ಅಡಿಕೆ ಆಮದು ಚರ್ಚೆಯ ನಡುವೆಯೇ ಚಾಲಿ ಹಳೆ ಅಡಿಕೆ ಧಾರಣೆ ಮತ್ತೆ ಏರಿಕೆ ಕಂಡಿದೆ. 5 ರೂಪಾಯಿ ಏರಿಕೆಯಾದ ಬಳಿಕ ಚಾಲಿ ಹಳೆ ಅಡಿಕೆ ಧಾರಣೆ ಈಗ 485 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಮಾಡುತ್ತಿದೆ. ಇದೇ ವೇಳೆ ರಬ್ಬರ್ ಧಾರಣೆಯಲ್ಲೂ ಏರಿಕೆ ಕಂಡಿದೆ. ಸದ್ಯ ರಬ್ಬರ್ ಧಾರಣೆ 152 ರೂಪಾಯಿಗೆ ಏರಿಕೆಯಾಗಿದೆ.
ಹೊಸ ಚಾಲಿ ಅಡಿಕೆ ಮಾರುಕಟ್ಟೆಗೆ ಬರಲು ಆರಂಭವಾಗಿದ್ದು 380 ರೂಪಾಯಿಗೆ ಖರೀದಿ ನಡೆಯುತ್ತಿದೆ.ವಾರಗಳ ಹಿಂದೆ ಹಳೆ ಚಾಲಿ ಅಡಿಕೆ ಧಾರಣೆಯನ್ನು ಕ್ಯಾಂಪ್ಕೋ 5 ರೂಪಾಯಿ ಏರಿಕೆ ಮಾಡಿತ್ತು. ಇದೀಗ ಮತ್ತೆ 5 ರೂಪಾಯಿಗೆ ಏರಿಕೆ ಮಾಡುವ ಮೂಲಕ 485 ರೂಪಾಯಿಗೆ ಹಳೆ ಅಡಿಕೆ ಖರೀದಿ ನಡೆಸುತ್ತಿದೆ.ಚೋಲ್ ಅಡಿಕೆ 560 ರೂಪಾಯಿಗೆ ಖರೀದಿ ಮಾಡಲಾಗುತ್ತಿದೆ. ರಬ್ಬರ್ ಧಾರಣೆಯಲ್ಲಿ ಏರಿಕೆಯ ಲಕ್ಷಣ ಕಂಡಿದೆ. ಸದ್ಯ RSS4 ರಬ್ಬರ್ ಗೆ 152 ರೂಪಾಯಿ ಹಾಗೂ ಲಾಟ್ ರಬ್ಬರ್ ಗೆ 135 ರೂಪಾಯಿಗೆ ಖರೀದಿಯಾಗುತ್ತಿದೆ.
ಇದೇ ವೇಳೆ ಖಾಸಗಿ ವಲಯದಲ್ಲೂ ಅಡಿಕೆ ಮಾರುಕಟ್ಟೆಯಲ್ಲಿ ಏರಿಕೆಯ ವಾತಾವರಣ ಕಂಡಬಂದಿದೆ. ಸದ್ಯ ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಬೇಡಿಕೆ ವ್ಯಕ್ತವಾಗಿದೆ. ಆಮದು ಅಡಿಕೆಯು ಚಾಲಿ ಅಡಿಕೆಯ ಮೇಲೆ ಹಾಗೂ ಭಾರತದ ಅಡಿಕೆ ಮಾರುಕಟ್ಟೆಯಲ್ಲಿ ಸದ್ಯ ಯಾವುದೇ ಸಮಸ್ಯೆ ಬೀರುವುದಿಲ್ಲ. ಈ ವರ್ಷವೂ ಉತ್ತಮ ಧಾರಣೆ ಅಡಿಕೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಈ ನಡುವೆಯೇ ಚಿಲ್ಲರೆ ಪ್ರಮಾಣದಲ್ಲಿ ಅಡಿಕೆಯನ್ನು ಬರ್ಮಾ ಸೇರಿದಂತೆ ಇತರ ದೇಶಗಳಿಂದ ಕಳ್ಳ ಸಾಗಾಣಿಕೆ ಮೂಲಕ ತರಲಾಗುತ್ತಿದೆ. ಬಿಹಾರದಲ್ಲಿ ಪ್ಯಾಸೆಂಜರ್ ರೈಲಿನ ಸೀಟಿನ ಕೆಳಗೆ ಇರಿಸಿ ಸುಮಾರು 700 ಕೆಜಿಯಷ್ಟು ಅಡಿಕೆಯನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಲ್ಲಿನ ರೈಲ್ವೇ ಅಧಿಕಾರಿಗಳು ಪತ್ತೆ ಮಾಡಿ ಕಳ್ಳಸಾಗಣೆ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಹೀಗಾಗಿ ಈಗ ಅಡಿಕೆ ಕಳ್ಳ ಸಾಗಾಣಿಕೆ ತಡೆಯನ್ನು ಅಧಿಕಾರಿ ಮಾಡುತ್ತಲೇ ಇದ್ದಾರೆ. ಇದು ಅಡಿಕೆ ಮಾರುಕಟ್ಟೆಗೆ ಪೂರಕ ವಾತಾವರಣ ಸೃಷ್ಟಿ ಮಾಡಿದೆ.
ಅಡಿಕೆ ನಿಷೇಧಕ್ಕಿಂತ ಬಳಕೆಯ ನಿಯಂತ್ರಣವೇ ಪರಿಣಾಮಕಾರಿ ಎಂದು WHO ಅಭಿಪ್ರಾಯಪಟ್ಟಿದೆ. ಆಗ್ನೇಯ ಏಷ್ಯಾದ…
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…
ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…