ಅಡಿಕೆ ಧಾರಣೆ ಸದ್ಯ ಸ್ಥಿರವಾಗಿದೆ. ಈ ನಡುವೆಯೇ ಅಡಿಕೆ ಅಕ್ರಮ ಸಾಗಾಟ, ಅಡಿಕೆ(Arecanut) ಆಮದು ಚಟುವಟಿಕೆ ನಡೆಯುತ್ತಲೇ ಇದೆ. ಇಲಾಖೆಗಳು ತಡೆಯೊಡ್ಡುತ್ತಲೇ ಇವೆ. ಅಕ್ಟೋಬರ್ ಹಾಗೂ ನವೆಂಬರ್ ತಿಂಗಳು ಅಡಿಕೆ ಸಾಗಾಟದ ಪ್ರಮುಖ ತಿಂಗಳು. ಇದೀಗ ಎರಡು ತಿಂಗಳಿನಿಂದ ಬರ್ಮಾ ಅಡಿಕೆ, ವಿದೇಶದಿಂದ ವಿವಿಧ ಹೆಸರಿನಲ್ಲಿ ಅಡಿಕೆ ಆಮದು ಪ್ರಯತ್ನ ನಡೆಯುತ್ತಿದೆ. ಈ ಎಲ್ಲದರ ನಡುವೆಯೇ 42 ಟನ್ ಅಡಿಕೆ ಅಸ್ಸಾಂನಲ್ಲಿ ತಡೆಯಾಗಿದೆ.
ಸಾಮಾನ್ಯವಾಗಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳು ಅಕ್ರಮ ಅಡಿಕೆ ಸಾಗಾಟದ, ಆಮದು ಮಾಡುವ ತಿಂಗಳು. ಹಳೆ ಅಡಿಕೆ ಮುಗಿಯುವ ಹಾಗೂ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರುವ ಸಮಯ. ಅದೇ ಸಮಯಕ್ಕೆ ಹೊಸದಾದ ಅಡಿಕೆ ಮಾರುಕಟ್ಟೆಗೆ ಬರುವ ಸಮಯ. ಚಾಲಿ ಅಡಿಕೆ ಹಾಗೂ ಕೆಂಪಡಿಕೆಯೂ ಮಾರುಕಟ್ಟೆ ಪ್ರವೇಶ ಮಾಡುವ ಸಮಯ. ಇದೇ ಸಮಯಕ್ಕೆ ಸರಿಯಾಗಿ ಕಡಿಮೆ ಗುಣಮಟ್ಟದ ಅಡಿಕೆಯನ್ನು ಕಡಿಮೆ ದರದಲ್ಲಿ ಆಮದು ಮಾಡಿ, ಕಳ್ಳದಾರಿಯ ಮೂಲಕ ಸಾಗಾಟ ಮಾಡಿ ಇಲ್ಲಿನ ಅಡಿಕೆಯ ಜೊತೆಗೆ ಬೆರೆಸಿ ಉತ್ತಮ ಧಾರಣೆಗೆ ಮಾರಾಟ ಮಾಡುವ ಪ್ರಕ್ರಿಯೆ ಈಚೆಗೆ ಎರಡು ವರ್ಷಗಳಿಂದ ಸಕ್ರಿಯವಾಗಿದೆ. ಧಾರಣೆ ಏರಿಕೆಯ ಬಳಿಕ ಇಂತಹ ಸವಾಲುಗಳು ಅಡಿಕೆ ಬೆಳೆಗಾರರಿಗೆ ಇದೆ. ಅಡಿಕೆ ಮಾರುಕಟ್ಟೆಯನ್ನು ಹಾಳು ಮಾಡುವ ಹಾಗೂ ಯಾರೋ ಕೆಲವು ಮದ್ಯವರ್ತಿಗಳು ಅಡಿಕೆ ಮಾರುಕಟ್ಟೆಯ ಮೂಲಕ ಲಾಭ ಪಡೆಯುವ ಹುನ್ನಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿಯೇ ಕಳೆದ ಎರಡು ತಿಂಗಳಲ್ಲಿ ಅನೇಕ ಕಳ್ಳಸಾಗಾಟದ ಅಡಿಕೆಯ ಪ್ರಕರಣ ಬಯಲಿಗೆ ಬಂದಿದೆ. ಇದೀಗ ಆರು ಟ್ರಕ್‌ಗಳಲ್ಲಿ ತುಂಬಿದ್ದ ಸುಮಾರು 42 ಟನ್ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಅಸ್ಸಾಂ ರೈಫಲ್ಸ್ ಪ್ರಮುಖ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದೆ.
ನವೆಂಬರ್ ಮಧ್ಯದವರೆಗೆ ಅಂದರೆ ದೀಪಾವಳಿವರೆಗೂ ಈ ಆಟ ನಡೆಯುವ ಸಾಧ್ಯತೆ ಇದೆ. ಅದಾದ ನಂತರ ಅಡಿಕೆ ಅಕ್ರಮ ಆಮದು ಮೇಲೆ ಕಡಿವಾಣವೂ ಹೆಚ್ಚಾಗಲಿದೆ. ಇಲ್ಲಿನ ಅಡಿಕೆಯೂ ಮಾರುಕಟ್ಟೆಗೆ ಸರಿಯಾಗಿ ಪ್ರವೇಶ ಮಾಡಲಿದೆ. ಹೀಗಾಗಿ ಅಡಿಕೆ ಧಾರಣೆ, ಅಡಿಕೆ ಮಾರುಕಟ್ಟೆ ಉಳಿಸುವಲ್ಲಿ ಇಲ್ಲಿನ ಅಡಿಕೆ ಬೆಳೆಗಾರರು ಈಗ ಮಹತ್ವದ ಪಾತ್ರವನ್ನು ವಹಿಸಿಕೊಳ್ಳಬೇಕಿದೆ.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?