ಕಳೆದ ಕೆಲವು ದಿನಗಳ ಬಳಿಕ ಚಾಲಿ ಅಡಿಕೆ ಮಾರುಕಟ್ಟೆ ಚೇತರಿಕೆ ಕಂಡಿದೆ. ಹಳೆ ಅಡಿಕೆ 480 ರೂಪಾಯಿ ಹಾಗೂ ಹೊಸ ಅಡಿಕೆ 408 ರೂಪಾಯಿಗೆ ಖರೀದಿ ನಡೆಯುತ್ತಿದೆ. ಇದೇ ವೇಳೆ ಖಾಸಗಿ ಮಾರುಕಟ್ಟೆಯಲ್ಲಿ ಹಳೆ ಅಡಿಕೆ 478 ರೂಪಾಯಿ ಹಾಗೂ ಹೊಸ ಅಡಿಕೆ 412 ರೂಪಾಯಿಗೆ ಖರೀದಿ ನಡೆಯುತ್ತಿದೆ. ಕೆಲವು ದಿನಗಳ ಬಳಿಕ ಕ್ಯಾಂಪ್ಕೋ ಧಾರಣೆಯಲ್ಲಿ ಒಮ್ಮೆಲೇ 7 ರೂಪಾಯಿ ಏರಿಕೆ ಕಂಡಿದೆ. ಮಳೆಗಾಲದ ಆರಂಭದ ಹೊತ್ತಿಗೆ ಸಹಜವಾಗಿಯೇ ಹೊಸ ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ ಕಾಣುತ್ತದೆ. ಈ ಬಾರಿಯೂ ಈ ಚೇತರಿಕೆ ಕಂಡಿದೆ. ಭಾರೀ ಮಳೆಯಾಗುವ ಮುನ್ನ ಒಂದು ಹಂತದ ಧಾರಣೆ ಏರಿಕೆ ಕಾಣುತ್ತದೆ. ಈ ಬಾರಿಯೂ ಈ ಟ್ರೆಂಡ್ ಮುಂದುವರಿದಿದೆ. ಸದ್ಯದ ನಿರೀಕ್ಷ ಪ್ರಕಾರ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಉತ್ತಮ ಧಾರಣೆಯ ನಿರೀಕ್ಷೆ ಇದೆ. ಹಳೆ ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ಏರಿಕೆಯ ಲಕ್ಷಣಗಳು ಕಾಣುತ್ತಿಲ್ಲ.
970 ರ ದಶಕದಿಂದ ಹಿಡಿದು ಈ ತನಕ ಇಲಾಖೆಗಳು,ಸರಕಾರಗಳು,ಹಿರಿಯರು ಹೇಳುತ್ತಾ ಬಂದದ್ದು ವಿಸ್ತರಣೆ…
ಹಲಸಿನ ಬೀಜದ ಚಟ್ಟಂಬಡೆ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : …
ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ, ಮನೆಯ ಗೋಡೆಗಳ ಬಣ್ಣವು ಕೇವಲ ಸೌಂದರ್ಯಕ್ಕೆ ಸೀಮಿತವಾಗಿಲ್ಲ,…
ನೀರು ಕಲ್ಲಿಗಿಂತ ಮೆದುವಾದರೂ, ನಿರಂತರತೆಯಿಂದ ಕಲ್ಲನ್ನೂ ಕೊರೆಯಬಲ್ಲದು. ನಿರಂತರತೆಗೆ ಇರುವ ಶಕ್ತಿ ಅಪಾರ.…
ಸುಚನ್ಯ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಕಡಬ , | ಕ್ರಿಯೇಟಿವ್…
ಪೃಥ್ವಿ ಜಿ ಎಂ, 6 ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಸುಬ್ರಹ್ಮಣ್ಯ |…