Advertisement
ಕೃಷಿ

ಅಡಿಕೆ ಮಾರುಕಟ್ಟೆ | Arecanut Market | ಚಾಲಿ ಅಡಿಕೆಯಲ್ಲಿ ಸಹಜ ಏರಿಳಿತ | ಪಠೋರ ಧಾರಣೆಯಲ್ಲಿ ಇಳಿಕೆ ಮಾಡಿದ ಕ್ಯಾಂಪ್ಕೋ | ಅಡಿಕೆ ಧಾರಣೆಯಲ್ಲಿ ಮುಂದಿರುವ ಮಾಸ್‌ |

Share

ಅಡಿಕೆ ಮಾರುಕಟ್ಟೆಯಲ್ಲಿ(Arecanut Market) ಸ್ವಲ್ಪ ಪ್ರಮಾಣದಲ್ಲಿ ಮಾರುಕಟ್ಟೆ ಸಹಜವಾದ ಏರಿಳಿದ ಕಂಡಿದೆ. ಗುರುವಾರ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಪಠೋರ ಹಾಗೂ ಇತರ ಅಡಿಕೆ ದರ 5 ರೂಪಾಯಿ ಇಳಿಕೆ ಮಾಡಿದೆ.ಸದ್ಯ 385 ರೂಪಾಯಿಗೆ ಖರೀದಿ ನಡೆಯುತ್ತಿದೆ. ಆದರೆ ಅಡಿಕೆ ಧಾರಣೆ ಕಳೆದ ಎರಡು ವಾರದಿಂದ ಸ್ಥಿರವಾಗಿದೆ. ಈ ನಡುವೆ ಸಹಕಾರಿ ಸಂಸ್ಥೆ ಮಾಸ್‌ , ವಿಟ್ಲದ ಪಿಂಗಾರ  ಸಂಸ್ಥೆ ಬಾರಿ ಅಡಿಕೆ ಧಾರಣೆಯಲ್ಲಿ ಕ್ಯಾಂಪ್ಕೋಗಿಂತ ಮುಂದಿದೆ. ಖಾಸಗಿ ವಲಯದಲ್ಲಿ ಅಡಿಕೆ ಧಾರಣೆ ಸ್ಥಿರವಾಗಿದೆ.

ಕ್ಯಾಂಪ್ಕೋದಲ್ಲಿ ಚಾಲಿ ಹೊಸ ಅಡಿಕೆ 475 ,ಮಾಸ್‌- 485 ,ಪಿಂಗಾರ ಸಂಸ್ಥೆಯಲ್ಲಿ 485 ಹಾಗೂ ಖಾಸಗಿ ಮಾರುಕಟ್ಟೆಯಲ್ಲಿ 485 ರೂಪಾಯಿಗೆ ಖರೀದಿ ನಡೆಯುತ್ತಿದೆ. ಕ್ಯಾಂಪ್ಕೋ ಧಾರಣೆ ಮಾತ್ರಾ ಉಳಿದೆಲ್ಲಾ ಸಂಸ್ಥೆಗಳು, ಖಾಸಗಿ ಮಾರುಕಟ್ಟೆಗಿಂತ 10 ರೂಪಾಯಿ ಕಡಿಮೆ ಇದೆ.  ಹಳೆ ಚಾಲಿ ಅಡಿಕೆಗೆ 560 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಮಾಡುತ್ತಿದ್ದರೆ ಮಾಸ್‌- 560 ,ಪಿಂಗಾರ ಸಂಸ್ಥೆಯಲ್ಲಿ 565 ಹಾಗೂ ಖಾಸಗಿ ಮಾರುಕಟ್ಟೆಯಲ್ಲಿ 565-570 ರೂಪಾಯಿಗೆ ಖರೀದಿ ನಡೆಯುತ್ತಿದೆ.

ಚಾಲಿ ಪಠೋರಕ್ಕೆ ಸಹಜವಾಗಿಯೇ ಈಗ ಮಾರುಕಟ್ಟೆಯಲ್ಲಿ ಸ್ವಲ್ಪ ಬೇಡಿಕೆ ಕಡಿಮೆ ಇರುತ್ತದೆ. ಹಾಗೆಂದು ಧಾರಣೆ ಇಳಿಕೆ ಮಾಡುವಷ್ಟು ಬೇಡಿಕೆ ಕುಸಿತ ಇರುವುದಿಲ್ಲ. ಮಾರುಕಟ್ಟೆಯಲ್ಲಿ ಇಂತಹ ವ್ಯತ್ಯಾಸಗಳು ಸಹಜವಾಗಿಯೇ ಇರುತ್ತದೆ. ಅಡಿಕೆ ಧಾರಣೆ ಇನ್ನಷ್ಟು ಸ್ಥಿರತೆಯತ್ತ ಸಾಗುತ್ತಿದೆ. ಚೌತಿ ಬಳಿಕ ಹೊಸ ಅಡಿಕೆ ಮಾರುಕಟ್ಟೆ ಪ್ರವೇಶವಾಗುತ್ತದೆ. ಈ ಬಾರಿ ಮಳೆಯ ಕಾರಣದಿಂದ ಸ್ವಲ್ಪ ತಡವಾಗಿ ಅಡಿಕೆಯು ಮಾರುಕಟ್ಟೆ ಪ್ರವೇಶ ಮಾಡುತ್ತದೆ. ಈ ಸಂದರ್ಭದಲ್ಲಿ ಒಮ್ಮೆ ಅಡಿಕೆ ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗುವುದನ್ನು ಅಡಿಕೆ ಬೆಳೆಗಾರರು ಗಮನಿಸುವುದು ಉತ್ತಮ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು

ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…

31 minutes ago

ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ | ದೆಹಲಿಯಲ್ಲಿ GCWAS-2026 ಆರಂಭ

ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…

40 minutes ago

ಗೇರುಹಣ್ಣಿನ ಮೌಲ್ಯವರ್ಧನೆಗೆ ಕೈಗಾರಿಕಾ ಸಂಪರ್ಕ ಸಭೆ : ವ್ಯಾಪಾರೀಕರಣಕ್ಕೆ ಹೊಸ ವೇದಿಕೆ

ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…

10 hours ago

ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ ಗಂಭೀರತೆ : ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ

ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…

10 hours ago

ಭಾರತೀಯ ಕೊಕ್ಕೋಗೆ ಜಾಗತಿಕ ಮಟ್ಟದ ಮಾನ್ಯತೆ | ಈಗ ಮೌಲ್ಯವರ್ಧನೆಯೇ ರೈತರಿಗೆ ಹೊಸ ದಾರಿ

ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…

11 hours ago

ಹವಾಮಾನ ವರದಿ | 12-03-2026 | ಮಾರ್ಚ್‌ 14–15 ರಿಂದ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್‌ 14 ಅಥವಾ 15ರಿಂದ ಹಲವೆಡೆ…

20 hours ago