ಮಾರುಕಟ್ಟೆ , ಪ್ರಮುಖ ಕಂಪನಿಗಳ ಅವಲೋಕನ,  ಮಾರುಕಟ್ಟೆ ಸ್ಥಿರತೆ, ಮಾರುಕಟ್ಟೆ ಪಾಲು ಮತ್ತು ಪ್ರಮುಖ ಮಾರುಕಟ್ಟೆಯ ಆರು ವರ್ಷಗಳ ಸಂಯುಕ್ತ ವಾರ್ಷಿಕ ಬೆಳವಣಿಗೆ ಕೂಡಾ ಪರಿಗಣಿಸಲಾಗಿತ್ತು. ಈ ಎಲ್ಲಾ ವರದಿಗಳ ಆಧಾರದಲ್ಲಿ  ಅಡಿಕೆ ಬೆಳೆಯುವ ಪ್ರದೇಶಗಳು ಹೆಚ್ಚಾಗಿವೆ, ಅಡಿಕೆ ಉತ್ಪಾದನೆಯ ಜೊತೆಗೆ ಬಳಕೆಯೂ ಹೆಚ್ಚಾಗಿದ್ದು, ಅಡಿಕೆ ಬಳಕೆಯ ದೇಶಗಳೂ ಹೆಚ್ಚಾಗುತ್ತಿದೆ ಎನ್ನುವುದು  ವರದಿಯಲ್ಲಿ  ಕಂಡುಬರುವ ಅಂಶಗಳು. ಪ್ರತೀ ವರ್ಷದ ವರದಿಯಲ್ಲೂ ಅಡಿಕೆ ಬೇಡಿಕೆ ಹಾಗೂ ಮಾರುಕಟ್ಟೆಯ ಬಗ್ಗೆ ಧನಾತ್ಮಕ ಅಂಶಗಳು ಕಂಡುಬರುತ್ತದೆ. ಈ ಬಾರಿಯೂ ಉತ್ತಮ ಧಾರಣೆಯ ನಿರೀಕ್ಷೆ ಈ ವರದಿಯಲ್ಲಿ  ಹೇಳಲಾಗಿದೆ.

 

Advertisement

 

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ | ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ |
April 25, 2024
3:00 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror